ಈ ಬಾರಿ #ದೇವರಸಾಂಟಾ ಅಭಿಯಾನದಲ್ಲಿ 100 ಜನರಿಗೆ 10 ಸಾವಿರ ರೂ. ಹಂಚಲಿದ್ದಾರಂತೆ ನಟ ವಿಜಯ್ ದೇವರಕೊಂಡ: ನೀವು ಈ ಹಣ ಪಡೆಯಬಹುದು, ಹೇಗೆ ಗೊತ್ತೇ?
Wednesday, December 29, 2021
ಹೈದರಾಬಾದ್: ತೆಲುಗು ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ಸಂದೀಪ್ ರೆಡ್ಡಿ ವಂಗಾರ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ಅಭಿನಯಿಸಿ ಭಾರೀ ಖ್ಯಾತಿ ಗಳಿಸಿದಾಗಿನಿಂದ # ದೇವರಸಾಂಟಾ ಅಭಿಯಾನದ ಮೂಲಕ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಪ್ರತಿ ವರ್ಷ ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ವಿಶೇಷವಾಗಿಸುತ್ತಿದ್ದಾರೆ. ಈ ಬಾರಿ ಅವರು ತಮ್ಮ ಅಭಿಮಾನಿಗಳು ಮತ್ತು ಜನರನ್ನು ಹುರಿದುಂಬಿಸಲ ತಮ್ಮ ದುಡಿಮೆಯ 10 ಲಕ್ಷ ರೂ. ದಾನ ಮಾಡಲು ಸಿದ್ಧರಾಗಿದ್ದಾರೆ.
ಈ ಬಗ್ಗೆ ನಟ ವಿಜಯ್ ದೇವರಕೊಂಡ ತಮ್ಮ ಟ್ವಿಟರ್‌ನಲ್ಲಿ ಈ ರೀತಿಯಲ್ಲಿ ಹೇಳಿಕೊಂಡಿದ್ದಾರೆ. "ನನ್ನ ಇಲ್ಲಿಯವರೆಗಿನ ಪ್ರಯಾಣ ಮತ್ತು ನಾನು ಮಾಡಿರುವ ಹಣದಲ್ಲಿ ನನ್ನ ಅಭಿಮಾನಿಗಳು ಮತ್ತು ಇತರರಿಗೆ ಹಂಚುತ್ತಿದ್ದೇನೆ. ಅದಕ್ಕಾಗಿ 1 ಮಿಲಿಯನ್ ಕೊಡುಗೆ ನೀಡಲಿದ್ದೇನೆ. ಇದಕ್ಕೆ ನೀವು ಒಂದು ಸಾಂಟಾ ಆಗಿ. ಯಾರೋ ಒಬ್ಬರಿಗೆ ನಾನು 10,000 ರೂ . ಉಡುಗೊರೆಯಾಗಿ ನೀಡಲು ಕಾರಣ ಬರೆದು Be #Vijay Devarakonda # DeveraSanta2021 ಎಂದು ಬರೆದು ನನಗೆ ತಿಳಿಸಿ. ಹಾಗೆ, ಬಂದಿರುವ ಹೆಸರುಗಳಲ್ಲಿ 100 ಹೆಸರುಗಳನ್ನು ಆಯ್ಕೆ ಮಾಡಿ ಜನವರಿ 1 ರಂದು ಪ್ರಕಟಿಸಿ ಅವರಿಗೆ ನಾನು ಒಬ್ಬೊಬ್ಬರಿಗೆ ತಲಾ 10,000 / - ಕೊಡುತ್ತೇನೆ'' ಎಂದು ಒಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಈ ವಿಡಿಯೋ ಅಭಾರೀ ವೈರಲ್ ಆಗುತ್ತಿದೆ.
ಅದೇ ರೀತಿ ಮತ್ತೆ ಮಾತು ಮುಂದುವರೆಸುವ ಅವರು “ಜೊತೆಗೆ , ರೌಡಿ ಕ್ಲಬ್ ಸದಸ್ಯರೇ, ನಿಮ್ಮ ರೌಡಿ ಕೋಡ್ ಅಥವಾ ನೋಂದಾಯಿತ ಇಮೇಲ್ ಐಡಿಯನ್ನು ನಮೂದಿಸುವುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಆಯ್ಕೆಯಾದ 100 ಮಂದಿಯಲ್ಲಿ 50 ಮಂದಿ ರೌಡಿ ಕ್ಲಬ್ ಸದಸ್ಯರಾಗಿರುತ್ತಾರೆ." ಎಂದು ಘೋಷಿಸಿದ್ದಾರೆ. 2017 ರಲ್ಲಿ ವಿಜಯ್ ದೇವರಕೊಂಡ ತಮ್ಮ 'ಅರ್ಜುನ್ ರೆಡ್ಡಿ' ಸಿನಿಮಾದ ಬೃಹತ್ ಗಾತ್ರದ ಪೇಂಟಿಂಗ್ ಮಾಡಿ ಕೃತಜ್ಞತೆಯ ಸಂಕೇತವಾಗಿ ಹೈದರಾಬಾದ್‌ನ ಜೆಎನ್‌ಟಿಯುನಲ್ಲಿ ಉಡುಗೊರೆಗಳನ್ನು ವಿತರಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿ ದೇವರಸಂತರಾಗಿದ್ದರು. ಅದೇ ರೀತಿ ಆರಂಭವಾದ ದೇವರಕೊಂಡ ಅವರ #DeveraSanta ಅಭಿಯಾನ ಈ ಬಾರಿ 100 ಜನರಿಗೆ 10 ಸಾವಿರ ರೂ. ಕೊಡುವ ಮೂಲಕ ಮತ್ತೆ ಮತ್ತೆ ನಟ ವಿಜಯ್ 'ದೇವರಸಂತ'ನಾಗುತ್ತಿದ್ದಾರೆ.