![Puutur: ನೇಣಿಗೆ ಕೊರಳೊಡ್ಡಿದ್ದ ಏಳು ತಿಂಗಳ ಮಗುವಿನ ತಾಯಿ; ಆತ್ಮಹತ್ಯೆಯ ಕಾರಣ ನಿಗೂಢ Puutur: ನೇಣಿಗೆ ಕೊರಳೊಡ್ಡಿದ್ದ ಏಳು ತಿಂಗಳ ಮಗುವಿನ ತಾಯಿ; ಆತ್ಮಹತ್ಯೆಯ ಕಾರಣ ನಿಗೂಢ](https://blogger.googleusercontent.com/img/b/R29vZ2xl/AVvXsEgZmnLLo9ZBBdlx0msDTvIKxSySKUeD-mmbRetPoIW4npxJvGsSNAp2TUq-lYt9zA81406jQ1y-kJmIKoCGyI6qOGJvnX0oajgXJul0mt0Jpi9b4pTi4MB2u3y3taFMZj3bye27jXoDaEKt/s1600/1638505423326429-0.png)
Puutur: ನೇಣಿಗೆ ಕೊರಳೊಡ್ಡಿದ್ದ ಏಳು ತಿಂಗಳ ಮಗುವಿನ ತಾಯಿ; ಆತ್ಮಹತ್ಯೆಯ ಕಾರಣ ನಿಗೂಢ
Friday, December 3, 2021
ಪುತ್ತೂರು: ವಿವಾಹಿತ ಯುವತಿಯೋರ್ವಳು ನೇಣಿಗೆ ಕೊರಳೊಡ್ಡಿರುವ ಘಟನೆ ಪುತ್ತೂರು ತಾಲೂಕಿನ ದಾರಂದಕ್ಕುಕ್ಕು ಎಂಬಲ್ಲಿ ಡಿ.2 ರಂದು ಮಧ್ಯಾಹ್ನ ನಡೆದಿದೆ.
ದಾರಂದಕ್ಕುಕ್ಕು ನಿವಾಸಿ ಹಾಗೂ ಪುತ್ತೂರಿನ ಕಾಮತ್ ಸ್ವೀಟ್ಸ್ ನಲ್ಲಿ ಉದ್ಯೋಗದಲ್ಲಿರುವ ಭಾಸ್ಕರ್ ಪ್ರಭು ಪತ್ನಿ ಆಶಿಕಾ(20) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ.
ಆಶಿಕಾ ವಿವಾಹವು ಎರಡು ವರ್ಷಗಳ ಹಿಂದೆ ನಡದಿದ್ದು, 7 ತಿಂಗಳ ಮಗುವನ್ನು ಹೊಂದಿದ್ದರು.
ಆಕೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಇನ್ನೂ ತಿಳಿದು ಬಂದಿಲ್ಲ. ಆಶಿಕಾ ಸಣ್ಣ ವಯಸ್ಸಿನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು. ವಿವಾಹದ ಬಳಿಕವೂ ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.