ತಮ್ಮ ಬಾಯ್ ಫ್ರೆಂಡ್ ಬೆತ್ತಲೆ ಫೋಟೊವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಶ್ರುತಿ ಹಾಸನ್!
Monday, December 27, 2021
ಚೆನ್ನೈ: ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರು ಬಹುಬೇಡಿಕೆಯಲ್ಲಿರುವ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಟನೆ, ನೃತ್ಯ, ಗ್ಲಾಮರ್ ಹಾಗೂ ತಮ್ಮ ಗಾಯನದ ಮೂಲಕವೂ ಶ್ರುತಿ ಹಾಸನ್ ಎಲ್ಲರ ಹೃದಯವನ್ನು ಗೆದ್ದಿದ್ದಾರೆ. ಇನ್ನು ಆಕೆ ತನ್ನ ವೈಯಕ್ತಿಕ ವಿಚಾರದ ಮೂಲಕವೂ ಸುದ್ದಿಯಲ್ಲಿದ್ದಾರೆ.
ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿ ತಮ್ಮ ಬಾಯ್ಫ್ರೆಂಡ್ ಮೈಕಲ್ ಕೊರ್ಸಲೆಯೊಂದಿಗೆ ಬ್ರೇಕಪ್ ಮಾಡಿಕೊಂಡಿರುವ ಶ್ರುತಿ ಇದೀಗ ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ. ಇದೀಗ ಆಕೆ ಶಂತನು ಹಜಾರಿಕಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಬಾಯ್ಫ್ರೆಂಡ್ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಶ್ರುತಿ ಅವರು ಬಾಯ್ಫ್ರೆಂಡ್ ಶಂತನುವಿನ ಸಣ್ಣ ವಯಸ್ಸಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊ ಶಂತನು ಮಗುವಾಗಿದ್ದಾಗ ತೆಗೆದಿರುವ ಬೆತ್ತಲೆ ಫೋಟೋವಾಗಿದೆ. ಈ ಫೋಟೊದೊಂದಿಗೆ ತಮ್ಮ ಫೋಟೋವನ್ನು ಕೊಲ್ಯಾಜ್ ಮಾಡಿ ಶ್ರುತಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಫೋಟೋ ಬಗ್ಗೆ ಅವರು 'ಮೇಡ್ ಫಾರ್ ಈಚ್ ಅದರ್' ಎಂದು ಶ್ರುತಿ ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ವೈರಲ್ ಭಾರೀ ಆಗಿದೆ. ಶಂತನುವಿಗಿಂತಲೂ ಮೊದಲು ಶ್ರುತಿ ಹಾಸನ್, ಮೈಕಲ್ ಕೊರ್ಸಲೆ ಜೊತೆ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಶ್ರುತಿ ಮತ್ತು ಮೈಕಲ್ 2016ರಲ್ಲಿ ತಮ್ಮ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಈ ಸಂದರ್ಭ ಶ್ರುತಿ ಹಾಸನ್ ಆಗಾಗ ಲಾಸ್ ಏಂಜಲೀಸ್ಗೂ ಹೋಗಿ ಬರುತ್ತಿದ್ದರು. ಮೈಕಲ್ ಕೊರ್ಸಲೆ ಕೂಡ ಶ್ರುತಿಯ ಗುಂಗಿನಲ್ಲಿಯೇ ಪದೇ ಪದೆ ಭಾರತಕ್ಕೆ ಬಂದು ಹೋಗುತ್ತಿದ್ದರು. ಆದರೆ, 2019ರ ಎಪ್ರಿಲ್ನಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದೇವೆ ಎಂದು ಹೇಳಿಕೊಂಡಿದ್ದರು.
ಇದಾದ ಬಳಿಕ ಶ್ರುತಿ ಕೆಲ ಕಾಲ ಖಿನ್ನತೆಗೂ ಜಾರಿದ್ದರು. ಬಳಿಕ ಖಿನ್ನತೆಯಿಂದ ಹೊರಬಂದ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬಿಜಿಯಾದರೂ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಮತ್ತಷ್ಟು ಖ್ಯಾತಿಯನ್ನು ಪಡೆದುಕೊಂಡರು.
ಇದರ ಮಧ್ಯೆ ಶ್ರುತಿಗೆ ಶಂತನು ಪರಿಚಯವಾಗಿದ್ದಾರೆ. ಇಬ್ಬರ ಪರಿಚಯವೂ ಪ್ರೀತಿಗೆ ತಿರುಗಿ, ಇದೀಗ ಇವರಿಬ್ಬರೂ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದಾರೆ. ಇನ್ನು ಶ್ರುತಿ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅವರು ಕೊನೆಯದಾಗಿ ವಕೀಲ್ ಸಾಬ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಶ್ರುತಿ ನಾಯಕಿಯಾಗಿದ್ದಾರೆ. ಈ ಸಿನಿಮಾ 2022ರ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ.