ಮಂಗಳೂರು ಉಡುಪಿ ಬಸ್ ನಲ್ಲಿ ಅನ್ಯಮತೀಯ ಜೋಡಿ- ಕೆರಳಿದ ಯುವಕರಿಂದ ಅನೈತಿಕ ಪೊಲೀಸ್ ಗಿರಿ
Friday, December 10, 2021
ಮಂಗಳೂರು; ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ನಲ್ಲಿ ಇದ್ದ ಅನ್ಯಮತೀಯ ಜೋಡಿಯ ಮೇಲೆ ಯುವಕರ ತಂಡವೊಂದು ಅನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಈ ಜೋಡಿ ಬಸ್ ನಲ್ಲಿ ಕಿಸ್ಸಿಂಗ್ ಮಾಡುತ್ತಿದ್ದರು ಎಂದು ಯುವಕರು ಮಾತನಾಡುತ್ತಿರುವುದು ಕೇಳುತ್ತಿದೆ. ಈ ಜೋಡಿ ಉಡುಪಿ ಯಿಂದ ಮಂಗಳೂರಿಗೆ ಬರುವ ಬಸ್ ನಲ್ಲಿ ಬಂದಿದ್ದು ಬಸ್ ನಿಲ್ದಾಣದಲ್ಲಿ ಬಸ್ ನಲ್ಲಿ ಯುವಕರ ತಂಡ ತಡೆದಿದೆ.
ಬಳಿಕ ಬಸ್ ನಿಂದ ಕೆಳಗಿಳಿಸಿ ನಿಂದಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪೊಲೀಸರು ಈ ವಿಡಿಯೋ ಪರಿಶೀಲನೆ ನಡೆಸುತ್ತಿದ್ದಾರೆ.