ವಯಾಗ್ರ ತೆಗೆದುಕೊಂಡು ಸೆಕ್ಸ್ ಮಾಡಲು ಸಿದ್ಧನಾದ 80ರ ಪತಿ: ಸಹಕರಿಸದ 61ರ ಪತ್ನಿಯನ್ನು ಇರಿದು ಕೊಂದ
Friday, December 31, 2021
ರೋಮ್: 80 ವರ್ಷದ ವೃದ್ಧನೊಬ್ಬ ವಯಾಗ್ರ ಮಾತ್ರೆ ಸೇವಿಸಿ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ ವೇಳೆ ಒಪ್ಪಿಗೆ ನೀಡದ 61 ವರ್ಷದ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಟಲಿಯಲ್ಲಿ ನಡೆದಿದೆ.
ನತಾಲಿಯಾ ಕೈರೋ ಚೊಕ್ (61) ಹತ್ಯೆಯಾದ ದುರ್ದೈವಿ ಮಹಿಳೆ. ಪತಿ ವಿಟೋ ಕಂಗಿನಿ (80) ಹತ್ಯೆ ಮಾಡಿರುವ ಆರೋಪಿ. ಇತ್ತೀಚೆಗಷ್ಟೇ ಇಬ್ಬರೂ ಕ್ರಿಸ್ಮಸ್ ಆಚರಣೆ ಮಾಡಿದ್ದರು. ಈ ವೇಳೆ ವಿಟೋ, ಪತ್ನಿ ನತಾಲಿಯಾ ಜತೆ ಲೈಂಗಿಕ ಕ್ರಿಯೆ ನಡೆಸಲು ಬಯಸಿದ್ದನೆಂದು ತಿಳಿದು ಬಂದಿದೆ. ತನ್ನ ಬಯಕೆಯನ್ನು ಆತ ಪತ್ನಿಯೊಂದಿಗೆ ಹೇಳಿಕೊಂಡಿದ್ದ. ಆಕೆಯೂ ಸಮ್ಮತಿ ನೀಡಿದ್ದಳು. ಆದರೆ ವಿಟೋಗೆ 80ರ ವಯಸ್ಸಾದ ಕಾರಣ ಲೈಂಗಿಕ ಶಕ್ತಿ ಕುಂದಿರುವ ಹಿನ್ನೆಲೆಯಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವಯಾಗ್ರ ಮಾತ್ರೆ ತೆಗೆದುಕೊಂಡಿದ್ದರು.
ಪತ್ನಿ ಬಂದೊಡನೆ ಆಕೆಯನ್ನು ತಬ್ಬಿಕೊಂಡು ಬೆಡ್ರೂಮ್ಗೆ ಕರೆದೊಯ್ದಿದ್ದಾನೆ. ಆದರೆ, ನತಾಲಿಯಾ ಪತಿಯನ್ನು ಪಕ್ಕಕ್ಕೆ ತಳ್ಳಿ, ಈಗ ಬೇಡ ಆಮೇಲೆ ಎಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪತ್ನಿಯು ಕೂಡ ಪತಿಯ ಮೇಲೆ ಕೂಗಾಡಿದ್ದಾಳೆ.
ಇದರಿಂದ ರೇಗಿದ ಪತಿ ವಿಟೊ ಪತ್ನಿಯ ಮೇಲೆ ಕೋಪಿತನಾಗಿ ತಾಳ್ಮೆ ಕಳೆದುಕೊಂಡು ಪಕ್ಕದಲ್ಲೇ ಇದ್ದ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ನಡೆದ ಎರಡು ದಿನಗಳವರೆಗೆ ಏನೂ ಆಗಿಲ್ಲವೆಂಬಂತೆ ವಿಟೋ ಓಡಾಡಿಕೊಳ್ಳುತ್ತಿದ್ದ. ಆ ಬಳಿಕ ಕೆಲವರಲ್ಲಿ ತಾನು ಪತ್ನಿಯನ್ನು ಕೊಂದಿರುವುದಾಗಿಯೂ ಹಾಗೂ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ಹೇಳಿದ್ದ. ಇದನ್ನು ಕೇಳಿ ಜತೆಗಿದ್ದವರು ಬೆದರಿ ಹೋಗಿದ್ದರು. ಬಳಿಕ ಈ ಮಾಹಿತಿ ಪೊಲೀಸರಿಗೆ ತಿಳಿಯಿತು.
ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ನತಾಲಿಯಾ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ತಕ್ಷಣ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ದೇಹಕ್ಕೆ ಅನೇಕ ಬಾರಿ ಚುಚ್ಚಿರುವುದಲ್ಲದೇ, ಹೃದಯಭಾಗಕ್ಕೆ ನೇರವಾಗಿ ಚಾಕು ಚುಚ್ಚಿದ್ದಾರೆ. ಸ್ಥಳದಲ್ಲಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿ ವಿಟೋನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.