-->
ಮತ್ತೆ ಮುನ್ನೆಲೆಗೆ ಬಂದ ಹೇಮಾಮಾಲಿನಿ ಕೆನ್ನೆ: ನಾನು ನನ್ನ ಕೆನ್ನೆಯನ್ನು ಸುರಕ್ಷಿತವಾಗಿರಿಕೊಳ್ಳುವುದು ಒಳಿತು ಎಂದ ನಟಿ

ಮತ್ತೆ ಮುನ್ನೆಲೆಗೆ ಬಂದ ಹೇಮಾಮಾಲಿನಿ ಕೆನ್ನೆ: ನಾನು ನನ್ನ ಕೆನ್ನೆಯನ್ನು ಸುರಕ್ಷಿತವಾಗಿರಿಕೊಳ್ಳುವುದು ಒಳಿತು ಎಂದ ನಟಿ

ಮುಂಬೈ: ರಾಜಕಾರಣಿಗಳು ಮಾತಿನ ಭರದಲ್ಲಿ ಏನೋನೋ ಹೇಳಿಕೆಗಳನ್ನು ಕೊಡುವುದು ಮಾಮೂಲಿ. ಆ ಬಳಿಕ ವಿರೋಧಗಳು ಬಂದಾಗ ಕ್ಷಮೆ ಯಾಚನೆ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ‌. ಇತ್ತೀಚಿಗೆ ರಾಜ್ಯದ ಮಾಜಿ ಸ್ಪೀಕರ್‌ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದರು. ಅದೇ ರೀತಿ ಇದೀಗ ಮಹಾರಾಷ್ಟ್ರ ಸಚಿವ ಗುಲಾಬ್ ರಾವ್ ಪಾಟೀಲ್ ಹೆದ್ದಾರಿಯನ್ನು ನಟಿ, ಸಂಸದೆ ಹೇಮಾಮಾಲಿನಿ ಕೆನ್ನೆಗೆ ಹೋಲಿಕೆ ಮಾಡಿ ಭಾರಿ ಟೀಕೆಗೆ ಒಳಗಾಗಿದ್ದಾರೆ.

2019ರಲ್ಲಿ ಬಿಹಾರದ ಸಿಎಂ ಆಗಿದ್ದ ಲಾಲೂ ಪ್ರಸಾದ್‌ ಯಾದವ್‌ ಅವರು ಕೂಡ ಅಲ್ಲಿನ ರಸ್ತೆಗಳನ್ನು ಹೇಮಾಮಾಲಿನಿ (73) ಕೆನ್ನೆಗೆ ಹೋಲಿಸಿ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೆ ನಟಿ ಹೇಮಾಮಾಲಿನಿ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರದ ಸಚಿವ ಹಾಗೂ ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಭಾಷಣವೊಂದರಲ್ಲಿ ಮಾತನಾಡುತ್ತಾ "30 ವರ್ಷಗಳಿಂದ ಶಾಸಕನಾಗಿರುವ ನನ್ನ ಕ್ಷೇತ್ರಕ್ಕೆ ಬಂದು ಒಮ್ಮೆ ರಸ್ತೆಗಳನ್ನು ನೋಡಿ. ಅದು ನಟಿ ಹೇಮಾಮಾಲಿನಿ ಕೆನ್ನೆಯಂತೆ ಇಲ್ಲದಿದ್ದಲ್ಲಿ, ನಾನು ರಾಜೀನಾಮೆ ನೀಡುತ್ತೇನೆ" ಎಂದಿದ್ದಾರೆ.

ರಸ್ತೆಗಳನ್ನು ತಮ್ಮ ಕೆನ್ನೆಗೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ನಟಿ ಹೇಮಾ ಮಾಲಿನಿ, ''ಯಾವುದೇ ಮಹಿಳೆಯ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ಈ ಮಾತನ್ನು ಜನಸಾಮಾನ್ಯರು ಹೇಳಿದ್ದರೆ ನಿರ್ಲಕ್ಷಿಸಬಹುದಿತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೋರ್ವನು ಹೇಳಿರುವುದು ಖಂಡನೀಯ. ಈ ಮಾತು ಅವರಿಗೆ ಕ್ಷೋಭೆ ತರುವುದಿಲ್ಲ. ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಹೇಳಿಕೆ ನೀಡಬಾರದು" ಎಂದಿದ್ದಾರೆ. 

ಅಲ್ಲದೆ ಈ ಹೇಳಿಕೆ ನೀಡುವ ಮುನ್ನ ಹೇಮಾಮಾಲಿನಿ ತಿಳಿಹಾಸ್ಯವನ್ನು ಮೂಡಿಸುತ್ತಾ "ನಾನು ನನ್ನ ಕೆನ್ನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ" ಎಂದು ಹೇಳಿದ್ದಾರೆ.

ಸಚಿವ ಗುಲಾಬ್ ರಾವ್ ಹೇಳಿಕೆಗೆ  ಭಾರಿ ಆಕ್ರೋಶ, ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಅವರು, "ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ" ಎಂದು ಕ್ಷಮೆಯಾಚನೆ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article