Priyank Vs Simha - ಕ್ಷಮೆ ಕೇಳದಿದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೀತೇವೆ: ಸುಲಫಲ ಮಠದ ಸ್ವಾಮೀಜಿ ವಾರ್ನಿಂಗ್
ಕ್ಷಮೆ ಕೇಳದಿದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೀತೇವೆ: ಸುಲಫಲ ಮಠದ ಸ್ವಾಮೀಜಿ ವಾರ್ನಿಂಗ್
ಪ್ರಿಯಾಂಕ್ ಖರ್ಗೆ ವಿರುದ್ಧ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡಿದ ಸಂಸದ ಪ್ರತಾಪ್ ಸಿಂಹ 15 ದಿನದೊಳಗೆ ಕ್ಷಮೆ ಕೇಳದಿದ್ದರೆ, ಅವರ ಮನೆಗೆ ಹೋಗಿ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೆಯುತ್ತೇವೆ ಎಂದು ಸುಲಫಲ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ಸಂಸದ ಪ್ರತಾಪ್ ಸಿಂಹ ನೀಡಿದ್ದ ಅವಹೇಳನಾಕಾರಿ ಹೇಳಿಕೆ ವಿರೋಧಿಸಿ ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದ್ದರು.
ದಲಿತರ ಬಗ್ಗೆ ಮಾತನಾಡುವಾಗ ನಿಮ್ಮ ನಾಲಿಗೆ ಹಿಡಿತದಲ್ಲಿ ಇರಬೇಕು. ಇದು ನಮ್ಮ ಆವೇಶದ ಮಾತಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಕುಡಿಗಳ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ. 15 ದಿನಗಳ ಗಡುವು ಕೊಡುತ್ತೇವೆ. ನಿಮ್ಮ ಹೇಳಿಕೆ ಪಶ್ಚಾತ್ತಾಪ ಪಟ್ಟು ಕ್ಷಮೆ ಕೇಳಿ ಇಲ್ಲವಾದರೆ, ಮೈಸೂರಿನ ನಿಮ್ಮ ಮನೆಗೆ ಬಂದ ಚಡ್ಡಿ ಬಿಚ್ಚಿ ಚಪ್ಪಲಿಯಲ್ಲಿ ಹೊಡೆಯುತ್ತೇವೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸಮಾಜದ ಸದ್ಯ ‘ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ’ ಎಂಬಂತೆ ಸಾಗುತ್ತಿರುವುದು ಆತಂಕವನ್ನುಂಟು ಮಾಡಿದೆ. ವಿವಾದಾತ್ಮಕ ಹೇಳಿಕೆಗಳಿಗೆ ವಿವಾದಾತ್ಮಕ ಉತ್ತರ ಕೂಡ ಬರುತ್ತಿದ್ದು, ಯಾರು ಸರಿ? ಯಾರು ತಪ್ಪು ಎನ್ನುವುದೇ ಜನರಿಗೆ ಪ್ರಶ್ನೆಯಾಗಿ ಪರಿಣಮಿಸಿದೆ.