ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ : ಕಾಲೆಳೆದ ನೆಟ್ಟಿಗರು!
Monday, December 27, 2021
ನವದೆಹಲಿ: ಕ್ರಿಕೆಟಿಗ, ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ರೂಪದರ್ಶಿ, ನಟಿ ನತಾಶಾ ಸ್ಟಾಂಕೋವಿಕ್ ದಂಪತಿಯು 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನತಾಶಾ ಕುಟುಂಬದೊಂದಿಗೆ ಕ್ರಿಸ್‌ಮಸ್ ಪಾರ್ಟಿಯಲ್ಲಿ ‘ಬೇಬಿ ಬಂಪ್’ ಅನ್ನು ಪ್ರದರ್ಶನ ಮಾಡು ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
28 ವರ್ಷದ ಹಾರ್ದಿಕ್ ಪಾಂಡ್ಯ ಅವರು ನತಾಶಾರೊಂದಿಗೆ 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದೇ ವರ್ಷ ಮೇ ತಿಂಗಳಲ್ಲಿ ನತಾಶಾ ಗರ್ಭಿಣಿಯಾಗಿರುವುದನ್ನು ಪ್ರಕಟಿಸಿದ್ದರು. ಈ ಸಂದರ್ಭವೇ ಅವರು ತಮ್ಮ ಸರಳ ವಿವಾಹವನ್ನು ಬಹಿರಂಗಗೊಳಿಸಿದ್ದರು. ಜುಲೈನಲ್ಲಿ ಪುತ್ರ ಅಗಸ್ತ್ಯ ಜನಿಸಿದ್ದ.
ಸದ್ಯ ಗಾಯದ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನಿಂದ ದೂರವಿದ್ದಾರೆ. ಸಂಪೂರ್ಣ ಫಿಟ್ ಇಲ್ಲದಿದ್ದರೂ, ಕಳೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ಹಾರ್ದಿಕ್, ಇನ್ನು 2-3 ತಿಂಗಳ ಕಾಲ ಆಟವಾಡೋದು ಅನುಮಾನವೆನಿಸಿದೆ. 6 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್‌ನಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್‌ನಲ್ಲಿ ಹೊಸ ತಂಡವೊಂದರ ಪರವಾಗಿ ಆಡುವ ಸಾಧ್ಯತೆಗಳಿವೆ.
ಇದೀಗ ಹಾರ್ದಿಕ್ ಪಾಂಡ್ಯ 2ನೇ ಬಾರಿ ತಂದೆಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ನೆಟ್ಟಿಗರು ಕಾಲೆಳೆಯಲಾರಂಭಿಸಿದ್ದಾರೆ. ವಿವಾಹಕ್ಕೂ ಮುನ್ನವೇ ಹಾರ್ದಿಕ್ ಪಾಂಡ್ಯ ತಂದೆಯಾಗುತ್ತಿರುವ ವಿಚಾರ ಬಹಿರಂಗವಾದಾಗಲೂ ಇದೇ ರೀತಿ ಟ್ರೋಲ್‌ಗಳನ್ನು ಹಾರ್ದಿಕ್ ಎದುರಿಸಿದ್ದರು. ಈ ಬಾರಿ ‘ಎರಡನೆಯದ್ದೂ ಬರಲು ಸಿದ್ಧವಾಯಿತೇ’ ಎಂಬ ಕಾಮೆಂಟ್‌ಗಳ ಮೂಲಕ ಕಾಲೆಳೆದಿದ್ದಾರೆ. ‘ಹಾರ್ದಿಕ್ ಭಾಯ್ ಡೆಲಿವರಿ ಬಹಳ ಬೇಗನೆ ಮಾಡಿಸುತ್ತಾರೆ’ ಎಂದೂ ಕೆಲವರು ಛೇಡಿಸಿದ್ದಾರೆ. ಇನ್ನು ಹಲವು ಅಭಿಮಾನಿಗಳು ಹಾರ್ದಿಕ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.