ಮದುವೆಯಾಗಲಿದ್ದಾರಂತೆ ಮೌನಿ ರಾಯ್... ಗೆಳೆಯ ಸೂರಜ್ ನಂಬಿಯಾರ್ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ
Tuesday, November 30, 2021
ಮುಂಬೈ: ಬಾಲಿವುಡ್ನಲ್ಲೀಗ ಮದುವೆ ಸೀಸನ್ ಆರಂಭವಾಗಿದೆ. ಇತ್ತೀಚೆಗಷ್ಟೇ, ನಟ ರಾಜಕುಮಾರ್ ರಾವ್ ಮತ್ತು ಪತ್ರಲೇಖಾ ವಿವಾಹವಾಗಿದೆ. ಡಿಸೆಂಬರ್ನಲ್ಲಿ ಕತ್ರಿನಾ ಕೈಫ್ - ವಿಕ್ಕಿ ಕೌಶಲ್ ಜೋಡಿಯ ಮದುವೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ನಲ್ಲಿಯೇ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ವಿವಾಹ ನಡೆಯಲಿದೆ ಎಂದು ಹೇಳಲಾಗಿದೆ. ಹೀಗಿರುವಾಗಲೇ, ಬಾಲಿವುಡ್ನ ಹಾಟ್ ಬೆಡಗಿ ಮತ್ತು ‘ಕೆಜಿಎಫ್’ ಚಿತ್ರದ ಹಿಂದಿ ಅವತರಣಿಕೆಯ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿಯಾದ ಮೌನಿ ರಾಯ್ ಸಹ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.
ನಾಗಿಣಿ ಶಿವಾಂಗಿಯಾಗಿ ಕಿರುತೆರೆ ಮೂಲಕ ಜನರನ್ನು ರಂಜಿಸಿದ್ದ ಮೌನಿ ರಾಯ್ ಇದೀಗ ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ರನ್ನು ವರಿಸಲಿದ್ದಾರೆ. ಇವರಿಬ್ಬರು ಈ ವರ್ಷವೇ ವಿವಾಹವಾಗಲಿದ್ದಾರೆಂಬ ಸುದ್ದಿ ಕಳೆದ ಫೆಬ್ರವರಿಯಿಂದ ಕೇಳಿಬರುತ್ತಲೇ ಇದೆ.
ಈ ವಿಚಾರವಾಗಿ ಮಹತ್ವದ ಸುದ್ದಿಯೊಂದು ಕೇಳಿಬರುತ್ತಿದೆ. ಹಾಗಾದರೆ, ಈ ಜೋಡಿಯ ವಿವಾಹ ಯಾವಾಗ ಎಂದು ನೋಡಿದರೆ ಸದ್ಯದ ಪ್ಲಾನ್ ಪ್ರಕಾರ 2022ರ ಜನವರಿ 26 ಮತ್ತು 27ಕ್ಕೆ ಮದುವೆ ನಡೆಯಲಿದೆಯಂತೆ. ಮತ್ತಷ್ಟು ಮಾಹಿತಿ ಇನ್ನಷ್ಟೆ ತಿಳಿಯಬೇಕಾಗಿದೆ.