ಏಲಿಯನ್ ಗಳನ್ನು ಕಂಡಿದ್ದೇವೆ ಎಂದ ಪೈಲಟ್ ಗಳು: ಹಾರಾಟ ಮಾಡುತ್ತಿದ್ದ ಅನ್ಯಗ್ರಹ ಜೀವಿಗಳು ಕ್ಯಾಮರಾದಲ್ಲಿ ಸೆರೆ
Sunday, December 12, 2021
ನ್ಯೂಯಾರ್ಕ್: ಏಲಿಯನ್ ಹಾಗೂ ಹಾರಾಡುವ ತಟ್ಟೆಗಳ ಬಗ್ಗೆ ಸಾಕಷ್ಟು ಕಾಲಗಳಿಂದ ಚರ್ಚೆಗಳು, ಸಂಶೋಧನೆಗಳು ನಡೆಯುತ್ತಲೇ ಇದೆ. ಹಲವರು ಇವುಗಳನ್ನು ತಾವು ಕಂಡಿದ್ದೇವೆ ಎಂದು ಹೇಳಿದರೆ, ಕೆಲವರು ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ.
2020ರಲ್ಲಿ ಬಾಹ್ಯಾಕಾಶ ಯಾನ ಮುಗಿಸಿ ಬಂದ ಮೊದಲ ಬ್ರಿಟಿಷ್ ಗಗನಯಾತ್ರಿ ಡಾ.ಹೆಲೆನ್ ಶರ್ಮಾನ್ ಈ ಹಿಂದೆ ಅನ್ಯಗ್ರಹ ಜೀವಿಗಳು ಇದ್ದಿರುವುದಂತೂ ಸತ್ಯ, ಏಲಿಯನ್‌ಗಳು ನಮ್ಮ ನಡುವೆ ಜೀವಿಸುತ್ತಿದ್ದರೂ ನಮ್ಮ ಕಣ್ಣಿಗೆ ಕಾಣಿಸದೇ ಇರಬಹುದು. ಸದ್ಯ ಈ ವಿಚಾರ ಏಕೆ ಮುನ್ನೆಲೆಗೆ ಬಂದಿದೆ ಎಂದರೆ ಇದೀಗ ಏಲಿಯನ್ ಗಳನ್ನು ಹೋಲುವ ಜೀವಿಗಳನ್ನು ಪೈಲಟ್‌ಗಳು ಕಂಡಿರುವುದಾಗಿ ವರದಿಯಾಗಿದೆ. ಮಾತ್ರವಲ್ಲದೇ ಇವುಗಳ ವೀಡಿಯೋ ಕೂಡ ಅವರು ಮಾಡಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ.
ಪೆಸಿಫಿಕ್ ಮಹಾಸಾಗರದ ಮೇಲೆ ಏಲಿಯನ್‌ಗಳು ಹಾರಾಟ ಮಾಡುತ್ತಿರುವುದನ್ನು ತಾವುಗಳು ನೋಡಿರುವುದಾಗಿ ಪೈಲಟ್ ಗಳು ಹೇಳಿದ್ದಾರೆ. ಅಲ್ಲದೆ ಇವುಗಳು ಹಾರಾಡುವ ತಟ್ಟೆಗಳೂ ಆಗಿರಬಹುದು ಎಂದೂ ಊಹಿಸಲಾಗಿದೆ. ಈ ಕುರಿತಾದ ವೀಡಿಯೋವನ್ನು ಅವರುಗಳು ಶೇರ್ ಮಾಡಿಕೊಂಡಿದ್ದಾರೆ.
ಶಂಕಿತ ಅನ್ಯಗ್ರಹ ಜೀವಿಗಳ ವಿಮಾನವು ಚಲಿಸುತ್ತಿದ್ದು, ಅದರ ದೀಪಗಳು ಮಾತ್ರ ಉರಿಯುತ್ತಿರುವ ದೃಶ್ಯವನ್ನು ನಾವು ನೋಡಿದೆವು ಎಂದು ಅವರು ಹೇಳಿದ್ದಾರೆ. ಫೆಸಿಫಿಕ್ ಮಹಾಸಾಗರದ ಮೇಲೆ ಹಾರಾಡುತ್ತಿರುವ ದೀಪಗಳು ಮಾತ್ರ ಕಾಣುತ್ತಿದೆ. ಆದರೆ, ಇದು ಅನ್ಯಜೀವಿಗಳು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಆದರೆ ಇವು ನಿಜಕ್ಕೂ ಏಲಿಯನ್‌ಗಳದ್ದಾ ಅಥವಾ ಬೇರೆ ಯಾವುದಾದರೂ ಜೀವಿಗಳದ್ದಿರಬಹುದೇ ಎಂಬುದರ ಬಗ್ಗೆ ತಿಳಿಯಲಿಲ್ಲ ಎಂದು ಅವರು ಹೇಳಿದ್ದಾರೆ. ಈ ವೀಡಿಯೋವನ್ನು 39 ಸಾವಿರ ಅಡಿ ಎತ್ತರದಲ್ಲಿ ಚಿತ್ರೀಕರಿಸಲಾಗಿದೆ.
ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ ನಾವು ಬಿಳಿಯ ಬಣ್ಣದ ವಸ್ತುಗಳು ಹಾರಾಡುತ್ತಿರುವುದನ್ನು ನೋಡಬಹುದು. ಮೂರು ಸಾಲುಗಳಲ್ಲಿ ಇವುಗಳು ಹಾರಾಟ ನಡೆಸುತ್ತಿವೆ. ಒಂದರಲ್ಲಿ ನಾಲ್ಕು ಚುಕ್ಕೆಗಳು ಕಂಡು ಬಂದರೆ, ಮತ್ತೆ ಎರಡರಲ್ಲಿ ಮೂರು ಚುಕ್ಕೆಗಳು ಕಂಡು ಬಂದಿವೆ. ಸ್ವಲ್ಪ ಹಾರಾಟದ ನಂತರ ಇವು ಮೋಡದ ಮರೆಯಲ್ಲಿ ಕಣ್ಮರೆಯಾಗಿದೆ.
ಕೆಲವರು ಈ ವೀಡಿಯೋ ನೋಡಿ ಇವುಗಳು ಏಲಿಯನ್ ಗಳೂ ಅಲ್ಲ, ಹಾರಾಡುವ ತಟ್ಟೆಗಳೂ ಅಲ್ಲ ಅಥವಾ ಯಾವುದೇ ಜೀವಿಯೂ ಅಲ್ಲ. ಇದು ಯುದ್ಧನೌಕೆಯಿಂದ ಹೊಡೆದ ಕ್ಷಿಪಣಿಗಳಾಗಿರಬಹುದು ಎಂದು ವಾದಿಸುತ್ತಿದ್ದಾರೆ. ಕೆಲವು ಮಂದಿ ಶಂಕಿಸಿದ್ದಾರೆ. ಪಂಜಾಬ್‌ನಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಆಕಾಶದಲ್ಲಿ ಪ್ರಕಾಶಮಾನವಾದ ದೀಪಗಳ ನಿಗೂಢ ರೇಖೆಯನ್ನು ನೋಡಿದ್ದಾಗಿ ಹೇಳಿದ್ದರು. ಬಳಿಕ ಅದು ಉಪಗ್ರಹ ಎಂದು ತಿಳಿದುಬಂದಿತ್ತು. ಅದೇ ರೀತಿ ಇದರ ವಿವರ ಇನ್ನಷ್ಟೇ ಹೊರಬರಬೇಕಿದೆ.
A pilot claims he saw a fleet of #UFOs over the Pacific Ocean. The video was shot at around 39,000 feet. 🛸👽
— Chillz TV (@ChillzTV) December 7, 2021
The suspected #alien aircraft took the form of ‘weird’ rotating lights moving across the sky. 😳
What are your thoughts on the footage? 👀🤔 pic.twitter.com/N0I2WS2kYq