ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಪ್ರೇಯಸಿ ದೀಪ್ತಿಗೆ ಶಾಕ್ ನೀಡಿದ ಶಾನು: ಬೇಕ್ರ್ ಅಪ್ ವದಂತಿಗೆ ದಿಟವೇ?
Tuesday, December 21, 2021
ಹೈದರಾಬಾದ್: ತೆಲುಗಿನ ಪ್ರಖ್ಯಾತ ಯೂಟ್ಯೂಬರ್ ಗಳಾದ ಶಾನು ಅಲಿಯಾಸ್ ಷಣ್ಮುಖ ಜಸ್ವಂತ್ ಹಾಗೂ ದೀಪ್ತಿ ಸುನೈನಾ ಪ್ರೇಮಿಸುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವಂತದ್ದೇ, ಅದರಲ್ಲಿ ಹೊಸತೇನೂ ಇಲ್ಲ.
ಈ ವಿಚಾರವನ್ನು ಸ್ವತಃ ಷಣ್ಮುಖ್ ಹಾಗೂ ದೀಪ್ತಿ ಕೂಡ ಒಪ್ಪಿಕೊಂಡಿದ್ದರು.
ಈ ನಡುವೆ ಶಾನು ಬಿಗ್ಬಾಸ್ ಪ್ರವೇಶ ಮಾಡಿದಾಗ ಆತನಿಗೆ ಓಟ್ ಮಾಡುವಂತೆ ಅಭಿಮಾನಿಗಳ ಬಳಿ ದೀಪ್ತಿ ಮನವಿ ಮಾಡಿದ್ದರು. ಶಾನುಗೆ ಇರುವ ಖ್ಯಾತಿ ಹಾಗೂ ದೀಪ್ತಿಯ ಸಾಕಷ್ಟು ಪ್ರಯತ್ನಗಳ ನಡುವೆಯೂ ಆತನಿಗೆ ಬಿಗ್ಬಾಸ್ 5 ಟ್ರೋಫಿ ಗೆಲ್ಲಲು ಮಾತ್ರ ಸಾಧ್ಯವಾಗಲಿಲ್ಲ. ಕೊನೆಯ ಕ್ಷಣದಲ್ಲಿ ಅವರು ಮೊದಲನೆಯ ರನ್ನರ್ ಅಪ್ ಆಗಿ ಉಳಿದರು. ಶಾನುರನ್ನು ಹಿಂದಿಕ್ಕಿ ವಿಜೆ ಸನ್ನಿ ತೆಲುಗಿನ ಬಿಗ್ಬಾಸ್ 5 ವಿನ್ನರ್ ಆಗಿ ಹೊರಹೊಮ್ಮಿದ್ದರು. ಆದರೂ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಶಾನು ಧನ್ಯವಾದ ತಿಳಿಸಿದ್ದಾರೆ.
ಆದರೆ, ತನಗೆ ಅಷ್ಟೊಂದು ಸಪೋರ್ಟ್ ಮಾಡಿರುವ ಪ್ರೇಯಸಿ ದೀಪ್ತಿ ಸುನೈನಾ ಬಗ್ಗೆ ಶಾನು ಈವರೆಗೂ ಒಂದು ಮಾತನ್ನು ಹೇಳಿಲ್ಲ. ದೀಪ್ತಿ ಅಷ್ಟೊಂದು ಬೆಂಬಲ ನೀಡಿದರೂ ಆಕೆಯ ಬಗ್ಗೆ ಒಂದು ಮಾತನ್ನು ಹೇಳದಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ. ಬಿಗ್ ಬಾಸ್ ಗೆ ಹೋದ ಬಳಿಕ ದೀಪ್ತಿಯನ್ನು ಶಾನು ನಿರ್ಲಕ್ಷಿಸುತ್ತಿರುವಂತೆ ಕಾಣುತ್ತಿದೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಶಾನು ಹಾಗೂ ದೀಪ್ತಿ ನಡುವೆ ಬ್ರೇಕಪ್ ಆಗಿದೆ ಎಂಬ ವಿಚಾರ ಈ ಹಿಂದೆಯೇ ಬೆಳಕಿಗೆ ಬಂದಿತ್ತು. ಬಿಗ್ಬಾಸ್ನಲ್ಲಿ ಶಾನು ಕ್ಯಾಪ್ಟನ್ ಆದ ಬಳಿಕ ನಡೆದ ಎಪಿಸೋಡ್ನಲ್ಲಿ ಮತ್ತೋರ್ವ ಸ್ಪರ್ಧಿ ಸಿರಿ, ಶಾನು ಹಣೆಗೆ ಮುತ್ತಿಟ್ಟಿದ್ದರು. ಅಲ್ಲದೆ, ಒಂದು ರಾತ್ರಿ ಇಬ್ಬರು ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾಗ ಸಿರಿ, ಶಾನು ಎದೆಯ ಮೇಲೆ ಮಲಗಿದ್ದರು. ಇದು ಅವರಿಬ್ಬರ ನಡುವೆ ಭಾರೀ ಸಲುಗೆ ಇರುವಂತೆ ತೋರುತ್ತಿತ್ತು. ಇದನ್ನು ನೋಡಿರುವ ದೀಪ್ತಿ ಬಹಳ ಕೋಪಗೊಂಡಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು.
ಶಾನು ಹಾಗೂ ಸಿರಿ ತುಂಬಾ ಸಲುಗೆಯಿಂದ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ದೀಪ್ತಿಗೆ ಬೇಸರ ತರಿಸಿದೆ. ಆದ್ದರಿಂದ ದೀಪ್ತಿ ತನ್ನ ಇನ್ಸ್ಟಾಗ್ರಾಂ ಫಾಲೋವರ್ಸ್ ಲೀಸ್ಟ್ನಿಂದ ಶಾನುವನ್ನು ಅನ್ ಫಾಲೋ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ. ಆದರೆ, ಇದೀಗ ಶಾನು ಮತ್ತು ದೀಪ್ತಿ ಅಂತರ ಕಾಯ್ದುಕೊಂಡಿರುವುದನ್ನು ನೋಡಿದರೆ ಅನುಮಾನ ಈ ಎಲ್ಲಾ ವಿಚಾರಗಳು ದಿಟವೆಂದು ಅನ್ನಿಸಲು ತೊಡಗಿದೆ.