Whatsapp ನಲ್ಲಿ ಬರಲಿದೆ ಹೊಸ ಫೀಚರ್- ಇದು ಬಂದರೆ ಬೇರೆಯವರ ಮೊಬೈಲಿನಲ್ಲಿ ಮೆಸೆಜ್ ಪೊಟೊ ಡಿಲಿಟ್ ಮಾಡಲು.....
Friday, November 5, 2021
ಇಂದು ಪ್ರತಿಯೊಬ್ಬರ ಬಳಕೆಯಲ್ಲಿರುವ ವಾಟ್ಸಪ್ ಹೊಸ ಹೊಸ ಪೀಚರ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ವಾಟ್ಸಪ್ ಸಂಸ್ಥೆ ವಾಟ್ಸಪ್ ಸಂದೇಶ ಕಳುಹಿಸುವ ಮತ್ತು ಸ್ವೀಕರಿಸುವ ವಿಧಾನದಲ್ಲಿ ಹಬಳಷ್ಟು ಸುಧಾರಣೆಗಳನ್ನು ಮಾಡಿದೆ.
ಇದೀಗ ವಾಟ್ಸಪ್ ಸಂದೇಶವನ್ನು ಡಿಲಿಟ್ ಮಾಡುವ ವಿಧಾನದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರುತ್ತಿದೆ. ವಾಟ್ಸಪ್ ಸಂದೇಶವನ್ನು ಯಾರಿಗಾದರೂ ತಪ್ಪಿ ಕಳುಹಿಸಿದರೆ ಅದನ್ನು ಡಿಲಿಟ್ ಮಾಡುವುದು ಅಗತ್ಯವಾಗಿರುತ್ತದೆ.
ವಾಟ್ಸಪ್ ನ ಆರಂಭದಲ್ಲಿ ಇದಕ್ಕೆ ಅವಕಾಶವಿರಲಿಲ್ಲ. ಆದರೆ 2017 ರಲ್ಲಿ ವಾಟ್ಸಪ್ DELETE FOR EVERYONE ಪ್ರಯೋಗ ಆರಂಭಿಸಿತು. ಇದರಲ್ಲಿ ಸಂದೇಶ ಕಳುಹಿಸಿದ 7 ಸೆಕೆಂಡ್ ನಲ್ಲಿ ಅದನ್ನು ಬಳಸುವ ಅವಕಾಶ ಇತ್ತು. ಆದರೆ ಆ ಸಣ್ಣ ಸಮಯ ಡಿಲಿಟ್ ಮಾಡಲು ಗ್ರಾಹಕರು ಪರದಾಡಬೇಕಾಗುತ್ತಿತ್ತು.
2018 ರಲ್ಲಿ ಈ ಸಮಯದ ಅವಧಿಯನ್ನು 4096 ಸೆಕೆಂಡ್ ( 68 ನಿಮಿಷಕ್ಕೆ ವಿಸ್ತರಿಸಲಾಯಿತು). ಇದೀಗ ವಾಟ್ಸಪ್ ಸಂಸ್ಥೆ ಸಮಯದ ಅವಧಿಯನ್ನು ತೆಗೆದು ಯಾವಾಗ ಬೇಕಾದರೂ ಡಿಲಿಟ್ ಮಾಡುವ ಅವಕಾಶವನ್ನು ಕಲ್ಪಿಸಲಿದೆ ಎಂದು ತಿಳಿದುಬಂದಿದೆ.
ಇದು ಜಾರಿಗೆ ಬಂದರೆ ಹಲವು ತಿಂಗಳುಗಳ ಹಿಂದಿನ ಮೆಸೆಜ್ ಗಳನ್ನು ಡಿಲಿಟ್ ಮಾಡಲು ಸಾಧ್ಯವಾಗಲಿದೆ. ಮುಂಬರುವ ಅಪ್ಡೇಟ್ ನಲ್ಲಿ ಗ್ರಾಹಕರಿಗೆ ಇದನ್ನು ನೀಡಲು ವಾಟ್ಸಪ್ ನಿರ್ಧರಿಸಿದೆ.