
ವಿಕಿ - ಕತ್ರಿನಾ ಅದ್ದೂರಿ ವಿವಾಹ ಪ್ರಸಾರ ಮಾಡಲು ಓಟಿಟಿ ಆಸಕ್ತಿ: 100 ಕೋಟಿ ರೂ. ಆಫರ್?
Tuesday, December 7, 2021
ಮುಂಬೈ: ಬಾಲಿವುಡ್ ಅಂಗಳದಲ್ಲಿ ಮತ್ತೊಂದು ತಾರಾಜೋಡಿಯಾದ ವಿಕಿ ಕೌಶಲ್ - ಕತ್ರಿನಾ ಕೈಫ್ ಮದುವೆಯದ್ದೇ ವಿಚಾರ ಟಾಕ್ ಆಫ್ ದಿ ಟೌನ್ ಆಗಿದೆ. ದಿನದಿನವೂ ಈ ಮದುವೆಯ ಬಗ್ಗೆ ವೈವಿಧ್ಯಮಯ ವಿಚಾರಗಳು ಹೊರ ಬರುತ್ತಲೇ ಇದೆ. ಈಗಾಗಲೇ ಈ ಅದ್ಧೂರಿ ವಿವಾಹಕ್ಕೆ ಕಲರ್ಫುಲ್ ವೇದಿಕೆ ಸಜ್ಜಾಗಿದೆ. ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಸಂಭ್ರಮ ನಿನ್ನೆಯಿಂದಲೇ ಆರಂಭವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕೂಡ ಸೃಷ್ಟಿಯಾಗಿದೆ.
ತಾರಾಜೋಡಿಯ ಮದುವೆಗೆ ಸಿನಿರಂಗದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಭಾರೀ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾಕಷ್ಟು ವಿಶೇಷತೆ, ಆಕರ್ಷಣೆಗೆಗಳಿಗೆ ಸಾಕ್ಷಿಯಾಗಲಿರುವ ಈ ಅದ್ದೂರಿ ವಿವಾಹಕ್ಕೆ ಇದೀಗ ಭಾರೀ ಡಿಮ್ಯಾಂಡ್ ಒಂದು ಒಲಿದು ಬಂದಿದೆ.
ಈ ಮದುವೆಗೆ ಸಂಬಂಧಿಸಿದ ವೀಡಿಯೋ ಫೂಟೇಜ್ ಸರೆಹಿಡಿಯುವ ಅವಕಾಶ ನೀಡಿದ್ದಲ್ಲಿ 100 ಕೋಟಿ ರೂ. ಆಫರ್ ಮಾಡಲಾಗಿದೆಯಂತೆ. ಹೀಗೊಂದು ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸಾಧಾರಣ ಎಲ್ಲರೂ ತಮ್ಮ ಮದುವೆಗೆ ಲಕ್ಷಾಂತರ ರೂ. ಖರ್ಚು ಮಾಡಿ ವಿಡಿಯೋ ಸೆರೆ ಹಿಡಿಯುದಾದರೆ, ಈ ಮದುವೆಗೆ ಭಾರೀ ಡಿಮಾಂಡ್ ನೀಡಿ ವೀಡಿಯೋ ಮಾಡುತ್ತೇವೆ ಎಂಬ ಆಫರ್ ಬಂದಿದೆಯಂತೆ. ಮಾಧ್ಯಮಗಳ ವರದಿಯ ಪ್ರಕಾರ ಓಟಿಟಿ ಫ್ಲಾಟ್ಫಾರ್ಮ್ 100 ಕೋಟಿ ರೂ. ಆಫರ್ ಮಾಡಿ, ತಾವೇ ವೀಡಿಯೋ ಚಿತ್ರೀಕರಣ ಮಾಡುತ್ತೇವೆ ಅಂದಿದೆಯಂತೆ. ಆದರೆ, ತಾರಾಜೋಡಿಯಿಂದ ಇದುವರೆಗೂ ಯಾವುದೇ ಗ್ರೀನ್ ಸಿಗ್ನಲ್ ಬಂದಿಲ್ಲ ಎನ್ನಲಾಗಿದೆ.
ಓಟಿಟಿ ಎಂಬುದು ಬಾಲಿವುಡ್‌ನಲ್ಲಿ ಈಗ ಸರ್ವೇಸಾಮಾನ್ಯ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳು ದುಡ್ಡಿಗಾಗಿ ಪಾಪರಾಜಿಗಳಿಗೆ ತಮ್ಮ ಮದುವೆಯ ದೃಶ್ಯಗಳನ್ನು ಚಿತ್ರೀಕರಿಸಲು ಅನುಮತಿ ನೀಡುತ್ತಾರೆ. ಇದೀಗ ದೇಶದಲ್ಲಿ ಎಲ್ಲೆಡೆ ಓಟಿಟಿ ಟ್ರೆಂಡ್ ಸೃಷ್ಟಿಯಾಗಿದೆ. ಒಟಿಟಿ ವೇದಿಕೆಯಲ್ಲಿ ವಿಕ್ಕಿ-ಕತ್ರಿನಾರ ಅದ್ದೂರಿ ವಿವಾಹವನ್ನು ಪ್ರಸಾರ ಮಾಡಲು ಆಸಕ್ತಿ ವಹಿಸಿದೆ. ಇದೇ ಮೊದಲ ಬಾರಿಗೆ ತಾರಾಜೋಡಿಯೊಂದರ ವಿವಾಹಕ್ಕಾಗಿ ಇಂಥದ್ದೊಂದು ಆಫರ್ ಅನ್ನು ಓಟಿಟಿ ನೀಡಿದೆ ಎನ್ನಲಾಗಿದೆ.
ಒಂದು ವೇಳೆ ತಾರಾಜೋಡಿ ಹಸಿರು ನಿಶಾನೆ ತೋರಿದ್ದಲ್ಲಿ ಇಡೀ ಮದುವೆ ಸಂಭ್ರಮವು ಒಟಿಟಿಯಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ, ಫ್ರೆಂಡ್ಸ್, ಆಪ್ತರು ಮತ್ತು ಸೆಲೆಬ್ರಿಟಿಗಳ ಎಕ್ಸ್ಕ್ಲೂಸಿವ್ ಸಂದರ್ಶನಗಳು ಕೂಡ ಪ್ರಸಾರವಾಗಲಿದೆ. ಡಿಸೆಂಬರ್ 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿಕ್ಕಿಕ್ಯಾಟ್ ಮದುವೆ ನಡೆಯಲಿದೆ.