-->
ಅಶ್ಲೀಲ ಜಾಲತಾಣ‌ ಓನ್ಲಿ ಫ್ಯಾನ್ಸ್ ಗೆ ಸಿಇಒ ಹುದ್ದೆಗೆ ಭಾರತೀಯ ಮಹಿಳೆ ನೇಮಕ!

ಅಶ್ಲೀಲ ಜಾಲತಾಣ‌ ಓನ್ಲಿ ಫ್ಯಾನ್ಸ್ ಗೆ ಸಿಇಒ ಹುದ್ದೆಗೆ ಭಾರತೀಯ ಮಹಿಳೆ ನೇಮಕ!

ನವದೆಹಲಿ: ಓನ್ಲಿ ಫ್ಯಾನ್ಸ್​ ಎಂಬ ಕಂಪೆನಿಯು ತನ್ನ ನೂತನ ಸಿಇಒ ಹುದ್ದೆಗೆ ಭಾರತೀಯ ಮೂಲದ ಆಮ್ರಪಾಲಿ ಗ್ಯಾನ್ ಅವರನ್ನು ಆಯ್ಕೆ ಮಾಡಿದೆ. ಕಂಪೆನಿಯ ಸಂಸ್ಥಾಪಕ ಟೀಮ್​ ಸ್ಟೋಕ್ಲಿ ತಮ್ಮ ಇತರೆ ಪ್ರಯತ್ನವನ್ನು ಮುಂದುವರಿಸುವ ಉದ್ದೇಶದಿಂದ ಸಿಇಒ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಮುಂಬೈ ಮೂಲದ ಆಮ್ರಪಾಲಿ ಗ್ಯಾನ್​ ಅವರನ್ನು ಆಯ್ಕೆ ಮಾಡಲಾಗಿದೆ. 

ಆಮ್ರಪಾಲಿಯನ್ನು ಸಿಇಒ ಹುದ್ದೆಗೆ ಘೋಷಣೆ ಮಾಡಿದಾಗಿನಿಂದ ಆಕೆ ಯಾರು? ಆಕೆಯ ಹಿನ್ನೆಲೆ ಏನು? ಹಾಗೂ ಭಾರತಕ್ಕೂ ಅವರಿಗೂ ಇರುವ ಸಂಬಂಧವೇನು? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿವೆ. ಆಮ್ರಪಾಲಿಯವರ ಈ ಹೊಸ ಹುದ್ದೆಯೊಂದಿಗೆ ವಿದೇಶಿ ಕಂಪೆನಿಗಳಲ್ಲಿ ಸಿಇಒ ಸ್ಥಾನವನ್ನು ಅಲಂಕರಿಸಿರುವ ಭಾರತೀಯರು ದೀರ್ಘ ಪಟ್ಟಿಗೆ ಕೂಡ ಸೇರಿಕೊಂಡಿದ್ದಾರೆ. ಸುಂದರ್​ ಪಿಚೈ, ಸತ್ಯ ನಾದೆಲ್ಲ, ಇಂದ್ರಾ ನೂಯಿ, ಅರವಿಂದ್​ ಕೃಷ್ಣ ಮತ್ತು ಇತ್ತೀಚೆಗಷ್ಟೇ ಟ್ವಿಟರ್​ ಸಿಇಒ ಆಗಿ ನೇಮಕವಾದ ಪರಾಗ್​ ಅಗರವಾಲ್​ ಮುಂತಾದವರ ಸಾಲಿಗೆ ಇದೀಗ ಆಮ್ರಪಾಲಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ವಿದೇಶಿ ಕಂಪೆನಿಗಳಲ್ಲಿ ಬಹುತೇಕ ಭಾರತೀಯರದ್ದೇ ಕಾರುಬಾರು​ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 

ಅದರಲ್ಲೂ ಓನ್ಲಿ ಫ್ಯಾನ್ಸ್​ ಎಂಬ ಕಂಪೆನಿಗೆ ಸಿಇಒ ಆಗಿ ಓರ್ವ ಮಹಿಳೆಯನ್ನು ಆಯ್ಕೆ ಮಾಡಿರುವುದು ಹೊಸ ಅಲೆಗೆ ನಾಂದಿಯಾದಂತಾಗಿದೆ. ಏಕೆಂದರೆ ಓನ್ಲಿ ಫ್ಯಾನ್ಸ್​ ಎಂಬುದು ಒಂದು ಸಾಮಾನ್ಯ ಕಂಪೆನಿಯಲ್ಲ. ಅದೊಂದು ಅಶ್ಲೀಲ ಚಿತ್ರ ಹಾಗೂ ವೀಡಿಯೋಗಳ ಜಾಲತಾಣ ಎಂಬುದು ಗಮನಾರ್ಹ ವಿಚಾರ. ಇದು ಚಂದಾದಾರ ಆಧಾರಿತ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಖರೀದಿಸುವ ಜಾಲತಾಣವಾಗಿದೆ. ಈ ಸಾಮಾಜಿಕ ಜಾಲತಾಣವನ್ನು 2016ರಲ್ಲಿ ಲಾಂಚ್​ ಮಾಡಲಾಯಿತು. ಈಗ ಈ ಕಂಪನಿಗೆ ಓರ್ವ ಭಾರತೀಯಳು ಆಯ್ಕೆ ಆಗಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. 

ಹಾಗಾದ್ರೆ ಆಮ್ರಪಾಲಿ ಗ್ಯಾನ್ ಯಾರು ಎಂಬುದು ಮೊದಲು ತಿಳಿಯಬೇಕಾಗಿದೆ. ಈಕೆ​ ಮುಂಬೈ ಮೂಲದವರಾಗಿದ್ದು,  ಹೊರತುಪಡಿಸಿದರೆ, ಆಕೆಯ ವೈಯುಕ್ತಿಕ ದಾಖಲೆಗಳಲ್ಲಿ ದೇಶದ ಬಗ್ಗೆ ಕಡಿಮೆ ಉಲ್ಲೇಖವಿದೆ. ಅವರ ಆರಂಭಿಕ ಮತ್ತು ಉನ್ನತ ಶಿಕ್ಷಣವು ಯುಎಸ್​ನ ಕ್ಯಾಲಿಫೋರ್ನಿಯಾದಲ್ಲಿ ಆಗಿದೆ. ಕ್ಯಾಲಿಫೋರ್ನಿಯಾ ಅವರ ಖಾಯಂ ನಿವಾಸವೂ ಆಗಿದೆ. ಹೀಗಾಗಿ ಆಕೆ ಭಾರತದವಳಾದರೂ ತವರಿನೊಂದಿಗೆ ಸಂಪರ್ಕ ಕಡಿಮೆ ಇಟ್ಟುಕೊಂಡಿದ್ದಾರೆ. ಆಮ್ರಪಾಲಿ ಎಫ್​ಐಡಿಎಂನಿಂದ ಮರ್ಚಂಡೈಸ್ ಮಾರ್ಕೆಟಿಂಗ್‌ನಲ್ಲಿ ಅಸೋಸಿಯೇಟ್ ಆಫ್ ಆರ್ಟ್ಸ್ ಪದವಿ, ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪಿಆರ್​ ಮತ್ತು ಸಾಂಸ್ಥಿಕ ಸಂವಹನದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಆನ್‌ಲೈನ್‌ನಿಂದ ಉದ್ಯಮಶೀಲತೆಯ ಪ್ರಮಾಣಪತ್ರ ಸೇರಿದಂತೆ ಮೂರು ಪದವಿಗಳನ್ನು ಪಡೆದಿದ್ದಾರೆ. 

36 ವರ್ಷ ವಯಸ್ಸಿನ, ಅವಿವಾಹಿತ ಮಹಿಳೆಯಾಗಿರುವ ಆಮ್ರಪಾಲೊ ಗ್ಯಾನ್ ಓನ್ಲಿ ಫ್ಯಾನ್​ ಸಿಇಒ ಮಾತ್ರವಲ್ಲದೆ, ಕಳೆದ 4 ವರ್ಷಗಳಲ್ಲಿ ಆರ್ಕೆಡ್​ ಏಜೆನ್ಸಿಗೆ ಸಮಾಲೋಚಕರಾಗಿಯೂ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅವರ ಲಿಂಕ್​ಡಿನ್​ ಪ್ರೊಫೈಲ್​ ಹೇಳುತ್ತಿದೆ. ಸಿಇಒ ಆಗಿ ಆಯ್ಕೆ ಆಗುವ ಮೊದಲು ಓನ್ಲಿ ಫ್ಯಾನ್ಸ್​ ಕಂಪನಿಯಲ್ಲಿ ಮಾರ್ಕೆಟಿಂಗ್ ಹಾಗಯ ಸಂವಹನ ಅಧಿಕಾರಿಯಾಗಿ 2020ರಿಂದಲೂ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಯುಎಸ್​ನ ಕನ್ನಾಬಿಸ್​ ರೆಸ್ಟೋರೆಂಟ್​ನ ಕೆನ್ನಾಬಿಸ್​ ಕೆಫೆಯಲ್ಲಿ ಮಾರ್ಕೆಟಿಂಗ್​ ಮತ್ತು ಪಬ್ಲಿಷಿಟಿಯ ಉಪಾಧ್ಯಕ್ಷರಾಗಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಲೋವೆಲ್ ಹರ್ಬ್ ಕಂಪನಿಯಲ್ಲಿ ಸಂವಹನ ನಿರ್ದೇಶಕರಾಗಿ ಒಂದು ವರ್ಷಕ್ಕಿಂತ ಕಡಿಮೆ ಕಾಲ ಕೆಲಸ ಮಾಡಿದ್ದಾರೆ. ರೆಡ್​ ಬುಲ್​ ಮೀಡಿಯಾ ಹೌಸ್​ನಲ್ಲಿ ಬ್ರ್ಯಾಂಡ್​ ಆ್ಯಕ್ಟಿವೇಶನ್​ ಮತ್ತು ಕಮ್ಯುನಿಕೇಷನ್​ ಮ್ಯಾನೇಜರ್​ ಆಗಿ ಸುಮಾರು 2 ವರ್ಷ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮುನ್ನ ಕೆಲವು ಸ್ಟಾರ್ಟಪ್ಸ್​ ಕಂಪನಿಗಳಲ್ಲಿ 2008 ರಿಂದ 2016ರವರೆಗೆ ಮಾರ್ಕೆಟಿಂಗ್​ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. 

ಆಮ್ರಪಾಲಿಯವರು ಓನ್ಲಿ ಫ್ಯಾನ್ಸ್​ ಅಕೌಂಟ್​ ಹೊಂದಿದ್ದು, ಅದರಲ್ಲಿ ತಮ್ಮ ವೈಯುಕ್ತಿಕ ಹಾಗೂ ವೃತ್ತಿ ಜೀವನದ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಈ ಖಾತೆ ಹೆಚ್ಚು ಸಕ್ರಿಯವಾಗಿರುವಂತೆ ಕಾಣುತ್ತಿಲ್ಲ. ಸದ್ಯ ಆಕೆ ತಮ್ಮ ಸಂಬಳ ಅಥವಾ ಇನ್ನಿತರ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಓನ್ಲಿ ಫ್ಯಾನ್​ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Ads on article

Advertise in articles 1

advertising articles 2

Advertise under the article