![ತಲಪಾಡಿಯಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ- ತಲೆಮರೆಸಿಕೊಂಡಿದ್ದ ಆರೋಪಿ ಯಾರು ಗೊತ್ತಾ? ತಲಪಾಡಿಯಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ- ತಲೆಮರೆಸಿಕೊಂಡಿದ್ದ ಆರೋಪಿ ಯಾರು ಗೊತ್ತಾ?](https://blogger.googleusercontent.com/img/b/R29vZ2xl/AVvXsEhZFFRaw99ekNU9yWE7nQ4f8vjydE7H57QKa-omGJa7e7yReK92NTaBdrRknRKTHx9-Nm1unFpv55i5uxjDhu5_9pYfDdrvIAmjN-7QQCoz48_HYjafqmVGW5IC4TRuYjiXZJcIl-tR85S_/s1600/1638435861002763-0.png)
ತಲಪಾಡಿಯಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ- ತಲೆಮರೆಸಿಕೊಂಡಿದ್ದ ಆರೋಪಿ ಯಾರು ಗೊತ್ತಾ?
Thursday, December 2, 2021
ಮಂಗಳೂರು; ತಲಪಾಡಿಯಲ್ಲಿ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆಸಿರೋಡ್ ನಿವಾಸಿ ಅಬ್ದುಲ್ ರಾಶಿಕ್ ಬಂಧಿತ ಕಾಮುಕ. ಈತ ನಿನ್ನೆ ತಲಪಾಡಿಯ ಅಲಂಕಾರುಗುಡ್ಡೆ ಎಂಬಲ್ಲಿ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ಎಸಗಿರುವ ಬಗ್ಗೆ ದೂರು ದಾಖಲಾಗಿತ್ತು.
ಅಲಂಕಾರುಗುಡ್ಡೆಯಿಂದ ತಲಪಾಡಿ ಚೆಕ್ ಪೋಸ್ಟ್ ಗೆ ಬರುವ ದಾರಿಯಲ್ಲಿ 14 ವರ್ಷದ ಬಾಲಕಿ ತನ್ನ ತಂಗಿಯೊಂದಿಗೆ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದಳು. ಈ ವೇಳೆ ಸ್ಕೂಟರ್ ನಲ್ಲಿ ಬಂದ ಈತ ಬಾಲಕಿಯ ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದ.ಈ ಬಗ್ಗೆ ಬಾಲಕಿ ಹೆತ್ತವರು ನೀಡಿದ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಆರೋಪಿ ಬಾಲಕಿಗೆ ಕಿರುಕುಳ ನೀಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.ಇದರ ಆಧಾರದಲ್ಲಿ ಆರೋಪಿ ಅಬ್ದುಲ್ ರಾಶಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ.ಈತ ಉಚ್ಚಿಲದಲ್ಲಿಯೂ ಇದೇ ರೀತಿ ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಾಗಿದೆ.