
2 ಮಿಲಿಯನ್ ಫಾಲೋವರ್ಸ್ ಪಡೆದ ಖುಷಿಯಲ್ಲಿ ಅಭಿಮಾನಿಗಳಿಗಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡ ಉರ್ಫಿ
Tuesday, December 14, 2021
ಮುಂಬೈ: ಟಿವಿ ಸೆಲೆಬ್ರೆಟಿ, ಬಿಗ್‌ಬಾಸ್ ಒಟಿಟಿ ಸ್ಪರ್ಧಿ, ಉರ್ಫಿ ಜಾವೇದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಇದೀಗ ಈ ನಟಿ ಇನ್‌ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಈ ಸಂತೋಷದಲ್ಲಿ ನಟಿ ಉರ್ಫಿಯವರು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗಾಗಿ ತಮ್ಮ ಮಾದಕ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಉರ್ಫಿ ಜಾವೇದ್ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳುತ್ತಾ, ಹಳದಿ ಒಳ ಉಡುಪು ಧರಿಸಿರುವ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಗ್ರೂಪ್ ಚಾನೆಲ್ ಯುಟ್ಯೂಬ್ ಸೋಶಿಯಲ್ ಮೀಡಿಯಾದಲ್ಲಿ ತಮಗೆ ಸಾಕಷ್ಟು ಪ್ರೀತಿ ತೋರಿಸಿದಕ್ಕೆ ತನ್ನ ಅಭಿಮಾನಿಗಳಿಗೆ , "2 ಮಿಲಿಯನ್ ಅನುಯಾಯಿಗಳಿಗೆ ಧನ್ಯವಾದಗಳು !! ನಿಮನ್ನು ತುಂಬಾ ಪ್ರೀತಿಸುವೆ !! # ಧನ್ಯವಾದಗಳು # 2 ಮಿಲಿಯನ್ " ಎಂದು ತಮ್ಮ ಪೋಸ್ಟ್‌ಗೆ ಕ್ಯಾಪ್ಟನ್ ಕೊಟ್ಟಿದ್ದಾರೆ. ಅವರು ಬ್ರಾ ತೊಟ್ಟಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿರುವುದರಿಂದ ಎಲ್ಲರೂ ಹುಬ್ಬೇರಿಸಿದ್ದಾರೆ.
ಉರ್ಫಿ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆಯನ್ನೆ ಹರಿಸಿದ್ದಾರೆ. ಹಲವರು 2 ಮಿಲಿಯನ್ ಅನುಯಾಯಿಗಳನ್ನು ಪಡೆದ ಹಿನ್ನೆಲೆಯಲ್ಲಿ ನಟಿಯನ್ನು ಅಭಿನಂದಿಸಿದರೆ, ಇನ್ನಿತರರು ನಟಿಯ ಉಡುಪಿನ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಗ್ರೂಪ್ ಬೋಲ್ಡ್ ಹಾಗೂ ಕಟ್ - ಔಟ್ ಧಿರಿಸುಗಳನ್ನು ಧರಿಸಿಕೊಂಡು ಉರ್ಫಿ ಯಾವಾಗಲು ಸುದ್ದಿಯಲ್ಲಿರುತ್ತಾರೆ. ಉರ್ಫಿ ಜಾವೇದ್ ಅವರ ವಿವಿಧ ಮೈತೋರಿಸುವ ಔಟ್‌ಫಿಟ್‌ಗಳು ನೆಟ್ಟಿಗರಲ್ಲಿ ತಲ್ಲಣ ಮೂಡಿಸಿದ್ದು, ಇದಕ್ಕಾಗಿ ಅವರು ಟ್ರೋಲ್ ಆಗುವುದು ಸಾಮಾನ್ಯವಾಗಿದೆ. ಆದರೆ ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ತಮ್ಮನ್ನು ಟ್ರೋಲ್ ಮಾಡುವವರಿಗೆ ಇತ್ತೀಚೆಗೆ ದಿಟ್ಟ ಉತ್ತರ ಸಹ ಕೊಟ್ಟಿದ್ದಾರೆ . ಕಸ್ಟಮೈಸ್ ಜ್ಯಾಕೆಟ್ ಮೇಲೆ ಅವರು "ಮೈಂಡ್ ಯುವರ್ ಓನ್ ಬಿಸಿನೆಸ್" ಅಂದರೆ 'ನಿಮ್ಮ ಕೆಲಸ ನೀವ್ ನೋಡ್ಕೊಳ್ಳಿ' ಎಂದು, ಟ್ರೋಲಿಗರಿಗೆ ಪರೋಕ್ಷವಾಗಿ ಉತ್ತರ ಯುಟ್ಯೂಬ್ ನೀಡಿದ್ದಾರೆ.