![12 ವರ್ಷ ಬಾಲಕಿಯ ಮೇಲೆ ವಕೀಲನಿಂದ ಕಾಮಪೈಶಾಚಿಕತೆ! 12 ವರ್ಷ ಬಾಲಕಿಯ ಮೇಲೆ ವಕೀಲನಿಂದ ಕಾಮಪೈಶಾಚಿಕತೆ!](https://blogger.googleusercontent.com/img/b/R29vZ2xl/AVvXsEg5zU99XT195MDDiLKUybReGnd0snME_-zOpvbeMvMMpdN_vuLc3exXPNI2BlaHjncqbg9s07O-VzCALP4b8VUDWt8sO9E7OLNjmDyTHD60On94D_wIGcN9qc-d49fbXEUw_uIfrN9YL5QV/s1600/1638376096738221-0.png)
12 ವರ್ಷ ಬಾಲಕಿಯ ಮೇಲೆ ವಕೀಲನಿಂದ ಕಾಮಪೈಶಾಚಿಕತೆ!
Wednesday, December 1, 2021
ಬರೇಲಿ (ಯುಪಿ): ಕಾನೂನು ಕಾಯುವವನೇ ಕಾನೂನು ಮೀರಿ ನಡೆದಲ್ಲಿ ಬೇಲಿಯೇ ಹೊಲವನ್ನು ಮೇಯ್ದಂತೆ ಆಗೋಲ್ವೇ. ಉತ್ತರ ಪ್ರದೇಶದ ಬರೇಲಿಯ ಬರಾದರಿ ಪ್ರದೇಶದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ.
ವಕೀಲನೊಬ್ಬ 12 ವರ್ಷದ ಬಾಲಕಿಯನ್ನು ಕರೆದೊಯ್ದು ಕಾಮ ಪೈಶಾಚಿಕತೆಯನ್ನು ಮೆರೆದಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಳು. ಆಗ ಅಲ್ಲಿಗೆ ಬಂದ ವಕೀಲ ಗೋವಿಂದ್ ಆಕೆಯನ್ನು ತನ್ನ ಕಚೇರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.
ಅತ್ಯಾಚಾರ ಎಸಗಿರುವ ಬಗ್ಗೆ ಯಾರಲ್ಲೂ ತಿಳಿಸದಂತೆ ವಕೀಲ ಬಾಲಕಿಗೆ ಬೆದರಿಕೆ ಒಡ್ಡಿ, ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಕೀಲ ಬಾಲಕಿಗೆ ಹೆದರಿಸಿದ್ದಾನೆ. ಆದರೆ ಘಟನೆ ಬಳಿಕ, ಹುಡುಗಿ ಮನೆಗೆ ತಲುಪಿ ತನ್ನ ಮೇಲಾಗಿರುವ ದೌರ್ಜನ್ಯದ ಕುರಿತು ಚಿಕ್ಕಮ್ಮನಿಗೆ ತಿಳಿಸಿದ್ದಾಳೆ. ಬಳಿಕ ಆಕೆಯ ತಂದೆ ಬಾರಾದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐಪಿಸಿ ಮತ್ತು ಪೊಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.