
ಇಸಿಜಿ ಮಾಡಿಸಲು ಬಂದ ಯುವತಿಯ ನಗ್ನ ವೀಡಿಯೋ ಚಿತ್ರೀಕರಣ: ತನಿಖೆಗೈದ ಪೊಲೀಸರಿಗೆ ಬಿಗ್ ಶಾಕ್
Sunday, November 14, 2021
ಗುಂಟೂರು: ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಬಂದಿರುವ ಯುವತಿಗೆ ಇಸಿಜಿ ಕೊಠಡಿಯೊಳಗೆ ಬಟ್ಟೆ ಬಿಚ್ಚಲು ಹೇಳಿ ಅಸಭ್ಯವಾಗಿ ವರ್ತಿಸಿ ವೀಡಿಯೋ ಚಿತ್ರೀಕರಣ ಮಾಡಿರುವ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಈ ರೀತಿಯ ಘಟನೆ ಆಂಧ್ರ ಪ್ರದೇಶದ ಗುಂಟೂರು ಸರಕಾರಿ ಆಸ್ಪತ್ರೆಯ ಇಸಿಜಿ ಕೊಠಡಿಯಲ್ಲಿ ನಡೆದಿದೆ. ಆಸ್ಪತ್ರೆಗೆ ಸಂಬಂಧ ಪಡದ ವ್ಯಕ್ತಿ ಇಸಿಜಿ ಕೊಠಡಿಯೊಳಗೆ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪಿ ಆಸ್ಪತ್ರೆಯ ಸಿಬ್ಬಂದಿಯೇ ಅಲ್ಲವೆಂದು ತಿಳಿದು ಪೊಲೀಸರು ಒಂದು ಕ್ಷಣ ಅವಕ್ಕಾಗಿದ್ದಾರೆ.
ಗುಂಟೂರು ಜಿಲ್ಲೆಯ ಪಾತಗುಂಟೂರಿನ 19 ವರ್ಷದ ಯುವತಿಯೋರ್ವಳು ಅನಾರೋಗ್ಯಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ತಪಾಸಣೆ ಮಾಡಿರುವ ವೈದ್ಯರು ಇಸಿಜಿ ಮಾಡಿಸುವಂತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಂಟೂರು ಸರಕಾರಿ ಆಸ್ಪತ್ರೆಗೆ ಇಸಿಜಿ ಮಾಡಿಸಲು ಯುವತಿ ತನ್ನ ತಂದೆಯೊಂದಿಗೆ ಬಂದಿದ್ದಾಳೆ.
ಇಸಿಜಿ ಕೊಠಡಿಗೆ ಹೋದ ಸಂದರ್ಭ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹರೀಶ್ ಅನ್ನುವ ಸಿಬ್ಬಂದಿ, ಮೈಮೇಲಿನ ಬಟ್ಟೆಯನ್ನು ತೆಗೆಯುವಂತೆ ಹೇಳಿದ್ದಾನೆ. ಇದಕ್ಕೆ ಯುವತಿ ಅಸಮ್ಮತಿ ಸೂಚಿಸಿದ್ದಾಳೆ. ಆದರೆ ಆತ ನಿಮ್ಮ ಸಮಸ್ಯೆ ತಿಳಿಬೇಕಂದ್ರೆ ವಿವಸ್ತ್ರಳಾಗಬೇಕು ಎಂದು ಹೇಳಿದ್ದಾನೆ. ಆದರೆ ಯುವತಿ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾಳೆ. ಆದರೆ ಹರೀಶ್ ಬಲವಂತವಾಗಿ ಆಕೆಯ ಬಟ್ಟೆ ತೆಗೆಯುವಂತೆ ಹೇಳಿ ಬಳಿಕ ವೀಡಿಯೋ ಚಿತ್ತೀಕರಿಸಿದ್ದಾನೆ.
ಇದರಿಂದ ಮನನೊಂದ ಯುವತಿ ಕೊಠಡಿಯಿಂದ ಹೊರಬಂದು ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸ್ಥಳಕ್ಕೆ ಬಂದ ಕೊತ್ತಪೇಟ ಪೊಲೀಸರು ಪರಿಶೀಲನೆ ನಡೆಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಯಾಕೆಂದರೆ ಇಸಿಜಿ ಕೊಠಡಿಯಲ್ಲಿ ಶಂಕರ್ ಎಂಬ ಸಿಬ್ಬಂದಿಯ ಬದಲು ಅನ್ಯವ್ಯಕ್ತಿ ಆರೋಪಿ ಹರೀಶ್ ಕಾರ್ಯನಿರ್ವಹಿಸುತ್ತಿದ್ದ.
ವಿಚಿತ್ರವೆಂದರೆ ಆತ ಆಸ್ಪತ್ರೆಯ ಸಿಬ್ಬಂದಿಯೇ ಅಲ್ಲ. ಈ ಕುರಿತು ಶಂಕರ್ಗೆ ಕರೆಮಾಡಿ ವಿಚಾರಿಸಿದಾಗ ಹರೀಶ್ ಯಾರು ಎಂಬುದು ತನಗೆ ಗೊತ್ತಿಲ್ಲ. ತಾನು ಆರೋಗ್ಯ ನಿಮಿತ್ತ ರಜೆ ಹಾಕಿದ್ದು, ತರಬೇತಿ ಟೆಕ್ನಿಷಿಯನ್ಗೆ ಇಸಿಜಿ ನೋಡಿಕೊಳ್ಳಲು ಹೇಳಿದ್ದೇನೆ ಎಂದಿದ್ದಾನೆ.
ಸದ್ಯ ಕಾಮುಕ ಹರೀಶ್ನನ್ನು ಪೊಲೀಸರ ವಶಪಡಿಸಿಕೊಂಡಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.