![ನಿಮ್ಮ ಈ ಅವತಾರ ನೋಡಿಯೇ ನಾಗಚೈತನ್ಯ ನಿಮ್ಮನ್ನು ತೊರೆದದ್ದು: ಸಮಂತಾ ವಿರುದ್ಧ ನೆಟ್ಟಿಗರು ಗರಂ ನಿಮ್ಮ ಈ ಅವತಾರ ನೋಡಿಯೇ ನಾಗಚೈತನ್ಯ ನಿಮ್ಮನ್ನು ತೊರೆದದ್ದು: ಸಮಂತಾ ವಿರುದ್ಧ ನೆಟ್ಟಿಗರು ಗರಂ](https://blogger.googleusercontent.com/img/b/R29vZ2xl/AVvXsEjPyd2RcI-gDQNEtGum-28tOM9D3q-N4aCtZYCwFwspp4gPMy5x6sEB2f2TZtDZHUDpDmCfgkaBtM8QjI2_ODR368FxBJ-RYmo53tQtNflapD6IpMhjWVrLg7L0rYVCNRTxkkogiDFSmc1X/s1600/1638529261351450-0.png)
ನಿಮ್ಮ ಈ ಅವತಾರ ನೋಡಿಯೇ ನಾಗಚೈತನ್ಯ ನಿಮ್ಮನ್ನು ತೊರೆದದ್ದು: ಸಮಂತಾ ವಿರುದ್ಧ ನೆಟ್ಟಿಗರು ಗರಂ
Friday, December 3, 2021
ಹೈದರಾಬಾದ್: ನಟಿ ಸಮಂತಾ ಎಲಿ ಇಂಡಿಯಾ ಫ್ಯಾಶನ್ ಮ್ಯಾಗಜಿನ್ಗೆ ನೀಡಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ನೋಡಿದ ನೆಟ್ಟಿಗರು ನಿಮ್ಮ ಈ ಅವತಾರವನ್ನೇ ಕಂಡು ನಾಗಚೈತನ್ಯ ನಿಮ್ಮನ್ನು ತೊರೆದದ್ದು ಎಂದು ಸಮಂತಾ ಹಾಟ್ ಫೋಟೋಗೆ ನೆಟ್ಟಿಗರು ಗರಂ ಆಗಿದ್ದಾರೆ.
ನಟ ನಾಗ ಚೈತನ್ಯ ರಿಗೆ ವಿಚ್ಛೇದನ ಘೋಷಣೆ ಮಾಡಿದಂದಿನಿಂದ ನಟಿ ಸಮಂತಾ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ನೆಟ್ಟಿಗರಿಂದ ಅವರು ನೆಗಿಟಿವ್ ವಿಚಾರಗಳಿಗೆ ಪದೇ ಪದೇ ಠೀಕೆಗೊಳಗಾಗುತ್ತಿದ್ದಾರೆ.
ಇದೀಗ ಸಮಂತಾ ತಮ್ಮ ಗಮನವನ್ನು ಸಂಪೂರ್ಣ ಸಿನಿಮಾಗಳ ಕಡೆಗೆ ತೊಡಗಿಸಿದ್ದಾರೆ. ಆದರೂ ನೆಟ್ಟಿಗರು ಅವರ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗೆ ಹಾಕುವ ಪ್ರತೀ ಪೋಸ್ಟ್ಗಳಿಗೆ ಸಿಕ್ಕಾಪಟ್ಟೆ ಕಮೆಂಟ್ಗಳು ಬರುತ್ತಲೇ ಇದೆ.
ಆದರೆ, ಸಮಂತಾ ಮತ್ತೊಮ್ಮೆ ನೆಗೆಟಿವ್ ಕಾಮೆಂಟ್ಗಳ ವಿರುದ್ಧ ಕೆಂಡಕಾರಿದ್ದಾರೆ. ಸಮಂತಾ ಪ್ರತಿದಿನ ಏನಾದರೊಂದು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ಎಲಿ ಇಂಡಿಯಾ ಫ್ಯಾಶನ್ ಮ್ಯಾಗಜಿನ್ಗೆ ನೀಡಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ತಾನು ಯಾವ ಕಮೆಂಟ್ಸ್ ಗಳನ್ನು ಸ್ವೀಕರಿಸುವುದಿಲ್ಲ ಎಂದು ತಮ್ಮ ವಿರುದ್ಧ ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.
ವಿಭಿನ್ನ ಅಭಿಪ್ರಾಯಗಳನ್ನು ಯಾವತ್ತೂ ಗೌರವಿಸುತ್ತೇನೆ. ಆದರೆ, ನಾವು ಯಾವಾಗಲೂ ಪರಸ್ಪರ ದ್ವೇಷಿಸದೇ ಪ್ರೀತಿಯಿಂದ ಕಾಣಬೇಕು. ನಿಮ್ಮ ಹತಾಶೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕುವುದಾದಲ್ಲಿ ಅದನ್ನು ಸ್ವೀಕರಿಸುವ ರೀತಿಯಲ್ಲಿ ಹೊರಹಾಕಿ, ಅದನ್ನು ಬಿಟ್ಟು ಕೆಟ್ಟದಾಗಿ ಕಮೆಂಟ್ಗಳನ್ನು ಮಾಡಬೇಡಿ ಎಂದು ಸಮಂತಾ ನೀತಿ ಪಾಠ ಮಾಡಿದ್ದಾರೆ.
ಸಮಂತಾರ ಈ ಸಂದೇಶದ ಹೊರತಾಗಿಯೂ ಕೆಲವರು ಅವರಿಗೆ ಬಯ್ದು ಕಮೆಂಟ್ ಮಾಡಿದ್ದಾರೆ. ನಿಮ್ಮ ಇಂತಹ ನಡೆಯಿಂದಲೇ ನಾಗಚೈತನ್ಯ ನಿಮ್ಮನ್ನು ಬಿಟ್ಟಿದ್ದು ಎಂದು ಕಿಡಿಕಾರಿದ್ದಾರೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಟೀಕಿಸಿದ್ದಾರೆ. ಆದರೂ, ಇದಕ್ಕೆಲ್ಲ ತಲೆಕಡೆಸಿಕೊಳ್ಳದ ಸಮಂತಾ ತಮ್ಮ ಕೆಲಸ ಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ.