
ಮನೆಯಲ್ಲಿಯೇ ಇದ್ದರೆ ಇನ್ನೊಂದಿಷ್ಟು ಮಕ್ಕಳಾಗುತ್ತವೆ ಎಂಬ ಭಯವಿದೆ : ಸೈಫ್ ಅಲಿಖಾನ್
Friday, November 12, 2021
ಮುಂಬೈ: ಬಾಲಿವುಡ್ ನಟ - ನಟಿಯರಲ್ಲಿ ಹೆಚ್ಚಿನವರು ತಮ್ಮ ನಟನೆಯ ಜೊತೆಗೆ ತಮ್ಮ ಬೋಲ್ಡ್ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ಇದೀಗ ನಟ ಸೈಫ್ ಅಲಿಖಾನ್
ಈ ಸರದಿಯಲ್ಲಿದ್ದು, ತಮ್ಮ ಬೋಲ್ಡ್ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ.
ಹೌದು ಈಗಾಗಲೇ ಇಬ್ಬರು ಮಡದಿಯರಿಂದ ನಾಲ್ವರು ಮಕ್ಕಳನ್ನು ಹೊಂದಿರುವ ಸೈಫ್ ಅಲಿಖಾನ್ ಇನ್ನೂ ಹೆಚ್ಚು ಕಾಲ ಮನೆಯಲ್ಲಿ ಇದ್ದರೆ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತದೆ ಎನ್ನುವ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.
ಹಿಂದಿಯಲ್ಲಿ ಮೂಡಿ ಬರುತ್ತಿರುವ ಕಪಿಲ್ ಶರ್ಮಾ ನಡೆಸುತ್ತಿರುವ ಶೋ ನಲ್ಲಿ ರಾಣಿ ಮುಖರ್ಜಿ, ಸಿದ್ದಾರ್ಥ್ ಚತುರ್ವೇದಿ, ಶಾರ್ವರಿ ವಾಘ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಕಪಿಲ್ ಶರ್ಮಾರೊಂದಿಗೆ ಹಾಸ್ಯವಾಗಿ ಮಾತನಾಡುವ ವೇಳೆ ಸೈಫ್ ಅಲಿ ಖಾನ್ ಈ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಅವರು, ಈಗಾಗಲೇ ತಾವು ನಾಲ್ವರು ಮಕ್ಕಳನ್ನು ಹೊಂದಿರುವ ತಾವು ಇನ್ನೂ ಮಕ್ಕಳನ್ನು ಪಡೆಯುವ ಒತ್ತಡ ಏನಾದರೂ ಇದೆಯೇ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೈಫ್ ಅಲಿ ಖಾನ್, ಮನೆಯಲ್ಲಿಯೇ ಇದ್ದರೆ ಇನ್ನೊಂದಿಷ್ಟು ಮಕ್ಕಳಾಗುತ್ತವೆ ಎಂಬ ಭಯವಿದೆ ಎಂದು ಹೇಳುತ್ತಾ ಜೋರಾಗಿ ನಕ್ಕು ಬಿಟ್ಟಿದ್ದಾರೆ.
ಸೈಫ್ ಅಲಿಖಾನ್ ಗೆ ಸದ್ಯ ನಾಲ್ವರು ಮಕ್ಕಳಿದ್ದು, ಸೈಫ್ ಅಲಿ ಖಾನ್-ಅಮೃತಾ ಜೋಡಿಗೆ ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ಅಮೃತಾ ಸಿಂಗ್ ಜೊತೆಗಿನ ವಿಚ್ಛೇದನದ ಬಳಿಕ 2012ರಲ್ಲಿ ಸೈಫ್ ಅಲಿ ಖಾನ್ - ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದು, ಈ ದಂಪತಿಗೆ ತೈಮೂರ್ ಅಲಿ ಖಾನ್ ಹಾಗೂ ಜೆಹಾಂಗೀರ್ ಎಂಬ ಪುತ್ರರಿದ್ದಾರೆ.