
ಆಸ್ಪತ್ರೆಯ ಶೌಚಗೃಹ ಫ್ಲಷ್ ನಲ್ಲಿ ನವಜಾತ ಶಿಶು ಪತ್ತೆ ಪ್ರಕರಣ: ತಾನೇ ಹೆತ್ತ ಕೂಸಿನ ಕತ್ತು ಹಿಸುಕಿದಳೇ ಮಹಾತಾಯಿ
Tuesday, December 7, 2021
ತಂಜಾವೂರು (ತಮಿಳುನಾಡು): ಇಲ್ಲಿನ ತಂಜಾವೂರಿನ ಆಸ್ಪತ್ರೆಯೊಂದರ ಶೌಚಗೃಹದ ಫ್ಲಷ್‌ನಲ್ಲಿ ನವಜಾತ ಶಿಶುವೊಂದರ ಮೃತದೇಹವೊಂದು ದೊರಕಿರುವ ಘಟನೆ ನಡೆದಿತ್ತು. ಇದೀಗ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯದಿಂದ ಶಿಶು ಹಂತಕಿ ಸಿಕ್ಕಿದ್ದಾಳೆ.
ತಂಜಾವೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯೊಂದರ (ಟಿಎಂಸಿಹೆಚ್) ಶೌಚಗೃಹದ ಫ್ಲಷ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ದೂರು ಬಂದಿತ್ತು. ಆದ್ದರಿಂದ ರಿಪೇರಿ ಮಾಡಲು ಬಂದಿದ್ದ ಸಿಬ್ಬಂದಿ ಫ್ಲಷ್‌ನ ಟ್ಯಾಂಕ್ ಬಾಗಿಲು ತೆರೆದಾಗ ಅದರಲ್ಲಿ ಆಗತಾನೇ ಜನಿಸಿದ್ದ ಶಿಶುವಿನ ಮೃತದೇಹವೊಂದು ಸಿಕ್ಕಿತ್ತು. ತೀವ್ರ ನಿಗಾ ಘಟಕದ ಶೌಚಗೃಹದಲ್ಲಿ ಈ ಘಟನೆ ನಡೆದಿತ್ತು. ಈ ಕೃತ್ಯ ಎಸೆದಾಕೆ ಕೊನೆಗೂ ಸಿಕ್ಕಿಬಿದ್ದಿದ್ದು, ಶಿಶುವನ್ನು ಹತ್ಯೆ ಮಾಡಿರೋದು ಮತ್ತಾರೂ ಅಲ್ಲ, ಖುದ್ದು ಹೆತ್ತಾಕೆಯೇ ಈ ಕೃತ್ಯ ಎಸಗಿದ್ದಾಳೆ.
23 ವರ್ಷದ ಪ್ರಿಯದರ್ಶಿನಿ ಎಂಬಾಕೆಯೇ ತಾನೇ ಹೆತ್ತ ಕೂಸನ್ನು ಹತ್ಯೆ ಮಾಡಿರುವಾಕೆ. ಹುಟ್ಟುತ್ತಿದ್ದಂತೆಯೇ ಶಿಶಿವನ್ನು ಹತ್ಯೆ ಮಾಡಿದ್ದಾಳೆ. ಆದರೆ ಮೃತದೇಹವನ್ನು ಎಲ್ಲಿ ಎಸೆಯಬೇಕು ಎಂದು ತಿಳಿಯದಾದಾಗ ಹೋಗಿ ಟಾಯ್ಲೆಟ್‌ನ ಫ್ಲಷ್‌ನಲ್ಲಿ ಹಾಕಿದ್ದಾಳೆ.
ಆದರೆ ಸಿಸಿಟಿವಿ ದೃಶ್ಯದಿಂದ ಕೃತ್ಯದ ಅಸಲಿಯತ್ತು ಬಯಲಾಗಿದೆ. ಅಷ್ಟಕ್ಕೂ ಇಂಥದ್ದೊಂದು ನೀಚ ಕಾರ್ಯಕ್ಕೆ ಆಕೆ ಮುಂದಾಗಿದ್ದೇಕೆಂದರೆ ಅವಳು ಇನ್ನೂ ಅವಿವಾಹಿತೆ. ಅಕ್ರಮ ಸಂಬಂಧ ಹೊಂದಿದ್ದ ಈಕೆ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾಳೆ. ತನ್ನ ಅಕ್ರಮ ಸಂಬಂಧದ ಗುಟ್ಟು ರಟ್ಟಾದಂತೆ ಈ ಕೃತ್ಯ ಎಸದ್ದಾಳೆ ಎನ್ನಲಾಗಿದೆ.
ಇದೀಗ ಪೊಲೀಸರು ಆರೋಪಿತೆಯ ವಿರುದ್ಧ ಸೆಕ್ಷನ್ 318 ಸೇರಿದಂತೆ ಅನೇಕ ಕಲಂಗಳ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಪ್ರಿಯದರ್ಶಿನಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.