
ಮಂಗಳೂರು: ಗಾಂಜಾ ಸಾಗಾಟದ ವಿದ್ಯಾರ್ಥಿಗಳಿಬ್ಬರು ಅಂದರ್
Tuesday, December 14, 2021
ಉಳ್ಳಾಲ: ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರೆಂಬ ಆರೋಪದಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಬಗಂಬಿಲ ಎಂಬಲ್ಲಿ ನಡೆದಿದೆ. ಬಂಧಿತರಿಂದ 220 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಕೇರಳ ರಾಜ್ಯದ ತ್ರಿಶ್ಶೂರ್ ನ ಆದರ್ಶ್ ಜ್ಯೋತಿ( 22), ಕೇರಳ ರಾಜ್ಯದ ಕೊಟ್ಟಾಯಂನ ಯೋಯಾಲ್ ಜಾಯ್ಸ್ (22) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಬ್ಬರೂ ನಗರದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದರು. ಆದರ್ಶ ಜ್ಯೋತಿ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿದ್ದರೆ, ಯೋಯಲ್ ಜಾಯ್ಸ್ ನಾಲ್ಕನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾನೆ.
ಇವರಿಬ್ಬರು ಸ್ಕೂಟರ್ ನಲ್ಲಿ 220 ಗ್ರಾಂ ಗಾಂಜಾವನ್ನು ಸಾಗಾಟ ಮಾಡುತ್ತಿದ್ದರು. ಅನುಮಾನಗೊಂಡ ಪೊಲೀಸರು ನಗರದ ಬಗಂಬಿಲದ ಬಳಿ ಇವರನ್ನು ತಪಾಸಣೆ ನಡೆಸಿದ ಗಾಂಜಾದೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ತಕ್ಷಣ ಪೊಲೀಸರು ಇಬ್ಬರನ್ನೂ ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.