ಪುಟ್ಟ ಮಗಳನ್ನೇ ಬರ್ಬರವಾಗಿ ಹತ್ಯೆಮಾಡಿ ತಾನೂ ನೇಣಿಗೆ ಶರಣಾದ ತಂದೆ
Friday, November 5, 2021
ಕಲಬುರಗಿ: ಯುವಕನೋರ್ವನು ಹುಟ್ಟಿಸಿರುವ ಪುಟ್ಟ ಮಗಳನ್ನೇ ಕೊಂದು ತಾನೂ ಆತ್ಮಹತ್ಯೆಗೈದಿರುವ ಹೇಯಕೃತ್ಯವೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಪ್ಪಾರವಾಡಿಯಲ್ಲಿ ನಡೆದಿದೆ.
ಅರ್ಜುನ್(26) ಎಂಬಾತ ಮಗಳನ್ನೇ ಕೊಂದು ತಾನೂ ನೇಣಿಗೆ ಶರಣಾದವನು. ಪೂನಮ್(4) ತಂದೆಯಿಂದಲೇ ಹತ್ಯೆಗೀಡಾಗಿರುವ ದುರ್ದೈವಿ ಬಾಲಕಿ.
ಇತ್ತೀಚಿಗೆ ತಾವು ಸಾಯುವುದಲ್ಲದೆ ಅದಕ್ಕೂ ಮೊದಲು ತಮ್ಮೊಂದಿಗಿರುವ ಕುಟುಂಬಸ್ಥರ ಜೀವವನ್ನೂ ಕೊನೆಗಾಣಿಸುವಂಥ ಹೇಯಕೃತ್ಯಗಳು ಸಮಾಜದಲ್ಲಿ ಹೆಚ್ಚಾಗುತ್ತಿದೆ. ಇದೂ ಅಂತಹದ್ದೇ ಒಂದು ಕೃತ್ಯ. ಮೃತ ಅರ್ಜುನ್ ಉಪ್ಪರವಾಡಿಯಲ್ಲಿನ ತನ್ನ ಪತ್ನಿಯ ಮನೆಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದ. ಮೊನ್ನೆ ರಾತ್ರಿ ಮಗಳನ್ನು ಹೊಲಕ್ಕೆ ಕರೆದೊಯ್ದ ಈತ ಆಕೆಯನ್ನೂ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೃತ್ಯ ಎಸಗಿರುವುದಕ್ಕಿಂತ ಮೊದಲು ಆತ ಮದ್ಯಪಾನ ಮಾಡಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.