
'ಕುಟುಂಬದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ'ವೆಂದ ನಾಗಚೈತನ್ಯ: ಈ ಮಾತು ಸಮಂತಾಗೆ ತಿರುಗೇಟು ಎಂದ ನೆಟ್ಟಿಗರು!
Wednesday, December 15, 2021
ಹೈದರಾಬಾದ್: ನಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ಬಳಿಕ ಅವರಿಬ್ಬರೂ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇಬ್ಬರ ವಿಚ್ಛೇದನದ ವಿಚಾರವು ಈ ಕ್ಷಣದಲ್ಲೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯಗುತ್ತಿಲ್ಲ.
ಈ ಮಧ್ಯೆಯೇ ಇವರಿಬ್ಬರ ನಡುವಿನ ವದಂತಿಗಳು ಹರಿದಾಡುತ್ತಲೇ ಇದೆ. ಆದರೆ ಯಾವುದೇ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದ ಸಮಂತಾ ತಮ್ಮ ಚಿತ್ತವನ್ನು ಸಂಪೂರ್ಣ ಸಿನಿಮಾ ಕಡೆಗೆ ನೆಟ್ಟಿದ್ದಾರೆ. ನಾಗಚೈತನ್ಯ ಕೂಡ ತಮ್ಮ ಫೋಕಸ್ ಅನ್ನು ಸಿನಿಮಾ ಕಡೆಗೆ ಹರಿಸಿದ್ದಾರೆ. ಇದೀಗ ನಾಗಚೈತನ್ಯ ನೀಡಿರುವ ಹೇಳಿಕೆಯೊಂದು ಸಮಂತಾಗೆ ತಿರುಗೇಟು ಕೊಟ್ಟಂತಿದೆ.
ಇತ್ತೀಚೆಗೆ ನಟ ನಾಗಚೈತನ್ಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ಒಂದು ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿನಿಮಾ ಬಗ್ಗೆ ನಿರೂಪಕ ಕೇಳಿರುವ ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ, "ನಾನು ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ಸದಾ ಸಿದ್ಧನಿದ್ದೇನೆ. ಆದರೆ, ನನ್ನ ಕುಟುಂಬದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ನನ್ನ ಕುಟುಂಬಕ್ಕೆ ತೊಂದರೆಯಾಗುವಂತಹ ಕೆಲಸವನ್ನು ನಾನು ಮಾಡುವುದಿಲ್ಲ" ಎಂದು ಹೇಳಿದ್ದಾರೆ.
ಈ ವೈರಲ್ ವೀಡಿಯೋ ಬಗ್ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ನಾಗಚೈತನ್ಯ ಹೇಳಿರುವ ಮಾತನ್ನು ಸಮಂತಾಗೆ ತಳುಕು ಹಾಕಿದ್ದಾರೆ. ಅವರು ಹೇಳಿದ ಮಾತುಗಳೆಲ್ಲಾ ಪರೋಕ್ಷವಾಗಿ ಸಮಂತಾಗೆ ಹೇಳಿದಂತಿದೆ ಎಂದಿದ್ದಾರೆ. ಈ ಹಿಂದೆ ಸಮಂತಾ 'ಫ್ಯಾಮಿಲಿ ಮ್ಯಾನ್' ಸಿನಿಮಾದಲ್ಲಿ ಬಹಳ ಬೋಲ್ಡ್ ಸೀನ್ಗಳಲ್ಲಿ ನಟಿಸಿದ್ದರು. ಇದು ಅಕ್ಕಿನೇನಿ ಕುಟುಂಬಕ್ಕೆ ಮುಜುಗರ ತೊಂದೊಡ್ಡಿತ್ತು ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ನಾಗಚೈತನ್ಯ ಹೇಳಿರುವ ಮಾತುಗಳಿಂದ ಹಳೆಯ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಂತಾಗಿದೆ.