ತಾಯಿಯೊಂದಿಗೆ ಮಗಳ ಮೇಲೂ ಕಣ್ಣು ಹಾಕಿದಾತ ದುರಂತವಾಗಿ ಅಂತ್ಯಗೊಂಡ: ಪ್ರೇಯಸಿ ಸೇರಿ ಮೂವರು ಅರೆಸ್ಟ್
Friday, December 10, 2021
ಕಲಬುರಗಿ: ತನ್ನೊಂದಿಗೆ ಅಕ್ರಮ ಸಂಬಂಧವಿದ್ದ ಪುರುಷನನ್ನು ಮತ್ತೋರ್ವ ಪ್ರಿಯಕರನ ಸಹಕಾರದಿಂದ ಮಹಿಳೆಯೋರ್ವರು ಕೊಲೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಮಲಾಪುರ ತಾಲೂಕಿನ ಬೆಳಕೋಟಾ ಗ್ರಾಮದ ನಿವಾಸಿ, ಲ್ಯಾಬ್ ಟೆಕ್ನಿಶಿಯನ್ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಎಂಬಾತ ಕೊಲೆಯಾದ ದುರ್ದೈವಿ. ಅನಸೂಯಾ, ಶಿವಕುಮಾರ್ ಮತ್ತು ಗೋವಿಂದ್ ಬಂಧಿತ ಕೊಲೆ ಆರೋಪಿಗಳು.
ಕೊಲೆಯಾದ ಸಿದ್ದಪ್ಪನು ಅನಸೂಯ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆ ಬಳಿಕ ಆತ ಅನಸೂಯಾ ಜೊತೆಗೆ ಆಕೆಯ ಮಗಳ ಮೇಲೂ ಕಣ್ಣು ಹಾಕಿದ್ದ. ಮಗಳ ಜೊತೆಗೂ ಸರಸ ಆಡೋದಕ್ಕೆ ಅನಸೂಯಾಗೆ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ.
ಆದ್ದರಿಂದ ಆಕೆ ಸಿದ್ದಪ್ಪನ ಕಾಟ ತಾಳಲಾರದೆ ಆತನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಾಳೆ. ಆದ್ದರಿಂದ ಆಕೆ ತನ್ನ ಮತ್ತೋರ್ವ ಪ್ರಿಯಕರ ಶಿವಕುಮಾರ್ ನೊಂದಿಗೆ ಸೇರಿ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಶಿವಕುಮಾರ್ ಕೊಲೆ ಮಾಡಲೆಂದು 50 ಸಾವಿರ ರೂ. ಕೊಡುತ್ತೇನೆಂದು ಹೇಳಿ ಮತ್ತೋರ್ವ ಆರೋಪಿ ಗೋವಿಂದ್ ಎಂಬುವನನ್ನು ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಅಪರಾಧದಲ್ಲಿ ಭಾಗಿಯಾಗಿರು ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.