-->
ಮನೆಯಿಂದ ಓಡಿ ಹೋಗಿ ವಿವಾಹವಾದ ಜೋಡಿಗೆ ಕುಟುಂಬದವರಿಂದ ಎದುರಾಯ್ತು ಆತಂಕ: ಪೊಲೀಸ್ ಠಾಣೆಯ ಕದ ತಟ್ಟಿದ ನವದಂಪತಿ‌

ಮನೆಯಿಂದ ಓಡಿ ಹೋಗಿ ವಿವಾಹವಾದ ಜೋಡಿಗೆ ಕುಟುಂಬದವರಿಂದ ಎದುರಾಯ್ತು ಆತಂಕ: ಪೊಲೀಸ್ ಠಾಣೆಯ ಕದ ತಟ್ಟಿದ ನವದಂಪತಿ‌

ಮದನಪಲ್ಲಿ: ಪ್ರೀತಿಸುತ್ತಿದ್ದ ಜೋಡಿಯೊಂದು ಮನೆಯವರಿಗೆ ಹೇಳದೆ ಕೇಳದೆ ಓಡಿಹೋಗಿ ಮದುವೆಯಾಗಿತ್ತು. ಇದೀಗ ಬೆದರಿಕೆಯನ್ನೊಡ್ಡುತ್ತಿರುವ ಮನೆಯವರಿಗೆ ಹೆದರಿ ಪ್ರೇಮಿಗಳಿಬ್ಬರು ರಕ್ಷಣೆಯನ್ನು ಕೋರಿ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ. 

ಮದನಪಲ್ಲಿ ಪಟ್ಟಣದ ಕಿರಣ್​ (23) ಹಾಗೂ ಮದನಪಲ್ಲಿ ಗ್ರಾಮೀಣ ಭಾಗದ ಕುಸುಮಾ (22) ವಿವಾಹವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರೇಮಿಗಳು. 

ಕಿರಣ್ ಹಾಗೂ ಕುಸುಮಾ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದರು. ಇಬ್ಬರೂ ಪ್ರೀತಿಸುತ್ತಿದ್ದ ಬಗ್ಗೆ ಎರಡೂ ಕುಟುಂಬಗಳಿಗೆ ತಿಳಿದಿತ್ತು. ಆದರೆ, ವಿವಾಹಕ್ಕೆ ಎರಡೂ ಕುಟುಂಬದಿಂದಲೂ ಒಪ್ಪಿಗೆ ಇರಲಿಲ್ಲ. 

ಈ ಹಿನ್ನೆಲೆಯಲ್ಲಿ ಸೋಮವಾರ ಮನೆ ಬಿಟ್ಟು ಓಡಿ ಹೋದ ಪ್ರೇಮಿಗಳಿಬ್ಬರು ಮದುವೆ ಆಗಿದ್ದಾರೆ. ಇದೀಗ ಪಾಲಕರ ವಿರೋಧದ ನಡುವೆ ನಾವಿಬ್ಬರೂ ಮದುವೆ ಆಗಿದ್ದೇವೆ. 

ಇದೀಗ ತಮಗೆ ಮನೆಯವರಿಂದ ಬೆದರಿಕೆ ಇದೆ ಎಂದು ನವದಂಪತಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ. ಆದರೆ, ಎಸ್​ಪಿ ಕಚೇರಿಯ ಸಿಬ್ಬಂದಿ ಡಿಎಸ್​ಪಿ ಕಚೇರಿಗೆ ಹೋಗುವಂತೆ ಪ್ರೇಮಿಗಳಿಗೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article