-->
ಹೃದಯ ಕದ್ದ ಬಾಲ್ಯದ ಗೆಳತಿಯೊಂದಿಗೆ ಸಪ್ತಪದಿ ತುಳಿದ ತೇಜಸ್ವಿ ಯಾದವ್: ಲಾಲೂ ಪ್ರಸಾದ್ ಈ ಕಿರಿಯ ಪುತ್ರನಿಗೆ 44 ಸಾವಿರ ಸಂಬಂಧ ಬಂದಿತ್ತಂತೆ

ಹೃದಯ ಕದ್ದ ಬಾಲ್ಯದ ಗೆಳತಿಯೊಂದಿಗೆ ಸಪ್ತಪದಿ ತುಳಿದ ತೇಜಸ್ವಿ ಯಾದವ್: ಲಾಲೂ ಪ್ರಸಾದ್ ಈ ಕಿರಿಯ ಪುತ್ರನಿಗೆ 44 ಸಾವಿರ ಸಂಬಂಧ ಬಂದಿತ್ತಂತೆ

ಲಕ್ನೋ: ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಪುತ್ರ, ಬಿಹಾರದ ಮಾಜಿ ಸಿಎಂ ತೇಜಸ್ವಿ ಯಾದವ್‌ ವಿವಾಹ ಗುರುವಾರ ದೆಹಲಿಯಲ್ಲಿ ನೆರವೇರಿತು. ತೇಜಸ್ವಿ ಯಾದವ್ ಅವರು ಹರಿಯಾಣ ಮೂಲದ ಉದ್ಯಮಿಯೋರ್ವರ ಪುತ್ರಿ, ಬಾಲ್ಯದ ಗೆಳತಿ ರಚೆಲ್‌ರನ್ನು ವಿವಾಹವಾಗಿದ್ದಾರೆ. 'ಹಲಿಯ ಸೈನಿಕ್‌' ಫಾರ್ಮ್ ಹೌಸ್ ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಹಾಗೂ ಖಾಸಗಿಯಾಗಿ ಈ ವಿವಾಹ ನಡೆದಿದೆ. ಈ ಕಾರ್ಯಕ್ರಮಕ್ಕೆ ಕನಿಷ್ಠ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸಲಾಗಿದ್ದು, ಕುಟುಂಬದವರನ್ನು ಹೊರತು ಪಡಿಸಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮಾತ್ರ ಭಾಗವಹಿಸಿದ್ದರು. ವಿವಾಹದ ಫೋಟೊಗಳು ವೈರಲ್‌ ಆಗುತ್ತಿದ್ದಂತೆ ಪಾಟ್ನಾದಲ್ಲಿ ಲಾಲೂ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿದರು.

ನಿಜವಾಗಿ, ತೇಜಸ್ವಿ ಯಾದವ್ ವಧು ಆಗಲಿರುವ ಹುಡುಗಿ ಯಾರು ಎಂಬುದು ಲಕ್ಷಾಂತರ ಜನರ ಕುತೂಹಲಕ್ಕೆ ಕಾರಣವಾಗಿದೆ. ಅದಕ್ಕಾಗಿ ಎಲ್ಲರೂ ಈ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ತೇಜಸ್ವಿ ಹೃದಯ ಕದ್ದ ಚೆಲುವೆ ಯಾರೆಂಬುವುದೇ ಈ ಹುಡುಕಾಟಕ್ಕೆ ಕಾರಣವಾಗಿತ್ತು.

ತೇಜಸ್ವಿ ಯಾದವ್ ವಿವಾಹದ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಚರ್ಚೆ ನಡೆಯುತ್ತಿತ್ತು. ಅವರು ರಾಜಕೀಯಕ್ಕೆ ಬಂದಾಗಲೇ ಹಲವಾರು ಸಂಬಂಧಗಳು ಅರಸಿ ಬರಲಾರಂಭಿಸಿತು. ಈ ಮಧ್ಯೆ ಅವರು ಬಿಹಾರದಲ್ಲಿ ಡಿಸಿಎಂ ಆಗಿದ್ದಾಗ ಯುವತಿಯರು ಅವರನ್ನು ಮದುವೆಯಾಗಲು ಪೈಪೋಟಿಗಿಳಿದಿದ್ದರು. ಅಲ್ಲದೆ ಸರ್ಕಾರಿ ವೆಬ್‌ಸೈಟ್‌ನಲ್ಲಿಯೂ ಅವರಿಗೆ ಹೆಣ್ಣುಮಕ್ಕಳ ಸಂಬಂಧಗಳೂ ಹರಿದು ಬಂದಿದ್ದವು.


ಬಿಹಾರ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ತೇಜಸ್ವಿ ಯಾದವ್ ತಮ್ಮ ವಾಟ್ಸ್ಆ್ಯಪ್ ಸಂಖ್ಯೆಯನ್ನು ಸರ್ಕಾರಿ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದರು. ಈ ಮೂಲಕ ಜನತೆ ತಮ್ಮ ಸಮಸ್ಯೆಗಳನ್ನು ಫೋಟೋಗಳೊಂದಿಗೆ ಹಂಚಿಕೊಳ್ಳುವಂತೆ ತಿಳಿಸಿದ್ದರು. ಆದರೆ ಹಲವರು ತಮ್ಮ ಮಕ್ಕಳನ್ನು ಮದುವೆಗೆಯಾಗುವಂತೆ ಕೇಳಿಕೊಂಡು ಹೆಣ್ಣು ಮಕ್ಕಳ  ಫೋಟೋ ಶೇರ್ ಮಾಡಲು ಆರಂಭಿಸಿದರು. ಅಲ್ಲದೆ ಕುಟುಂಬದ ಎಲ್ಲಾ ವಿವರಗಳು ಸೇರಿದಂತೆ ಜಾತಕವನ್ನೂ ಕಳುಹಿಸುತ್ತಿದ್ದರು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸುಮಾರು 44,000 ಹುಡುಗಿಯರ ಸಂಬಂಧಗಳು ಈ ವಾಟ್ಸ್ಆ್ಯಪ್ ಸಂಖ್ಯೆಗೆ ಕೋರಿ ಬಂದಿದ್ದವು. ಎಲ್ಲರೂ ತೇಜಸ್ವಿಯನ್ನು ತಮ್ಮ ಅಳಿಯನನ್ನಾಗಿ ಮಾಡಲು ಬಯಸಿದ್ದರು.

ಲಾಲೂ ಕಿರಿ ಸೊಸೆ ಮೂಲತಃ ಹರಿಯಾಣದವರು. ಈ ಭಾವಿ ಸೊಸೆ ಕ್ರಿಶ್ಚಿಯನ್ ಕುಟುಂಬದಾಕೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಇದೆಲ್ಲವೂ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ. 

ಲಾಲೂ ಪ್ರಸಾದ್ ಯಾದವ್ ಅವರಿಗೆ 7 ಮಂದಿ ಪುತ್ರಿಯರು ಮತ್ತು ಇಬ್ಬರು ಪುತ್ರರಿದ್ದಾರೆ. ತೇಜಸ್ವಿ ಯಾದವ್ (32) ಇವರಲ್ಲಿ ಎಲ್ಲರೂ ಅತ್ಯಂತ ಕಿರಿಯ. ಆದಾಗ್ಯೂ, ತೇಜಸ್ವಿ ಅವರನ್ನು ಲಾಲೂ ಪ್ರಸಾದ್ ಯಾದವ್ ರಾಜಕೀಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಲಾಲು ಅನುಪಸ್ಥಿತಿಯಲ್ಲಿ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದಾರೆ. 

ಸದ್ಯ ತೇಜಸ್ವಿ ಬಿಹಾರದ ವಿರೋಧ ಪಕ್ಷದ ನಾಯಕರೈ ಆಗಿದ್ದಾರೆ. ತೇಜಸ್ವಿ ರಾಘೋಪುರ ಕ್ಷೇತ್ರದಿಂದ ಶಾಸಕರಾಗಿದ್ದಾರೆ ಮತ್ತು 2015 ರಿಂದ 2017 ರವರೆಗೆ ಬಿಹಾರದ ಡಿಸಿಎಂ ಕೂಡಾ ಆಗಿದ್ದರು. ತೇಜಸ್ವಿ ಕ್ರಿಕೆಟ್‌ ಕ್ಷೇತ್ರದಲ್ಲೂ ಸಾಧನೆ ಮಾಡಲು ಪ್ರಯತ್ನಿಸಿದ್ದಾರೆ. ಅವರು ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿ ಆಡಿದ್ದಾರೆ. ಅಲ್ಲದೇ ಜಾರ್ಖಂಡ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು.

Ads on article

Advertise in articles 1

advertising articles 2

Advertise under the article