ಹಡಗಿನಲ್ಲಿ ತಪ್ಪಿ ಮಂಗಳೂರಿಗೆ ಬಂದಿದ್ದ ಬಾಲಕ ಸೇರಿದಂತೆ ಇಬ್ಬರು ಮನೆಯವರು ಕರೆದುಕೊಂಡು ಹೋಗುವ ಮುಂಚೆ ನಾಪತ್ತೆ!
Tuesday, November 30, 2021
ಮಂಗಳೂರು : ಮಂಗಳೂರಿನ ಬೋಂದೆಲ್‌ನಲ್ಲಿರುವ ಬಾಲಕರ ಬಾಲ ಮಂದಿರದಿಂದ ನ . 28 ರ ಮುಂಜಾನೆ ಸ್ಯಾಮವೆಲ್ ಟೊಪ್ಪು ( 16 ) ಮತ್ತು ವಡಲಮನಿ ಚಿರಂಜೀವಿ ( 16 ) ಎಂಬ ಇಬ್ಬರು ಬಾಲಕರುನಾಪತ್ತೆಯಾದ ಘಟನೆ ನಡೆದಿದೆ .
ವಡಲಮನಿ ಚಿರಂಜೀವಿ ಹಡಗಿನ ಒಳಗೆ ಮಲಗಿಕೊಂಡು ಮಂಗಳೂರು ತಲುಪಿದ್ದ .ಈತ ಆಂಧ್ರ ಪ್ರದೇಶ ದವನಾಗಿದ್ದು ವಿಶಾಖ ಪಟ್ಟಣ ಬಂದರಿನಿಂದ ಹಡಗಿನ ಮೂಲಕ ಮಂಗಳೂರಿಗೆ ಬಂದಿದ್ದ. ಈತ ಬಂದರಿನಲ್ಲಿ ವಿಶಾಖಪಟ್ಟಣ ಕೆಲಸಕ್ಕೆಂದು ತೆರಳಿದ್ದು ಹಡಗಿನ ಒಳಗೆ ಆಕಸ್ಮಿಕವಾಗಿ ಹೋಗಿದ್ದನು . ಇದನ್ನು ಹಡಗಿನ ಸಿಬ್ಬಂದಿ ಗಮನಿಸಿರಲಿಲ್ಲ . ಕಲ್ಲಿದ್ದಲು ತುಂಬಿದ್ದ ಹಡಗು ಅನಂತರ ಮಂಗಳೂರಿಗೆ ಬಂದಿತ್ತು . ಹಡಗಿನ ಸಿಬಂದಿ ಮಂಗಳೂರು ಬಂದರಿನಲ್ಲಿ ಈತನನ್ನು ಇಳಿಸಿ ಕರಾವಳಿ ಕಾವಲು ಪೊಲೀಸರಿಗೆ ದೂರನ್ನು ನೀಡಿದ್ದರು . ವಿಚಾರಣೆ ವೇಳೆ ಈ ಯುವಕ ತಾನು ಆಕಸ್ಮಿಕವಾಗಿ ಹಡಗಿನ ಒಳಗೆ ಹೋಗಿದ್ದು ಅನಂತರ ನಿದ್ದೆ ಬಂದಿತ್ತು ಎಂದು ಹೇಳಿದ್ದಾನೆ . ಈತ ಕಳೆದ ಶುಕ್ರವಾರ ಮಂಗಳೂರು ತಲುಪಿದ್ದು ಈತನನ್ನು ಕರಾವಳಿ ಕಾವಲು ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಯವರಿಗೆ ಒಪ್ಪಿಸಿದ್ದರು . ಬಾಲಮಂದಿರದಲ್ಲಿ ಈತನನ್ನು ಇಟ್ಟುಕೊಂಡು ಮನೆಗೆ ತಲುಪಿಸಲು ಸಿದ್ಧತೆ ನಡೆದಿತ್ತು . ಅಷ್ಟರಲ್ಲಿ ಈತ ತಪ್ಪಿಸಿಕೊಂಡಿದ್ದಾನೆ .
ಸ್ಯಾಮುವಲ್ ಟೊಪ್ಪು ಎಂಬಾತ ಮೂಲತಃ ಛತ್ತೀಸ್‌ಗಡದವನು . ಈತ ಸುರತ್ಕಲ್ ಮೀನು ಸಂಸ್ಕರಣ ಘಟಕವೊಂದರಲ್ಲಿ ಬಾಲಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾಗ ಕಾರ್ಮಿಕ ಇಲಾಖೆಯವರು ಅಕ್ಟೋಬರ್‌ನಲ್ಲಿ ಹಚ್ಚಿದ್ದರು . ಆತನನ್ನು ಪತ್ತೆ ಬಾಲಮಂದಿರದಲ್ಲಿ ಮನೆಯವರಿಗೆ ಇಟ್ಟು ಮಾಹಿತಿ ನೀಡ ಇಬ್ಬರೂ ಲಾಗಿತ್ತು .
ಈ ಇಬ್ಬರು ಬಾಲಕರ ಮನೆಯವರಿಗೆ ಮಾಹಿತಿ ನೀಡಲಾಗಿತ್ತು. ಮನೆಯವರು ಬರುವ ಮುಂಚೆಯೇ ಈ ಬಾಲಕರಿಬ್ಬರು ನಾಪತ್ತೆಯಾಗಿದ್ದಾರೆ.