-->
ಭಾರತದಲ್ಲಿ‌ ನಿಷೇಧಗೊಂಡರೂ ವಿಶ್ವ ಟೆಕ್​ ದೈತ್ಯ ಗೂಗಲ್ ಅನ್ನೂ ಹಿಂದಿಕ್ಕಿ 'ಟಿಕ್​ಟಾಕ್​' ನಂ 1 ಸ್ಥಾನಕ್ಕೆ!

ಭಾರತದಲ್ಲಿ‌ ನಿಷೇಧಗೊಂಡರೂ ವಿಶ್ವ ಟೆಕ್​ ದೈತ್ಯ ಗೂಗಲ್ ಅನ್ನೂ ಹಿಂದಿಕ್ಕಿ 'ಟಿಕ್​ಟಾಕ್​' ನಂ 1 ಸ್ಥಾನಕ್ಕೆ!

ನವದೆಹಲಿ: ಇಂಡಿಯಾದಲ್ಲಿ ಬ್ಯಾನ್​ ಆಗಿರುವ​ 'ಟಿಕ್​ಟಾಕ್​' ವಿಶ್ವ ಟೆಕ್​ ದೈತ್ಯ ಗೂಗಲ್ ಅನ್ನೂ ಹಿಂದಿಕ್ಕಿ ಈ ವರ್ಷದ ಅತ್ಯಂತ ಜನಪ್ರಿಯ ವೆಬ್‌ಸೈಟ್ ಎಂಬ ದಾಖಲೆಯನ್ನು ಗಳಿಸಿದೆ. ಐಟಿ ಸೆಕ್ಯುರಿಟಿ ಕಂಪೆನಿಯಾದ ಕ್ಲೌಡ್​ಫ್ಲೇರ್​ ಈ ಬಗ್ಗೆ ವರದಿ ನೀಡಿದೆ. 

ಅಮೇರಿಕಾ ಮೂಲದ ಸರ್ಚ್​ ಇಂಜಿನ್​ ಗೂಗಲ್​ಗಿಂತಲೂ ವೈರಲ್​ ವೀಡಿಯೋ ಆ್ಯಪ್​ ಆಗಿರುವ ಟಿಕ್‌ಟಾಕ್ ಹೆಚ್ಚು ಹಿಟ್ಸ್​ಗಳನ್ನು ಪಡೆದುಕೊಂಡಿದೆ. ಕಳೆದ ಫೆಬ್ರವರಿಯಲ್ಲಿಯೇ ಗೂಗಲ್​ ಅನ್ನು ಹಿಂದಿಕ್ಕಿರುವ ಟಿಕ್​ಟಾಕ್​, ಮಾರ್ಚ್​ನಿಂದ ಆಗಸ್ಟ್​ವರೆಗೂ ನಂಬರ್​ 1 ಸ್ಥಾನದಲ್ಲಿಯೇ ಇತ್ತು. 2020ರಲ್ಲಿ ಗೂಗಲ್ ನಂಬರ್​ 1 ಸ್ಥಾನದಲ್ಲಿತ್ತು. ಟಿಕ್​ಟಾಕ್​, ಅಮೆಜಾನ್​, ಆ್ಯಪಲ್​, ಫೇಸ್​ಬುಕ್​, ಮೈಕ್ರೋಸಾಫ್ಟ್​ ಹಾಗಯ ನೆಟ್​ಫ್ಲಿಕ್ಸ್​ ಟಾಪ್​ 10 ಪಟ್ಟಿಯಲ್ಲಿದ್ದವು. 

ಕೊರೊನಾ ಸೋಂಕು​ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್​ಡೌನ್​ನಿಂದಾಗಿ ಟಿಕ್​ಟಾಕ್​ ತನ್ನ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗಿದೆ. ಲಾಕ್​ಡೌನ್​ನಂತಹ ಬಿಡುವಿನ ಸಮಯದಲ್ಲಿ ಅನೇಕರು ಸಮಯ ಕಳೆಯಳೆಂದು ಟಿಕ್​ಟಾಕ್​ ಮೊರೆ ಹೋಗಿದ್ದರೆಂದು ವರದಿಯಿಂದ ತಿಳಿದುಬಂದಿದೆ. 

ಟಿಕ್​ಟಾಕ್ ಆ್ಯಪ್ ಚೀನಾ ಮೂಲದ ಬೈಟ್​ಡಾನ್ಸ್​ ಒಡೆತನದಲ್ಲಿದೆ. ಇದಕ್ಕೆ ವಿಶ್ವಾದ್ಯಂತ 1 ಬಿಲಿಯನ್​ಗೂ ಅಧಿಕ ಬಳಕೆದಾರರಿದ್ದಾರೆ. ಇನ್ನೂ ಬಳಕೆದಾರರ ಅದರ ಸಂಖ್ಯೆ ಅಧಿಕವಾಗುತ್ತಲೇ ಇದೆ. 2020ರ ಜೂನ್​ನಲ್ಲಿ ಭಾರತದ ಸರಕಾರವು ಟಿಕ್​ಟಾಕ್​ ಅನ್ನು ದೇಶದಲ್ಲಿ ಬ್ಯಾನ್​ ಮಾಡಿತ್ತು. ಚೀನಾ ಹಾಗೂ ಭಾರತದ ನಡುವೆ ಇದ್ದ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾಕ್ಕೆ ಸೇರಿರುವ ಅನೇಕ ಆ್ಯಪ್​ಗಳನ್ನು ಆ ಸಂದರ್ಭ ಬ್ಯಾನ್​ ಮಾಡಲಾಗಿತ್ತು. ಆದರೂ, ಟಿಕ್​ಟಾಕ್​ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

Ads on article

Advertise in articles 1

advertising articles 2

Advertise under the article