UP pre Election survey report - ಉತ್ತರ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆ: ಅಂಕಿ ಅಂಶಗಳು ಹೇಳುತ್ತಿರುವುದೇನು..?
ಉತ್ತರ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆ: ಅಂಕಿ ಅಂಶಗಳು ಹೇಳುತ್ತಿರುವುದೇನು..?
ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣ ಪೂರ್ವ ಸಮೀಕ್ಷೆಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಎಬಿಪಿ ನಡೆಸಿದ ಸರ್ವೇಯಲ್ಲಿ ಬಿಜೆಪಿಗೆ ಸ್ವಲ್ಪ ಸಿಹಿ.. ಸ್ವಲ್ಪ ಕಹಿ. ಉತ್ತರ ಪ್ರದೇಶದಲ್ಲಿ ಕಮಲ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಆದರೆ, ಸೀಟು ಗಳಿಕೆಯಲ್ಲಿ ಭಾರೀ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ ಗಳಿಕೆಯಲ್ಲಿ ಪ್ರಗತಿ ದಾಖಲಿಸಿದ್ದು, ಬಿಜೆಪಿಗೆ ಎದಿರೇಟು ನೀಡಲಿದೆ. ಇನ್ನು ಪ್ರಿಯಾಂಕ ಗಾಂಧಿ ಮುನ್ನಡೆಸುವ ಕಾಂಗ್ರೆಸ್‌ನಲ್ಲಿ ಮತ ಗಳಿಕೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ.
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ದೊಡ್ಡ ಹೊಡೆತ ಅನುಭವಿಸಲಿದೆ. ಈ ಪಕ್ಷ ಅಷ್ಟು ಉತ್ತಮ ನಿರ್ವಹಣೆ ಮಾಡಲಾರದು ಎನ್ನುತ್ತಿವೆ ಸಮೀಕ್ಷೆಗಳು...
ಕಳೆದ ಅವಧಿಯಲ್ಲಿ 41.4 ಮತ ಗಳಿಸಿದ್ದ ಬಿಜೆಪಿ ಈ ಬಾರಿ 40.7ರಷ್ಟು ಮತ ಗಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 325 ಸ್ಥಾನ ಗಳಿಸಿದ್ದ ಬಿಜೆಪಿ 213ರಿಂದ 221ರಷ್ಟು ಸ್ಥಾನ ಗೆಲ್ಲಬಹುದು.
ಸಮಾಜವಾದಿ ಪಕ್ಷ 152ರಿಂದ 160 ಸ್ಥಾನ ಗೆಲ್ಲಬಹುದು ಎನ್ನಲಾಗಿದೆ.