-->
Brand Sahyadri - ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿಗೆ ಕೇಂದ್ರ ಸರ್ಕಾರದ ARIIA 2021 “ಅತ್ಯುತ್ತಮ” ಬ್ಯಾಂಡ್ ಗೌರವ

Brand Sahyadri - ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿಗೆ ಕೇಂದ್ರ ಸರ್ಕಾರದ ARIIA 2021 “ಅತ್ಯುತ್ತಮ” ಬ್ಯಾಂಡ್ ಗೌರವ

ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿಗೆ ಕೇಂದ್ರ ಸರ್ಕಾರದ ARIIA 2021 “ಅತ್ಯುತ್ತಮ” ಬ್ಯಾಂಡ್ ಗೌರವ





ಮಂಗಳೂರಿನ ಅಡ್ಯಾರ್‍ ನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿಗೆ ಕೇಂದ್ರ ಸರ್ಕಾರದ ARIIA 2021 “ಅತ್ಯುತ್ತಮ” ಬ್ಯಾಂಡ್ ಗೌರವ ಪ್ರಾಪ್ತವಾಗಿದೆ.



ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಆಯೋಜಿಸುವ ಪ್ರಮುಖ ಕಾರ್ಯಕ್ರಮವಾದ ಇನೊವೇಶನ್ ಅಚೀವ್‌ಮೆಂಟ್ 2021ರ ಅಟಲ್ ಶ್ರೇಯಾಂಕದಲ್ಲಿ ಖಾಸಗಿ/ ಸ್ವಯಂ - ಹಣಕಾಸು ತಾಂತ್ರಿಕ ಸಂಸ್ಥೆಗಳ ಕಾಲೆಜುಗಳು / ಸಂಸ್ಥೆಗಳ ವಿಭಾಗದಲ್ಲಿ ಸಹ್ಯಾದ್ರಿ “ಅತ್ಯುತ್ತಮ” (ಟಾಪ್ 100) ಬ್ಯಾಂಡ್‌ನಲ್ಲಿ ಗುರುತಿಸಲ್ಪಟ್ಟಿದೆ.



29-12-2021ರಂದು ನಡೆದ ಇ-ಬಿಡುಗಡೆ ಸಮಾರಂಭದಲ್ಲಿ ಫಲಿತಾಂಶಗಳನ್ನು ಶಿಕ್ಷಣ ಸಚಿವರಾದ ಡಾ. ಸುಭಾಸ್ ಸರ್ಕಾರ್ ಘೋಷಿಸಿದರು. 2020ರಲ್ಲಿ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜನ್ನು ARIIA ರಲ್ಲಿ, ಅತ್ಯಂತ ನವೀನ ಹಾಗೂ ಸ್ವ ಹಣಕಾಸಿನ ಖಾಸಗಿ ಸಂಸ್ಥೆಗಳಲ್ಲಿ ಭಾರತದಲ್ಲಿ ಟಾಪ್ 25 ರಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಟಾಪ್ 3 ರಲ್ಲಿ ಸೇರಿಸಲಾಗಿತ್ತು.



ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಶಿಕ್ಷಣ ಸಚಿವಾಲಯದ ಇನ್ನೊವೇಶನ್ ಘಟಕದ ಮೂಲಕ ಭಾರತದ ಎಲ್ಲಾ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ವ್ಯವಸ್ಥಿತವಾಗಿ ಶ್ರೇಯಾಂಕ ನೀಡಲು ಭಾರತದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ “ಇನೊವೇಶನ್ ಮತ್ತು ಎಂಟರ್‍ಪ್ರೆನ್ಯೂರ್‍ಶಿಪ್ ಡೆವೆಲಪ್‍ಮೆಂಟ್”ನ ಪ್ರಚಾರ ಮತ್ತು ಬೆಂಬಲಕ್ಕೆ ಸಂಬಂಧಿಸಿದ ಸೂಚಕಗಳನ್ನು ಕ್ರಮಬದ್ಧವಾಗಿ ಶ್ರೇಣೀಕರಿಸಲಾಗಿದೆ.


ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ಆವಿಷ್ಕಾರ ಮತ್ತು ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಗಣನೆಗೆ ತಂದುಕೊಂಡು ಇನ್‍ಪುಟ್, ಪ್ರಕ್ರಿಯೆ ಮತ್ತು ಔಟ್‍ಪುಟ್ ಮತ್ತು ಫಲಿತಾಂಶದ ನಿಯತಾಂಕಗಳನ್ನು ಒಳಗೊಂಡಿರುವ ವಿವಿಧ ನಿಯತಾಂಕಗಳನ್ನು ಚೌಕಟ್ಟಿನಲ್ಲಿ ಸೇರಿಸಲಾಗಿದೆ.


ಶ್ರೇಯಾಂಕಕ್ಕಾಗಿ ARIIA ನಲ್ಲಿ ಪರಿಗಣಿಸಲಾದ ಪ್ರಮುಖ ನಿಯತಾಂಕಗಳನ್ನು ಕೆಳಗೆ ನೀಡಲಾಗಿದೆ:


• ಕ್ಯಾಂಪಸ್‍ನಲ್ಲಿ ಆವಿಷ್ಕಾರ ಮತ್ತು ಸ್ಟಾರ್ಟ್ –ಅಪ್‍ನ ಪ್ರಾರಂಭವನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಚಟುವಟಿಕೆಗಳು



• ಕ್ಯಾಂಪಸ್‍ನಲ್ಲಿ ಪ್ರಿ-ಇಂಕ್ಯುಬೇಶನ್ ಮತ್ತು ಇಂಕ್ಯುಬೇಶನ್ ಮೂಲ ಸೌಕರ್ಯಗಳು ಲಭ್ಯವಿರುವುದು



• ಇನೊವೇಶನ್, ಐಪಿಆರ್ ಮತ್ತು ಸಾರ್ಟ್-ಅಪ್ ಕುರಿತು ಸಂಸ್ಥೆಯು ನೀಡುವ ಶೈಕ್ಷಣಿಕ ಕೋರ್ಸುಗಳು


• ಕ್ಯಾಂಪಸ್‍ನಿಂದ ಹೊರಹೊಮ್ಮುವ ಯಶಸ್ವಿ ಆವಿಷ್ಕಾರಗಳು ಮತ್ತು ಸ್ಟಾರ್ಟ್-ಅಪ್‍ಗಳು.


• ಪರಿಸರ ವ್ಯವಸ್ಥೆಯನ್ನು ಕಾಪಾಡುವವರೊಂದಿಗೆ ಹೂಡಿಕೆ, ಸಹಯೋಗ ಮತ್ತು ಪಾಲುದಾರಿಕೆ.


• ಸಂಶೋಧನಾ ಫಲಿತಾಂಶಗಳು, ಪ್ರಕಟಣೆಗಳು ಮತ್ತು ಬೌದ್ಧಿಅಕ ಗುಣಲಕ್ಷಣಗಳ ಪಟ್ಟಿ


• ತಂತ್ರಜ್ಞಾನ ವರ್ಗಾವಣೆ ಮತ್ತು ವಾಣಿಜ್ಯೀಕರಣ ಪ್ರಯತ್ನಗಳು.


ARIIAವು, ಭಾರತದಲ್ಲಿನ ಎಲ್ಲಾ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಶ್ರೇಯಾಂಕ 

ನೀಡುವ ಶಿಕ್ಷಣ ಸಚಿವಾಲಯದ ಹೊಸನೀತಿಯಾಗಿದೆ.


Ads on article

Advertise in articles 1

advertising articles 2

Advertise under the article