ಪ್ರಿಯತಮನೊಂದಿಗೆ ಅಮೀರ್ ಖಾನ್ ಪುತ್ರಿಯ ದೀಪಾವಳಿ ಸಂಭ್ರಮ: ಫೋಟೋ ವೈರಲ್
Saturday, November 6, 2021
ಮುಂಬಯಿ: ಬಾಲಿವುಡ್ ನಟ ಅಮಿರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಪ್ರಿಯತಮ ನೂಪುರ್ ಶಿಖರೆ ಹಾಗೂ ಆತನ ತಾಯಿ ಪ್ರೀತಮ್ ಶಿಖರೆ ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿರುವ ಫೋಟೋಗಳು ವೈರಲ್ ಆಗುತ್ತಿದೆ.
ಇರಾ ಖಾನ್ ಸುಂದರವಾದ ರೇಷ್ಮೆ ಸೀರೆಯನ್ನು ಉಟ್ಟುಕೊಂಡಿದ್ದು, ಮೂವರು ಜೊತೆಯಾಗಿ ನಿಂತು ದೀಪಾವಳಿಯನ್ನು ಆಚರಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಇರಾ ಖಾನ್ ಪ್ರಿಯಕರ ಫಿಟ್‌ನೆಸ್ ತರಬೇತುದಾರ ನೂಪುರ್ ಶಿಖರೆ ಈ ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಮೂವರೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ.
ಇರಾ ಖಾನ್ ವರ್ಷದ ಆರಂಭದಲ್ಲಿ 'ಪ್ರಾಮಿಸ್ ಡೇ' ಸಂದರ್ಭ ಇನ್‌ಸ್ಟಾಗ್ರಾಮ್‌ನಲ್ಲಿ ಗೆಳೆಯ ನೂಪುರ್ ಶಿಖರೆ ಅವರೊಂದಿಗಿನ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದರು. 24 ರ ಹರೆಯದ ಇರಾ ಖಾನ್, ಅಮೀರ್ ಖಾನ್ ಹಾಗೂ ಅವರ ಮೊದಲ ಪತ್ನಿ ರೀನಾ ದತ್ತಾ ಪುತ್ರಿ, ಇರಾ ಖಾನ್ ಗೆ ಜುನೈದ್ ಎಂಬ ಸಹೋದರನೂ ಇದ್ದಾನೆ.
ಇರಾ ಖಾನ್ 2019 ರಲ್ಲಿ ‘ಯೂರಿಪಿಡ್ಸ್’ ಮೀಡಿಯಾ’ ಎಂಬ ಸ್ಟೇಜ್ ಪ್ರೊಡಕ್ಷನ್‌ನೊಂದಿಗೆ ತನ್ನ ಚೊಚ್ಚಲ ನಿರ್ದೇಶನದ ಮೂಲಕ ಶೋಬಿಜ್‌ಗೆ ಕಾಲಿತ್ತಿದ್ದರು.