ವಿಮಾನದಲ್ಲಿ ಬಂದು ಕಳವುಗೈದು ವಿಮಾನದಲ್ಲಿಯೇ ಹೋದ: ಮಾಲಕನ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃತ್ಯ ಎಸಗಿದ! ಮಾಜಿ ನೌಕರ
Monday, December 20, 2021
ಬೆಂಗಳೂರು: ಐದು ವರ್ಷಗಳ ಹಿಂದೆ ಕಳವುಗೈದು ಸಿಕ್ಕಿಕೊಂಡಿದ್ದ ಕೆಲಸಗಾರನೊಬ್ಬ ಮತ್ತೆ ಕಳವು ಮಾಡಿ ಮಾಲಕನ ವಿರುದ್ಧ ಸೇಡು ತೀರಿಸಿಕೊಂಡಿದ್ದಾನೆ. ವಿಶೇಷವೆಂದರೆ, ಈ ಕಳವು ಕೃತ್ಯ ಎಸಗಲು ಆತ ವಿಮಾನದಲ್ಲಿಯೇ ಬಂದು ವಿಮಾನದಲ್ಲೇ ವಾಪಸ್ ಹೋಗಿದ್ದಾನೆ.
ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯ ರಾಮ್ದೇವ್ ವಸ್ತ್ರ ಮಳಿಗೆಯಲ್ಲಿ ಈ ಕಳವು ಪ್ರಕರಣ ನಡೆದಿದೆ. ಕಳವು ಮಾಡಿದ್ದಾತ ರಾಜಸ್ಥಾನ ಮೂಲದವನಾಗಿದ್ದು, ಇದಕ್ಕಾಗಿ ಆತ ವಿಮಾನದಲ್ಲಿ ಬೆಂಗಳೂರಿಗೆ ಬಂದು ವಿಮಾನದಲ್ಲಿಯೇ
ಕಳವು ಆರೋಪಿ ಐದು ವರ್ಷಗಳ ಹಿಂದೆ ಈತ ಇದೇ ರಾಮ್ದೇವ್ ವಸ್ತ್ರ ಮಳಿಗೆಯಲ್ಲಿ ನೌಕರನಾಗಿದ್ದ. ಈ ಸಂದರ್ಭ ಆತ ಕಳವುಗೈದು ಸಿಕ್ಕಿಹಾಕಿಕೊಂಡಿದ್ದ. ಬಳಿಕ ಆತ ಕೆಲಸ ಬಿಟ್ಟು ಹೋಗಿದ್ದ. ಆದರೆ ಕಳವುಗೈದು ಸಿಕ್ಕಿಹಾಕಿಕೊಂಡಿದ್ದರಿಂದ ಅಂಗಡಿ ಮಾಲಕನ ವಿರುದ್ಧ ದ್ವೇಷ ಬೆಳೆಸಿಕೊಂಡಿದ್ದ. ಆದ್ದರಿಂದ ಕೆಲಸ ಬಿಟ್ಟ ಬಳಿಕವೂ ಆಗಾಗ ವಸ್ತ್ರ ಮಳಿಗೆ ಬಳಿಗೆ ಬಂದು ಗಮನಿಸಿ ಹೋಗಿದ್ದ ಎನ್ನಲಾಗಿದೆ.
ಕಳೆದ ವಾರ ಮಳಿಗೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆರೋಪಿ ವಸ್ತ್ರ ಮಳಿಗೆಗೆ ನುಗ್ಗಿ ಡ್ರಾಯರ್ನಲ್ಲಿದ್ದ 2 ಲಕ್ಷ ರೂ. ಕದ್ದುಕೊಂಡು ಹೋಗಿದ್ದಾನೆ. ಕೃತ್ಯ ಎಸಗಲೆಂದು ಆತ ರಾಜಸ್ಥಾನದಿಂದ ವಿಮಾನದಲ್ಲಿ ಬಂದಿದ್ದ ಎನ್ನಲಾಗಿದೆ.
ಈ ಬಗ್ಗೆ ಅಂಗಡಿ ಮಾಲಕ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.