-->
ಮಂಗಳೂರು ಅನ್ಯಕೋಮಿನ ಜೋಡಿಯ ಮೇಲೆ ಅನೈತಿಕ ಪೊಲೀಸ್ ಗಿರಿ: ಬಂಧನಕ್ಕೊಳಗಾದ ನಾಲ್ವರಿವರು

ಮಂಗಳೂರು ಅನ್ಯಕೋಮಿನ ಜೋಡಿಯ ಮೇಲೆ ಅನೈತಿಕ ಪೊಲೀಸ್ ಗಿರಿ: ಬಂಧನಕ್ಕೊಳಗಾದ ನಾಲ್ವರಿವರು

ಮಂಗಳೂರು: ನಗರದಲ್ಲಿ ನಡೆದಿರುವ ಅನ್ಯಕೋಮಿನ ಜೋಡಿಯ ಮೇಲೆ ಬಸ್ ನಿಂದ ಇಳಿಸಿ ಅನೈತಿಕ ಪೊಲೀಸ್ ಗಿರಿ ನಡೆಸಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ರಂಜಿತ್, ರಾಘವೇಂದ್ರ, ಪ್ರಕಾಶ್, ಪವನ್ ಬಂಧಿತರು.

ಈ ಘಟನೆ ನಿನ್ನೆ 10.30 ಸುಮಾರಿಗೆ ನಡೆದಿತ್ತು. ಮಂಗಳೂರು ಸರ್ವೀಸ್ ಬಸ್ ನಿಲ್ದಾಣದಿಂದ ಮಂಗಳೂರು - ಕೊಲ್ಲೂರಿಗೆ ಹೋಗುವ  ಸರ್ವೀಸ್ ಬಸ್ ನಲ್ಲಿ ಅನ್ಯಕೋಮಿನ ವಿದ್ಯಾರ್ಥಿ ಜೋಡಿಯೊಂದು ಅಸಭ್ಯವಾಗಿ ವರ್ತಿಸುತ್ತಿದೆ ಎಂದು ಪ್ರಯಾಣಿಕರು ಬಸ್ ನಿರ್ವಾಹಕನಲ್ಲಿ ದೂರು ನೀಡಿದ್ದರು‌‌. ಈ ಸಂದರ್ಭ 5-6 ಮಂದಿಯ ತಂಡವು ವಿದ್ಯಾರ್ಥಿ - ವಿದ್ಯಾರ್ಥಿನಿಯನ್ನು ಬಸ್ ನಿಂದ ಇಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ‌. ಅಲ್ಲದೆ ಮತ್ತೆ ಆ ವಿದ್ಯಾರ್ಥಿನಿಯೊಂದಿಗೆ ತಿರುಗಾಡಬಾರದೆಂದು ವಿದ್ಯಾರ್ಥಿಗೆ ಆರೋಪಿಗಳು ಧಮ್ಕಿ ಹಾಕಿದ್ದರು.


ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Ads on article

Advertise in articles 1

advertising articles 2

Advertise under the article