Kalabhi - "ಕಲಾಭಿ" ಕಲಾ ಸಂಸ್ಥೆಯ ಗೌರವ ಸಲಹೆಗಾರರಾಗಿ ಹಿರಿಯ ರಂಗಕರ್ಮಿ, ಸಾಹಿತಿ ಡಾ. ನಾ. ದಾ. ಶೆಟ್ಟಿ
"ಕಲಾಭಿ" ಕಲಾ ಸಂಸ್ಥೆಯ ಗೌರವ ಸಲಹೆಗಾರರಾಗಿ ಹಿರಿಯ ರಂಗಕರ್ಮಿ, ಸಾಹಿತಿ ಡಾ. ನಾ. ದಾ. ಶೆಟ್ಟಿ
"ಕಲೆಗಾಗಿ ಕಲಾವಿದ.. ಕಲಾವಿದನಿಗಾಗಿ ಕಲೆ" ಎನ್ನುವ ಧ್ಯೇಯ ವಾಕ್ಯದೊಂದಿಗೆ ಅಸ್ತಿತ್ವಕ್ಕೆ ಬಂದ ಕಲಾಸಂಸ್ಥೆ "ಕಲಾಭಿ"ಯ ಗೌರವ ಸಲಹೆಗಾರರಾಗಿ ಹಿರಿಯ ರಂಗಕರ್ಮಿ, ಸಾಹಿತಿ, ವಿಮರ್ಶಕ ಡಾ. ನಾ.ದಾ. ಶೆಟ್ಟಿ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.
ರಮೇಶ್ಚಂದ್ರ ಗೌರವಾಧ್ಯಕ್ಷರಾಗಿ ಆಯ್ಕೆಯಾದರೆ, ಸುರೇಶ್ ವರ್ಕಾಡಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಡಾ. ಮೀನಾಕ್ಷಿ ರಾಮಚಂದ್ರ ಉಪಾಧ್ಯಕ್ಷರಾಗಿ, ಶ್ರೀಮತಿ ರತ್ನಾವತಿ ಬೈಕಾಡಿ ಹಾಗೂ ಶ್ರೀ ಸುಮನ್ ಕದ್ರಿ , ಕಾರ್ಯದರ್ಶಿಯಾಗಿ ಶ್ರೀ ಉಜ್ವಲ್ ಯು.ವಿ. ಜತೆ ಕಾರ್ಯದರ್ಶಿಗಳಾಗಿ ಶ್ರೀ ರವಿರಾಜ್ ಮತ್ತು ಶ್ರೀ ಸುಜಿತ್ ಕುಡ್ವ , ಕೋಶಾಧಿಕಾರಿಯಾಗಿ ರಚನಾ ಆಚಾರ್ಯ,
ಸದಸ್ಯರಾಗಿ ಶ್ರೀ ಕಿರಣ್ ಕಲಾಂಜಲಿ, ವಿದುಷಿ ಲಾವಣ್ಯ ಸುಧಾಕರ್, ಶ್ರೀಮತಿ ಸವಿತಾ ಜೀವನ್, ಶಿಶಿರ್ ಜಿ ಶೆಟ್ಟಿ, ಐಸಿರಿ ಪಿ.ಕೆ, ಪೋಷಕ ಅಧ್ಯಕ್ಷರಾಗಿ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಕುಮಾರ್ , ಕಲಾಭಿಯ ಪ್ರೊಡಕ್ಷನ್ ಮೇನೇಜರ್ ಆಗಿ ಸಂಕೇತ್ ಉದಯಕುಮಾರ್, ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ಸುಕೇಶ್ ಕೃಷ್ಣ, ಅಕ್ಷಯ್ ಎನ್. ಶೆಟ್ಟಿ., ವಿಷಯ ಬರಹಗಾರರಾಗಿ ಶ್ರೀನಿಧಿ ಶೆಟ್ಟಿ ಹಾಗೂ ಅಥಿಕ್ ಪೂಜಾರಿ, ಕಲಾಭಿ ಥಿಯೇಟರ್ ಮೇನೇಜರ್ ಆಗಿ ಕಲಾವಿದೆ ತೃಷಾ ಶೆಟ್ಟಿ ಆಯ್ಕೆಯಾದರು.
ಮಂಗಳೂರಿನ ಮಾಲೇಮಾರ್‌ನಲ್ಲಿ ಇರುವ "ಕಲಾಭಿ" ಕಚೇರಿಯಲ್ಲಿ ನಡೆದ 'ಕಲಾಭಿ' ಕಲಾ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಕಲಾಭಿಯಿಂದ ನೂತನ ಪ್ರಯೋಗದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಗಣೇಶ ಮಂದಾರ್ತಿಯವರ ನಿರ್ದೇಶನದ ಬಹುನಿರೀಕ್ಷಿತ "ಮಮತೆಯ ಸುಳಿ" ಅತಿ ಶೀಘ್ರದಲ್ಲೇ ರಂಗದ ಮೇಲೆ ಪ್ರದರ್ಶನ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕಲಾಭಿಯ ಸ್ಥಾಪಕ ಪೋಷಕರಾದ ಶ್ರೀ ಉಮೇಶ್ ಹಾಗೂ ಶ್ರೀಮತಿ ವೇದಾವತಿ ಉಮೇಶ್ ರವರು ಉಪಸ್ಥಿತರಿದ್ದರು.
ಲಾವಣ್ಯ ಸುಧಾಕರ್ ರವರು ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಿದರು. ಶ್ರೀ ಸುಜಿತ್ ರವರು "ಕಲಾಭಿ" ನಡೆದುಬಂದ ದಾರಿಯನ್ನು ಹಾಗೂ ಕೋವಿಡ್ ಕಾಲದಲ್ಲಿ ಕಲಾಕ್ಷೇತ್ರಕ್ಕೆ ಅಂತರ್ಜಾಲದ ಮೂಲಕವಾಗಿ 'ಕಲಾಭಿ ತಂಡ' ನೀಡಿದ ಕೊಡುಗೆಗಳನ್ನು ಕುರಿತು ಸುದೀರ್ಘವಾಗಿ ವಿವರಿಸಿದರು. ಶ್ರೀ ಉಜ್ವಲ್ ಯು.ವಿ.( ನೀನಾಸಂ) ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿದರು.
ಶ್ರೀ ಸುಮನ್ ಕದ್ರಿಯವರು ಧನ್ಯವಾದ ಸಮರ್ಪಿಸಿದರು.