
Alvas Engineering College- ಆಳ್ವಾಸ್: ಐದು ದಿನಗಳ ಶಿಕ್ಷಕ ಪುನಶ್ಚೇತನ (ಎಫ್‌ಡಿಪಿ) ಕಾರ್ಯಕ್ರಮ
ಆಳ್ವಾಸ್: ಐದು ದಿನಗಳ ಶಿಕ್ಷಕ ಪುನಶ್ಚೇತನ (ಎಫ್‌ಡಿಪಿ) ಕಾರ್ಯಕ್ರಮ
ಮೂಡುಬಿದಿರೆಯ ಮಿಜಾರಿನಲ್ಲಿ ಇರುವ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ‘ಟ್ರೆಂಡ್ಸ್ ಇನ್ ಮೆಮ್ಸ್ ಆಂಡ್ ನ್ಯಾನೋಟೆಕ್ನಾಲಜಿ’ ವಿಷಯದ ಕುರಿತು 5 ದಿನಗಳ ಶಿಕ್ಷಕ ಪುನಶ್ಚೇತನ (ಎಫ್‌ಡಿಪಿ) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದೆಹಲಿಯ ಎಐಸಿಟಿಇ ಟ್ರೇನಿಂಗ್ ಆಂಡ್ ಲರ್ನಿಂಗ್ (ಅಟಲ್) ಅಕಾಡೆಮಿ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
5 ದಿನಗಳ ತರಬೇತಿಯ ಮೊದಲ ದಿನದಲ್ಲಿ ಬಾಗಲಕೋಟೆಯ BEC ಪ್ರಾಧ್ಯಾಪಕ ಡಾ ಬಸವಪ್ರಭು ಶ್ರೀಪರಿಮಟ್ಟಿ, ಐಐಟಿ-ಮದ್ರಾಸ್‌ನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರರಾವ್ ಎಮ್ ಎಸ್, ಆಳ್ವಾಸ್ ಇಲೆಕ್ಟಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಡಿ. ವಿ ಮಂಜುನಾಥ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ದೇಶದ ವಿವಿಧ ತಾಂತ್ರಿಕ ವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ 77 ಮಂದಿ ಮೊದಲ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಕಾಲೇಜಿನ ರಿಸರ್ಚ್ ಡೀನ್ ಡಾ. ರಿಚರ್ಡ್ ಪಿಂಟೋ, ಪ್ರಾಧ್ಯಾಪಕ ಡಾ. ದತ್ತಾತ್ರೇಯ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ನಿಷ್ಮಾ ಕೆ., ಅರ್ಜುನ್ ರಾವ್ ಮತ್ತು ಅನೀಶ್ ನಿರೂಪಿಸಿದರು.