
ಸ್ಕೂಟಿಗೆ ದೊರೆತ 'SEX' ನಂಬರ್ ಪ್ಲೇಟ್ನಿಂದಾಗಿ ವಿದ್ಯಾರ್ಥಿನಿಗೆ ಮುಜುಗರ.. ಸ್ಕೂಟಿ ಸಹವಾಸವೇ ಬೇಡವೆಂದು ಮೂಲೆಗಿಟ್ಟ ಯುವತಿ!
Tuesday, November 30, 2021
ನವದೆಹಲಿ: ತಾವು ಖರೀದಿಸುವ ಅಥವಾ ಹೆತ್ತವರು ಉಡುಗೊರೆಯಾಗಿ ದೊರಕುವ ವಾಹನಗಳಿಗೆ ತಮ್ಮ ಇಷ್ಟದ ಫ್ಯಾನ್ಸಿ ನಂಬರ್ ಅನ್ನು ಹಾಕಿಸುವ ಆಸೆ ಎಲ್ಲರಿಗೂ ಇರುತ್ತದೆ. ದುಬಾರಿ ದುಡ್ಡು ತೆತ್ತಾದರೂ ಕೆಲವರು ತಮಗೆ ಬೇಕಾದ ಫ್ಯಾನ್ಸಿ ನಂಬರ್ ಪಡೆದುಕೊಳ್ಳುತ್ತಾರೆ. ಕೆಲವರು ದುಬಾರಿ ಹಣ ಯಾಕೆ ಕೊಡುವುದೆಂದು ಆರ್ ಟಿಒನವರು ಕೊಡುವ ನಂಬರ್ ಅನ್ನೇ ಪಡೆದು ತೃಪ್ತರಾಗುತ್ತಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿನಿಯೋರ್ವಳು ತನ್ನ ಸ್ಕೂಟಿಗೆ ಆರ್‌ಟಿಒ ನೀಡಿರುವ ನಂಬರ್ ಪ್ಲೇಟ್‌ನಿಂದ ಆಕೆ ಸ್ಕೂಟಿಯನ್ನು ಹೊರಗಡೆ ತೆಗೆದುಕೊಂಡು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಗೆ ಆಕೆಯ ತಂದೆ ಸ್ಕೂಟಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರಂಭದಲ್ಲಿ ತಂದೆ ನೀಡಿರುವ ಈ ಉಡುಗೊರೆಯನ್ನು ಕಂಡು ಮಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆರ್‌ಟಿಒ ಅಧಿಕಾರಿಗಳು ಈ ಸ್ಕೂಟಿಗೆ ನೀಡಿರುವ ಸಂಖ್ಯೆಯಿಂದಾಗಿ ಆಕೆ ಸ್ಕೂಟಿಯ ಸಹವಾಸವೇ ಬೇಡ ಎಂದು ಮೂಲೆಗಿಡುವ ಸ್ಥಿತಿ ನಿರ್ಮಾಣವಾಗಿದೆ.
READ
- ಬಾಲಿವುಡ್ ಕಾಸ್ಟ್ ಕೌಚಿಂಗ್, ಸೀಕ್ರೆಟ್ ವಾಟ್ಸ್ಆ್ಯಪ್ ಗ್ರೂಪ್ ಕರಾಳತೆ ಬಿಚ್ಚಿಟ್ಟ ಸ್ಯಾಂಡಲ್ವುಡ್ ನಟಿ ಎರಿಕಾ ಫೆರ್ನಾಂಡೀಸ್
- 6 ವರ್ಷದ ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ : ಮಾಲೀಕನ ವಿರುದ್ಧ ಪ್ರಕರಣ ದಾಖಲು - PIT BULL DOG ATTACK ON BOY (VIDEO NEWS)
- ಐನ್ಸ್ಟೈನ್ ಮೆದುಳು ಕದ್ದು 240ಪೀಸ್ ಮಾಡಿ ಮೊಮ್ಮಗಳಿಗೆ ಉಡುಗೊರೆ ನೀಡಿದ ವೈದ್ಯ: ವಿಜ್ಞಾನಿಯ ರೋಚಕ ಕಥೆ ಇಲ್ಲಿದೆ
ಇದಕ್ಕೆ ಕಾರಣ ಆಕೆಗೆ ಆರ್ ಟಿಒ DL3SEX**** ಎಂಬ ಸಂಖ್ಯೆಯನ್ನು ನೀಡಿದೆ. ಸ್ಕೂಟಿ ಸಂಖ್ಯೆಯಲ್ಲಿ ಡಿಎಲ್ ಎಂಬ ಎರಡು ಇಂಗ್ಲಿಷ್ ಪದಗಳ ಬಳಿಕ ಮುಂದಿನ ವರ್ಣಮಾಲೆಯಲ್ಲಿ ಸೆಕ್ಸ್ ಎಂದು ಬಂದಿದೆ. ಆದ್ದರಿಂದ ಹೊರಗಡೆ ಸ್ಕೂಟಿ ತೆಗೆದುಕೊಂಡು ಹೋಗುವಾಗ ಹಲವರು ಗೇಲಿ ಮಾಡುತ್ತಾರಂತೆ. ಹೀಗಾಗಿ ಸ್ಕೂಟಿ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ವಿದ್ಯಾರ್ಥಿನಿ ಬಂದಿದ್ದಾಳೆ.
ವಿದ್ಯಾರ್ಥಿನಿಯ ಕುಟುಂಬಸ್ಥರು ಈ ನಂಬರ್ ಪ್ಲೇಟ್ ಬದಲಾಯಿಸಲು ಯತ್ನಿಸಿದ್ದಾರೆ. ಆದರೂ ಪ್ರಯೋಜನವಾಗಲಿಲ್ಲ. ಈಗ ಸಂಖ್ಯೆಯಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಸ್ವತಃ ಸಾರಿಗೆ ಇಲಾಖೆಯ ಅಧಿಕಾರಿಗಳೇ ಹೇಳಿದ್ದಾರಂತೆ. ಸದ್ಯ ಈಕೆಯ ಸಂತಸಕ್ಕೆ ಕಾರಣವಾಗಿದ್ದ ಸ್ಕೂಟಿ ಮುಜುಗರಕ್ಕೆ ಕಾರಣವಾಗಿರುವುದು ವಿಪರ್ಯಾಸ.