-->
ಹಾಸನ ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಯಡಿಗೆ ಸಿಕ್ಕ ಅವಳಿ ಮಕ್ಕಳ ದೇಹ ಛಿದ್ರಛಿದ್ರ: ಹೆತ್ತವರ ಸ್ಥಿತಿ ಚಿಂತಾಜನಕ!

ಹಾಸನ ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಯಡಿಗೆ ಸಿಕ್ಕ ಅವಳಿ ಮಕ್ಕಳ ದೇಹ ಛಿದ್ರಛಿದ್ರ: ಹೆತ್ತವರ ಸ್ಥಿತಿ ಚಿಂತಾಜನಕ!

ಹಾಸನ: ಇಲ್ಲಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಭೂವನಹಳ್ಳಿಯ ಸಮೀಪ ಸಂಭವಿಸಿರುವ ಭೀಕರ ಅಪಘಾತವೊಂದರಲ್ಲಿ 3 ವರ್ಷದ ಅವಳಿ ಮಕ್ಕಳಿಬ್ಬರೂ ಸ್ಥಳದಲ್ಲೇ ಮೃತಪಟ್ಟರೆ, ತಂದೆ-ತಾಯಿಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಘಟನೆಯಲ್ಲಿ ಹಾಸನದ ಗವೇನಹಳ್ಳಿಯ ಶಿವಾನಂದ್ ಹಾಗೂ ಜ್ಯೋತಿ ದಂಪತಿಯ ಅವಳಿ ಮಕ್ಕಳಾದ ಪ್ರಣತಿ (3), ಪ್ರಣವ್ (3) ಮೃತಪಟ್ಟ ಮಕ್ಕಳು. ದಂಪತಿಗೂ ಗಂಭೀರ ಗಾಯಗಳಾಗಿ, ಚಿಂತಾಜನಕ ಸ್ಥತಿಯಲ್ಲಿದ್ದು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಭೂವನಹಳ್ಳಿಯ ಸಮೀಪ ದಂಪತಿ ಸ್ಕೂಟರ್​ನಲ್ಲಿ ಹೋಗುತ್ತಿದ್ದರು. ಈ ಸಂದರ್ಭ ಹಿಂಭಾಗದಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಲಾರಿ ಒಟ್ಟು ನಾಲ್ಕು ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ. 

ಢಿಕ್ಕಿ ಹೊಡೆದ ಬಳಿಕ ಲಾರಿ ದಂಪತಿಯ ಬೈಕ್​ ಅನ್ನು ಸ್ವಲ್ಪ ದೂರ ಜತೆಗೆ ಎಳೆದೊಯ್ಯಲ್ಪಟ್ಟಿದೆ.  ಟಯರ್​ ಅಡಿಗೆ ಸಿಕ್ಕ ಮಕ್ಕಳ ದೇಹಗಳೂ ಸುಮಾರಷ್ಟು ದೂರ ಎಳೆದೊಯ್ಯಲ್ಪಟ್ಟಿದೆ. ಈ ಸಂದರ್ಭ ಸಾರ್ವಜನಿಕರು ಲಾರಿಯನ್ನು ತಡೆದು ಚಾಲಕನನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. 

ಈ ಬಗ್ಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article