ಓರ್ವನ ಹೆಸರಿನಲ್ಲಿ 9ಕ್ಕಿಂತ ಹೆಚ್ಚು ಸಿಮ್ ಇದ್ದರೆ ಹೆಚ್ಚುವರಿ ಸಿಮ್ ಆಗಲಿದೆ ಡೀಆಕ್ಟಿವೇಟ್
Friday, December 10, 2021
ನವದೆಹಲಿ: ಓರ್ವನ ಹೆಸರಿನಲ್ಲಿ 9ಕ್ಕಿಂತ ಹೆಚ್ಚುವರಿ ಸಿಮ್ ಹೊಂದಿದ್ದರೆ, ಹೆಚ್ಚುವರಿ ಸಿಮ್ ಅನ್ನು ನಿಷ್ಕ್ರಿಯಗೊಳಿಸಲು (ಡೀಆಕ್ಟಿವೇಟ್) ದೂರಸಂಪರ್ಕ ಇಲಾಖೆ (ಡಿಒಟಿ) ನಿರ್ಧರಿಸಿದೆ.
ದೇಶದ ಇತರ ಕಡೆಗಳಲ್ಲಿ 9ಕ್ಕಿಂತ ಅಧಿಕ ಸಿಮ್ ಹೊಂದಿದ್ದನ್ನು ಡೀಆ್ಯಕ್ಟಿವ್ ಮಾಡಿದ್ದರೆ. ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂನಲ್ಲಿ 6ಕ್ಕಿಂತ ಅಧಿಕ ಸಿಮ್ ಹೊಂದಿರುವವರ ಹೆಚ್ಚುವರಿ ಸಿಮ್ ಪರಿಶೀಲನೆಗೆ ಡಿಒಟಿ ಆದೇಶಿಸಿದೆ. ಪರಿಶೀಲನೆಗೆ ಒಳಪಡದ ಸಿಮ್ ಗಳನ್ನು ಸಂಪರ್ಕ ಕಡಿತ ಮಾಡಲು ಸೂಚಿಸಿದೆ. ಉಳಿಸಿಕೊಳ್ಳಬೇಕಾಗಿರುವ ಸಿಮ್ ಯಾವುದು ಎಂಬುದನ್ನು ಚಂದಾದಾರರ ಆಯ್ಕೆಗೆ ಬಿಡಲಾಗಿದೆ. ಯಾವುದನ್ನು ಡೀಆಕ್ಟಿವೇಟ್ ಮಾಡಬಹುದು ಎನ್ನುವುದನ್ನೂ ಅವರೇ ನಿರ್ಧರಿಸಬಹುದು ಎಂದು ಡಿ.7ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಡಿಒಟಿ ಪರಿಶೀಲನೆ ವೇಳೆ ಒಬ್ಬರೇ ಚಂದಾದಾರರು ಮೇಲೆ ಹೇಳಿದ ಮಿತಿಯನ್ನು ಮೀರಿದ ಸಿಮ್ ಗಳನ್ನು ಹೊಂದಿದ್ದಲ್ಲಿ ಎಲ್ಲಾ ಸಿಮ್ ಗಳನ್ನು ಮರು-ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಹೆಚ್ಚುತ್ತಿರುವ ಆರ್ಥಿಕ ಅಪರಾಧ, ಅನಪೇಕ್ಷಿತ ಕಿರಿಕಿರಿ ಕರೆಗಳು, ಸ್ವಯಂಚಾಲಿತ ಕರೆಗಳು ಹಾಗೂ ವಂಚನೆಯ ಕರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಒಟಿ ಈ ಆದೇಶ ಹೊರಡಿಸಿದೆ ಎಂದು ಹೇಳಲಾಗುತ್ತಿದೆ.