![ಹುಟ್ಟುಹಬ್ಬದಂದು ಪ್ರೇಯಸಿ ಸಿಗಲಿಲ್ಲವೆಂದು ಮನನೊಂದ ಭಗ್ನ ಪ್ರೇಮಿ ಮಾಡಿದ್ದೇನು ಗೊತ್ತೇ? ಹುಟ್ಟುಹಬ್ಬದಂದು ಪ್ರೇಯಸಿ ಸಿಗಲಿಲ್ಲವೆಂದು ಮನನೊಂದ ಭಗ್ನ ಪ್ರೇಮಿ ಮಾಡಿದ್ದೇನು ಗೊತ್ತೇ?](https://blogger.googleusercontent.com/img/b/R29vZ2xl/AVvXsEiCsmVC3KGJzq6go6ocat62dpoCjJclD1bIUrXHVQemdp47ipM4le3JewsKTCYTXZuU5CuJRWDhkJc3a5oe_cRuP1FmpTlWHEdMWC62rWqHOeqEyuI2F62m-k7hQBv3tEh48hVaFSG8-opK/s1600/1638074605159631-0.png)
ಹುಟ್ಟುಹಬ್ಬದಂದು ಪ್ರೇಯಸಿ ಸಿಗಲಿಲ್ಲವೆಂದು ಮನನೊಂದ ಭಗ್ನ ಪ್ರೇಮಿ ಮಾಡಿದ್ದೇನು ಗೊತ್ತೇ?
Sunday, November 28, 2021
ಹಾಸನ: ಪ್ರೇಯಸಿ ಕೈಕೊಟ್ಟಳೆಂದು ಮನನೊಂದು ಭಗ್ನಪ್ರೇಮಿಯೋರ್ವನು ನೇಣಿಗೆ ಶರಣಾಗಲು ಯತ್ನಿಸಿರುವ ಘಟನೆ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಗಂಡಸಿಯ ಜೀವಿತ್(29) ಆತ್ಮಹತ್ಯೆಗೆ ಯತ್ನಿಸಿರುವ ಭಗ್ನಪ್ರೇಮಿ.
ಜೀವಿತ್ ತನ್ನದೇ ಗ್ರಾಮದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದಾಕೆ ಈಗ ವಿವಾಹವಾಗಲು ನಿರಾಕರಿಸುತ್ತಿದ್ದಾಳೆ. ಮನೆಯವರ ಒತ್ತಡದಿಂದಲೇ ಆಕೆ ತನ್ನನ್ನು ವಿವಾಹವಾಗಲು ನಿರಾಕರಿಸುತ್ತಿದ್ದಾಳೆ ಎಂದು ಜೀವಿತ್ ಆರೋಪಿಸಿದ್ದಾನೆ.
"ಕಳೆದ ಒಂಬತ್ತು ವರ್ಷಗಳಿಂದ ಆಕೆಯ ಹುಟ್ಟುಹಬ್ಬಕ್ಕೆ ನಾನೇ ಕೇಕ್ ಕಟ್ ಮಾಡಿಸುತ್ತಿದ್ದೆ. ಆಕೆಗೆ ಮೊದಲ ವಿಷ್ ನಾನೇ ಹೇಳುತ್ತಿದ್ದೆ. ಆದರೆ ನಿನ್ನೆ ಹುಟ್ಟುಹಬ್ಬದಂದು ಆಕೆ ಸಿಗದಿರುವುದರಿಂ ಮನನೊಂದು ವಿಷ ಸೇವೆಸಿದ್ದೇನೆ" ಎಂದು ಅಳಲು ತೋಡಿಕೊಂಡಿದ್ದೇನೆ.
ವಿಷ ಸೇವನೆ ಮಾಡಿ ಅಸ್ವಸ್ಥಗೊಂಡಿರುವ ಜೀವಿತ್ಗೆ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ತನ್ನನ್ನೇ ವಿವಾಹವಾಗಬೇಕು. ಇಲ್ಲದಿದ್ದಲ್ಲಿ ತನಗಾದ ಮೋಸಕ್ಕೆ ನ್ಯಾಯ ದೊರಕಬೇಕು'' ಎಂದು ನೊಂದ ಪ್ರೇಮಿ ಅವಲತ್ತುಕೊಂಡಿದ್ದಾನೆ.
ಒಂಬತ್ತು ವರ್ಷಗಳು ಪರಸ್ಪರ ಪ್ರೀತಿಸಿ, ಈಗ ಕೈಕೊಟ್ಟಿದ್ದಾಳೆಂದು ಯುವಕ ಆರೋಪ ಮಾಡಿದ್ದರೆ, ಆಕೆ ತನ್ನನ್ನೇ ಮದುವೆ ಮಾಡಿಕೊಳ್ಳುವಂತೆ ಯುವಕ ಪೀಡಿಸುತ್ತಿದ್ದಾನೆಂದು ಆರೋಪಿಸಿ ಯುವಕನ ವಿರುದ್ದ ಯುವತಿಯ ಪಾಲಕರು ದೂರು ದಾಖಲಿಸಿದ್ದಾರೆ. ಈ ಸಂಬಂಧ ದೂರು ಸ್ವೀಕರಿಸಿರುವ ಗಂಡಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.