-->
ಮಗನ ಆಸೆ ನೆರವೇರಿಸಲು ವಾಹನವೊಂದನ್ನು ಆವಿಷ್ಕರಿಸಿದ ತಂದೆಗೆ ವಿಶಿಷ್ಟ ಆಫರ್ ನೀಡಿದ ಆನಂದ್ ಮಹೀಂದ್ರಾ

ಮಗನ ಆಸೆ ನೆರವೇರಿಸಲು ವಾಹನವೊಂದನ್ನು ಆವಿಷ್ಕರಿಸಿದ ತಂದೆಗೆ ವಿಶಿಷ್ಟ ಆಫರ್ ನೀಡಿದ ಆನಂದ್ ಮಹೀಂದ್ರಾ

ಮುಂಬೈ: ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ, ಮಹೀಂದ್ರಾ ಗ್ರೂಪ್​ ಆಫ್​ ಚೇರ್ಮನ್​ ಆನಂದ್​ ಮಹೀಂದ್ರಾ ಆಗಾಗ ತಮಗೆ ಕಂಡ ವಿಶೇಷತೆಗಳನ್ನು ಆಗಾಗ ಪರಿಚಯಿಸುತ್ತಿರುತ್ತಾರೆ. ಅದರಂತೆ ಈ ಬಾರಿ ಒಂದು ವಿಶೇಷ ವಾಹನವನ್ನು ಪರಿಚಯಿಸುತ್ತಾ ಅವರು ವಾಹನ ತಯಾರಿಸಿದವನಿಗೆ ಭಾರೀ ಆಫರ್​ ನೀಡುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ.

ಮಹಾರಾಷ್ಟ್ರದ ದತ್ತಾತ್ರೇಯ ಲೋಹರ್​ ಎಂಬುವರು ಹಾಳಾಗಿರುವ ಲೋಹಗಳ ಚೂರು ಹಾಗೂ ಗುಜರಿ ವಸ್ತುಗಳನ್ನು ಬಳಸಿಕೊಂಡು ನಾಲ್ಕು ಚಕ್ರದ ವಾಹನವನ್ನು ಸಂಶೋಧಿಸಿದ್ದರು. ಹಿಸ್ಟರಿಕೆನೋ ಎಂಬ ಹೆಸರಿನ ಯೂಟ್ಯೂಬ್​ ಚಾನೆಲ್​ ನಲ್ಲಿ ಈ ಬಗ್ಗೆ ವೀಡಿಯೋ ಅಪ್ಲೋಡ್ ಆಗಿತ್ತು. ದತ್ತಾತ್ರೆಯ ಲೋಹಾರ್​ ಅಲ್ಪಸ್ವಯ ಶಿಕ್ಷಣ ಪಡೆದಿದ್ದರೂ ತಮ್ಮ ಮಗನಿಗೋಸ್ಕರ ವಾಹನ ಸಂಶೋಧನೆ ಮಾಡಿದ್ದಾರೆ. ಈ ವಿಶಿಷ್ಟ ಸಂಶೋಧನೆಯನ್ನು ನೋಡಿ ಪ್ರಭಾವಿತರಾಗಿರುವ ಆನಂದ್​ ಮಹೀಂದ್ರಾ ತಕ್ಷಣ ವೀಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಮೆಂಟ್ಸ್ ಮಾಡಿರುವ, 'ಇದು ಸ್ಪಷ್ಟವಾಗಿ ಯಾವುದೇ ರೀತಿಯಲ್ಲಿ ವಾಹನವಾಗಿ ದೊಡ್ಡಮಟ್ಟದ ಪ್ರಯೋಜನವಾಗೋದಿಲ್ಲ. ಆದರೂ, ನಮ್ಮ ಜನರ ಜಾಣ್ಮೆ ಮತ್ತು ಸಾಮರ್ಥ್ಯಗಳನ್ನು ಮೆಚ್ಚುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. 

45 ಸೆಕೆಂಡ್ ನ ವೀಡಿಯೋದಲ್ಲಿ ಮಹಾರಾಷ್ಟ್ರದ ದೇವರಾಷ್ಟ್ರೇ ಗ್ರಾಮದ ಕಮ್ಮಾರ ಆಗಿರುವ ದತ್ತಾತ್ರೆಯ ಲೋಹರ್​ ಯಾವ ರೀತಿ ವಾಹನ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದ್ದಾರೆ. ಕೇವಲ 60 ಸಾವಿರ ರೂ‌.ನಲ್ಲಿ ವಾಹನವನ್ನು ತಯಾರಿಸಲಾಗಿದೆ. ಕೇವಲ ದ್ವಿಚಕ್ರ ವಾಹನಗಳಲ್ಲಿ ಇರುವಂತಹ ಕಿಕ್​ ಸ್ಟಾರ್ಟ್​ ಮೆಕ್ಯಾನಿಸಂ ವ್ಯವಸ್ಥೆಯು ಕೂಡ ಈ ವಾಹನದಲ್ಲಿದೆ. ಇದು ಹಳೆಯ ಮತ್ತು ಕೈಬಿಟ್ಟಂತಹ ಕಾರಿನ ಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ. 

ಈ ಬಗ್ಗೆ ಮತ್ತೊಂದು ಟ್ವೀಟ್​ ಮಾಡಿರುವ ಆನಂದ್​ ಮಹೀಂದ್ರಾ "ಆತನ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಬದಲು ವಾಹನವು ಸರ್ಕಾರದ ಕೆಲವು ನಿಯಮಗಳನ್ನು ಅನುಸರಿಸಿಲ್ಲ ಎಂದು ಕಾರಣ ನೀಡಿ ಸ್ಥಳೀಯ ಅಧಿಕಾರಿಗಳು ಅದನ್ನು ರಸ್ತೆಗಳಲ್ಲಿ ಓಡಿಸದಂತೆ ತಡೆದಿದ್ದಾರೆ. ಆದರೆ ವೈಯುಕ್ತಿಕವಾಗಿ ದತ್ತಾತ್ರೆಯ ಅವರಿಗೆ ಬೊಲೆರೋ ಕಾರು ವಿನಿಮಯದ ಆಫರ್​ ನೀಡಿದ್ದಾರೆ. ಅಲ್ಲದೆ, ಆತನ ಆವಿಷ್ಕಾರ ಇತರರಿಗೆ ಮಾದರಿಯಾಗಲು ಮಹೀಂದ್ರ ರೀಸರ್ಚ್​ ವ್ಯಾಲಿಯಲ್ಲಿ ಅದನ್ನು ಪ್ರದರ್ಶಿಸಲಾಗುವುದು" ಎಂದು ಭರವಸೆ ನೀಡಿದ್ದಾರೆ. ಸದ್ಯ ದತ್ತಾತ್ರೆಯ ಆವಿಷ್ಕಾರದ ವೀಡಿಯೋ ವೈರಲ್​ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article