ಪರೀಕ್ಷೆ ಬರೆಯಲು ಬಂದಿದ್ದ ಬಾಣಂತಿ ಅಭ್ಯರ್ಥಿಯ 3 ತಿಂಗಳ ಹಸುಗೂಸನ್ನು ಆರೈಕೆ ಮಾಡಿದ ಮಹಿಳಾ ಕಾನ್ ಸ್ಟೇಬಲ್: ಎಲ್ಲೆಡೆಯಿಂದ ಮೆಚ್ಚುಗೆ!
Thursday, December 23, 2021
ಹಾವೇರಿ: ಪೊಲೀಸರೆಂದರೆ ತೀರಾ ಕಠೋರಿಗಳು, ಕಟು ಮನಸ್ಸಿನವರು ಎಂದೇ ಎಲ್ಲರೂ ಅವರಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಂಡಿರುತ್ತಾರೆ. ಆದರೆ ಇಲ್ಲೊಂದು ಘಟನೆಯನ್ನು ಕೇಳಿದಾಗ ಎಲ್ಲರೂ ತಮ್ಮ ಅಭಿಪ್ರಾಯ ಬದಲಿಸುದಂತೂ ಖಂಡಿತಾ.
ಇತ್ತೀಚೆಗೆ ನಡೆದಿರುವ ಕೆಪಿಎಸ್ಸಿ ಪರೀಕ್ಷೆಯ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಮಹಿಳಾ ಪೊಲೀಸ್ ಓರ್ವರ ಆಂತರ್ಯದಿಂದ ಇಡೀ ಪೊಲೀಸರ ಬಗೆಗಿನ ದೃಷ್ಟಿಕೋನವನ್ನೇ ಬದಲಿಸಿದೆ. ಈ ಪರೀಕ್ಷೆ ಬರೆಯಲೆಂದು ಸವಣೂರು ಮೂಲದ ಬಾಣಂತಿ ಅಭ್ಯರ್ಥಿಯೋರ್ವರು ಮಗುವಿನೊಂದಿಗೆ ಹಾಜರಾಗಿದ್ದರು. ಆಕೆ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಬಂದೋಬಸ್ತ್ಗೆಂದು ಬಂದಿದ್ದ ಮಹಿಳಾ ಕಾನ್ ಸ್ಟೇಬಲ್ ನೇತ್ರಾವತಿ ಎಂಬವರು ಮಗುವನ್ನು ತಾಯಿಯಂತೆ ಆರೈಕೆ ಮಾಡಿದ್ದಾರೆ.
ಈ ಘಟನೆ ನಡೆದಿದ್ದು ಹಾವೇರಿಯ ಎಸ್ಜೆಎಂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ. ಮಹಿಳಾ ಪೊಲೀಸ್ ಪೇದೆ ನೇತ್ರಾವತಿ ತಮ್ಮ ಕರ್ತವ್ಯದ ಜೊತೆಗೆ ಪರೀಕ್ಷೆ ಬರೆಯಲು ಬಂದಿದ್ದ ಬಾಣಂತಿ ಅಭ್ಯರ್ಥಿಗೆ ಧೈರ್ಯ ಹೇಳಿ, ಅಳುತ್ತಿದ್ದ ಮಗುವನ್ನು ಆರೈಕೆ ಮಾಡಿದ್ದಾರೆ. 3 ತಿಂಗಳ ಹಸೂಗೂಸು ಎತ್ತಿ ಆಡಿಸಿ ಮಾನವೀಯತೆ ಮೆರೆದಿದ್ದಾರೆ.
ಪರೀಕ್ಷೆಗೆ ಸಮಯವಾಗುತ್ತದೆ ಬಾಣಂತಿ ಅಭ್ಯರ್ಥಿಯು, ಮಗು ಅಳುತ್ತಿದ್ದರೂ ಕಡೆ ಗಮನಕೊಡದೆ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಮಹಿಳಾ ಕಾನ್‌ಸ್ಟೆಬಲ್ ನೇತ್ರಾವತಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗೆ ಧೈರ್ಯ ಹೇಳಿ ಮಗುವನ್ನು ಸಮಾಧಾನ ಮಾಡಿ ಆರೈಕೆ ಮಾಡಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಾತೃ ಪ್ರೇಮ ಮೆರೆದ ಕಾನ್ ಸ್ಟೇಬಲ್ ನೇತ್ರಾವತಿ ಅವರನ್ನು ಕಾಲೇಜು ಸಿಬ್ಬಂದಿ ಹಾಡಿ ಹೋಗಳಿದೆ. ಅಲ್ಲದೆ, ಪೊಲೀಸ್ ಇಲಾಖೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.