ಪತಿ ರಾಜ್ ಕುಂದ್ರಾ, ಮಕ್ಕಳ ಜೊತೆಗೆ ಮಸ್ಸೂರಿಗೆ ಶಿಲ್ಪಾ ಶೆಟ್ಟಿ ಜಾಲಿ ಟ್ರಿಪ್: ಫೋಟೋ ವೈರಲ್
Tuesday, December 28, 2021
ಮುಂಬೈ: ಶಿಲ್ಪಾ ಶೆಟ್ಟಿ ಪತಿ , ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ವೀಡಿಯೋ ನಿರ್ಮಾಣ ಪ್ರಕರಣದಲ್ಲಿ ತಿಂಗಳುಗಳ ಕಾಲ ಜೈಲಿನಲ್ಲಿದ್ದು, ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಪತಿ ಬಂಧವಾದ ಬಗ್ಗೆ ಆರಂಭದಲ್ಲಿ ಶಿಲ್ಪಾ ಶೆಟ್ಟಿ ಬಹಳ ತುಂಬಾ ದುಃಖದಲ್ಲಿದ್ದರೂ ಬಳಿಕ ಸಹಜ ಜೀವನಕ್ಕೆ ಮರಳಿ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಶುರುಮಾಡಿದ್ದರು. ಇದೇ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧವೂ ಆರೋಪ ಕೇಳಿ ಬಂದಿದೆಯಾದರೂ ನಟಿ ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಂತೆ ತೋರಿಸಿಕೊಳ್ಳುತ್ತಿಲ್ಲ .
ಸದ್ಯ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ಮಕ್ಕಳಾದ ವಿಯಾನ್, ಸಮೀಶಾರೊಂದಿಗೆ ಉತ್ತರಾಖಂಡದ ಮನ್ಸೂರಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ಒಂದಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಅವರು ಶೇರ್ ಮಾಡಿಕೊಂಡಿರುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
ಫೋಟೋಗೆ ಬರಹವೊಂದನ್ನು ಪೋಸ್ಟ್ ಮಾಡಿರುವ ಅವರು, ತಪ್ಪು ಮಾಡೋದು ಸಹಜ ಎಂಬಂತೆ ತಮ್ಮ ಕ್ಯಾಪ್ಷನ್ ನೀಡಿದ್ದಾರೆ. ತಪ್ಪುಗಳನ್ನು ಮಾಡುವ ಬಗ್ಗೆ ನಟ ತಲ್ಲುಲಾ ಬ್ಯಾಂಕ್‌ಹೆಡ್ ಅವರ ಉಲ್ಲೇಖವನ್ನು ಹೊಂದಿರುವ ಪುಸ್ತಕದ ಫೋಟೋವನ್ನು ಶಿಲ್ಪಾ ತಮ್ಮ ಒಂದು ಪೋಸ್ಟ್ ಜೊತೆಗೆ ಹಂಚಿಕೊಂಡಿದ್ದಾರೆ. ಪತಿ ರಾಜ್ ಕುಂದ್ರಾ ಜಾಮೀನಿನ ಮೇಲೆ ಬಿಡುಗಡೆಯಾದ ತಿಂಗಳುಗಳ ಬಳಿಕ ಕ್ರಿಸ್‌ಮಸ್ ದಿನದಂದು ಶಿಲ್ಪಾ ಪತಿಯೊಂದಿಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು.
ಶಿಲ್ಪಾ ಕೊನೆಯದಾಗಿ 'ಹಂಗಾಮಾ - 2' ಸಿನಿಮಾದಲ್ಲಿ ಮೀಜಾನ್ , ಪ್ರಣೀತಾ ಸುಭಾಷ್ ಮತ್ತು ಪರೇಶ್ ರಾವಲ್ ಜತೆ ಕಾಣಿಸಿಕೊಂಡಿದ್ದರು. ಮುಂದೆ 'ನಿಕಮ್ಮ' ಸಿನಿಮಾದಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ.