
ಮಂಗಳೂರಿನಲ್ಲಿ ವೈರಲ್ ಆಯಿತು ವೈದ್ಯಾಧಿಕಾರಿಯ ರಾಸಲೀಲೆ!
Friday, November 26, 2021
ಮಂಗಳೂರು; ವೈದ್ಯಾಧಿಕಾರಿ ಯೊಬ್ಬರು ತನ್ನ ಕಚೇರಿಯ ಮಹಿಳಾ ಸಿಬ್ಬಂದಿಗಳೊಂದಿಗೆ ಚೆಲ್ಲಾಟ ನಡೆಸುತ್ತಿರುವ ವಿಡಿಯೋ ಮತ್ತು ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಯುಷ್ಮಾನ್ ನೋಡಲ್ ಆಫೀಸರ್, ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ ರತ್ನಾಕರ್ ಅವರು ಮಹಿಳಾ ಸಿಬ್ಬಂದಿ ಗಳ ಜೊತೆಗೆ ಚೆಲ್ಲಾಟವಾಡುತ್ತಿರುವ ಪೊಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 9 ಮಂದಿ ಮಹಿಳಾ ಸಿಬ್ಬಂದಿ ಗಳೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿರುವ ಪೊಟೋ ಮತ್ತು ವಿಡಿಯೋ ಗಳು ಲಭ್ಯವಾಗಿದೆ.
ರತ್ನಾಕರ್ ಜೊತೆಗೆ ಸಹಕರಿಸದ ಇತರ ಮಹಿಳಾ ಸಿಬ್ಬಂದಿಗಳಿಗೆ ಈತ ಟಾರ್ಚರ್ ನೀಡುತ್ತಿದ್ದ ಎಂಬ ಮಾಹಿತಿ ಬಂದಿದ್ದು, ಹಲವು ಮಹಿಳಾ ಸಿಬ್ಬಂದಿ ಗಳನ್ನು ಕರೆದುಕೊಂಡು ಪ್ರವಾಸಕ್ಕೆ ತೆರಳುತ್ತಿದ್ದ ಎಂದು ತಿಳಿದುಬಂದಿದೆ