
ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಿ ಅಶ್ಲೀಲ ಚಿತ್ರ ರವಾನೆ: ದುಷ್ಕೃತ್ಯದ ವಿರುದ್ಧ ಠಾಣೆ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ
Wednesday, December 15, 2021
ಬೆಂಗಳೂರು: ತನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಅಶ್ಲೀಲ ಸಂದೇಶ ರವಾನಿಸಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕಿ ಬಿಂದುಗೌಡ ಬೆಂಗಳೂರು ದಕ್ಷಿಣ ವಿಭಾಗದ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಿಂದು ಗೌಡ, ದಾಖಲೆ ಸಹಿತವಾಗಿ ದೂರು ದಾಖಲಿಸಿದ್ದಾರೆ. ಅವರು ನೀಡಿರುವ ದೂರಿನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಫೇಸ್‌ಬುಕ್ ಖಾತೆ ಹ್ಯಾಕಿಂಗ್ ಕುರಿತು ಪ್ರತಿಕ್ರಿಯಿಸಿರು ಬಿಂದುಗೌಡ, ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿಯೇ ತನ್ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ.
ನನ್ನ ಫೇಸ್‌ಬುಕ್ ಖಾತೆಯಲ್ಲಿ ಐವತ್ತು ಸಾವಿರಕ್ಕೂ ಅಧಿಕ ಸಕ್ರಿಯ ನೋಡಗರಿದ್ದಾರೆ. ಸಮಾಜಮುಖಿ ಚಟುವಟಿಕೆಗಳ ಕುರಿತು ಹಾಗೂ ಬಿಜೆಪಿ ಆಡಳಿತ ನೀತಿಗಳ ವಿರುದ್ಧ ಧ್ವನಿಗೂಡಿಸುವ ಸಂದೇಶಗಳನ್ನು ಹಾಕುತ್ತಿದ್ದೇನೆ. ಇದಕ್ಕಾಗಿಯೇ ಹ್ಯಾಕ್ ಮಾಡಿರಬಹುದು ಎನ್ನುವ ಶಂಕೆಯೂ ಇದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಲಾಗುವುದು ಎಂದು ಬಿಂದು ಗೌಡ ತಿಳಿಸಿದ್ದಾರೆ.