ಪಾಕಿಸ್ತಾನದ ಶಾಸಕಿ ಅಶ್ಲೀಲ ವೀಡಿಯೋ ವೈರಲ್: ವೀಡಿಯೋದಲ್ಲಿರೋದು ತಾನಲ್ಲವೆಂದ ಸಾನಿಯಾ ಆಶಿಕ್
Saturday, November 20, 2021
ಇಸ್ಲಮಾಬಾದ್: ಇತ್ತೀಚೆಗೆ ಪಾಕಿಸ್ತಾನದ ಶಾಸಕಿಯೋರ್ವರ ಅಶ್ಲೀಲ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನದ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಪಕ್ಷದ ಶಾಸಕಿ ಸಾನಿಯಾ ಆಶಿಕ್ ಅವರ ಅಶ್ಲೀಲ ವೀಡಿಯೋ ವೈರಲ್ ಆಗಿದೆ ಎನ್ನಲಾಗಿದೆ. ಸಾನಿಯಾ ಆಶಿಕ್ ಪಂಜಾಬ್ ಪ್ರಾಂತ್ಯದ ಟಾಕ್ಸಿಲಾ ವಿಧಾನಸಭಾ ಕ್ಷೇತ್ರದದಿಂದ ಶಾಸಕಿಯಾಗಿ ಆಯ್ಕೆ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಶ್ಲೀಲ ವೀಡಿಯೋ ಹರಿದಾಡುತ್ತಿರುವುದು ಬೆಳಕಿಗೆ ಬರುತ್ತಿದ್ದಂತೆ ಶಾಸಕಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿ ಆರೋಪಿಯೋರ್ವನನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಅಶ್ಲೀಲ ವೀಡಿಯೋ ವೈರಲ್ ಆಗಿರುವ ಬಗ್ಗೆ ಕಳೆದ ಅಕ್ಟೋಬರ್ನಲ್ಲಿ ಸಂತ್ರಸ್ತ ಶಾಸಕಿಗೆ ತಿಳಿದಿತ್ತು. ಬಳಿಕ ಅವರು ಸರಕಾರ ಹಾಗೂ ಕೇಂದ್ರ ತನಿಖಾ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿದ್ದರೆಂದು ತಿಳಿದುಬಂದಿದೆ.
ಪಾಕಿಸ್ತಾನದ ಅರಿ ನ್ಯೂಸ್ ಪ್ರಕಾರ ಅಕ್ಟೋಬರ್ 26ರಂದು ಪಾಕ್ನ ಫೆಡರಲ್ ತನಿಖಾ ಸಂಸ್ಥೆ (ಎಫ್ಐಎ)ಗೆ ಶಾಸಕಿ ದೂರು ನೀಡಿದ್ದಾರೆ.ಈ ಬಗ್ಗೆ ಅವರು ತಮ್ಮ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವೀಡಿಯೋದಲ್ಲಿ ಇರುವುದು ಸಾನಿಯಾರವರೇ ಎಂದು ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿದ್ದಾರೆ. ಆದರೆ, ಸಾನಿಯಾ ಅವರು ವೀಡಿಯೋದಲ್ಲಿ ತಾನು ಇರೋದಲ್ಲವೆಂದು ನಿರಾಕರಿಸಿದ್ದಾರೆ.
ಸಾನಿಯಾ ದೂರಿನ ಬಳಿಕ ಪಂಜಾಬ್ ಪ್ರಾಂತ್ಯದ ಎಫ್ಐಎ ಮತ್ತು ಪೊಲೀಸ್ ತನಿಖೆ ಆರಂಭಿಸಿದ ಮೂರು ವಾರಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪೊಲೀಸರು ತಾವು ಬಂಧಿಸಿದ ವ್ಯಕ್ತಿಯ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.
ಅಲ್ಲದೆ ವೀಡಿಯೊದಲ್ಲಿರುವ ಮಹಿಳೆ ಸಾನಿಯಾ ಅಥವಾ ಬೇರೆ ಯಾರು ಎಂದು ಇನ್ನೂ ಖಚಿತಪಡಿಸಿಲ್ಲ. ಹೀಗಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ನಡುವೆ ತನಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ಶಾಸಕಿ ಸಾನಿಯಾ ಹೇಳಿಕೊಂಡಿರುವುದಾಗಿ ಹಲವಾರು ಮಾಧ್ಯಮ ವರದಿ ಮಾಡಿದೆ. ಅಂದಹಾಗೆ ಸಾನಿಯಾ ಆಶಿಕ್ ಅವರು ಪಾಕ್ನ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರ್ಯಮ್ ನವಾಜ್‌ಗೆ ಆಪ್ತರಾಗಿದ್ದಾರೆ.