-->
ನಟಿ ಸಮಂತಾ ವಿಚ್ಛೇದನದ ಬಳಿಕ ಭಾರೀ ಸಂತೋಷದಲ್ಲಿದ್ದಾರೆಂದು ನೆಟ್ಟಿಗರು ಹೇಳಿದ್ದೇಕೆ ಗೊತ್ತೇ?

ನಟಿ ಸಮಂತಾ ವಿಚ್ಛೇದನದ ಬಳಿಕ ಭಾರೀ ಸಂತೋಷದಲ್ಲಿದ್ದಾರೆಂದು ನೆಟ್ಟಿಗರು ಹೇಳಿದ್ದೇಕೆ ಗೊತ್ತೇ?


ಗೋವಾ: ಸದ್ಯ 'ಪುಷ್ಪಾ' ಸಿನಿಮಾದ ಐಟಂ ಸಾಂಗ್ ನ ಯಶಸ್ಸಿನಿಂದ ತೇಲುತ್ತಿರುವ ನಟಿ ಸಮಂತಾ ಅಷ್ಟೇ  ಟೀಕೆಯನ್ನು ಎದುರಿಸುತ್ತಿದ್ದಾರೆ. ಅದೆಲ್ಲವನ್ನೂ ಮರೆತು ಅವರೀಗ ಗೋವಾದಲ್ಲಿ 2021 ರ ಕೊನೆಯ ಪಾರ್ಟಿ ಎಂಜಾಯ್ ಮಾಡುತ್ತಿದ್ದಾರೆ. ಈ ಮೂಲಕ ಅವರು 2022ರನ್ನು ಸಂತೋಷದಿಂದ ಸ್ವಾಗತಿಸಲು ಸನ್ನದ್ಧರಾಗಿದ್ದಾರೆ. 


ನಟಿ ಸಮಂತಾ ತನ್ನ ಸ್ನೇಹಿತೆಯರಾದ ಡಿಸೈನರ್ ಶಿಲ್ಪಾ ರೆಡ್ಡಿ ಮತ್ತು ವಾಸುಮ ಸುಂಕವಲ್ಲಿರೊಂದಿಗೆ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಅವರು ಎಂಜಾಯ್ ಮಾಡುತ್ತಿರುವ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ರಜೆಯ ದಿನಗಳನ್ನು ಯಾವ ರೀತಿ ಎಂಜಾಯ್ ಮಾಡುತ್ತಿದ್ದಾರೆ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. 

ಸಮಂತಾ ಹಂಚಿಕೊಂಡ ಫೋಟೊವೊಂದರಲ್ಲಿ ಅವರು ಮುದ್ರಿತ ಮೊನೊಕಿನಿ ಸ್ಟೈಲ್‌ನ ಬಿಕಿನಿ ಧರಿಸಿದ್ದಾರೆ. ಆ ಫೋಟೋದಲ್ಲಿನ ಅವರ ನಗುವೇ ಅವರೆಷ್ಟು ಸಂತೋಷದಿಂದಿದ್ದಾರೆ ಎಂದು ಹೇಳುತ್ತದೆ. ಇನ್ನೊಂದು ಚಿತ್ರದಲ್ಲಿ ಸಮಂತಾ ತಮ್ಮ ಸ್ನೇಹಿತರೊಂದಿಗೆ ಬೀಚ್‌ನಲ್ಲಿ ಆಡುತ್ತಿದ್ದಾರೆ. ಸದ್ಯ, ಅವರ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಕಮೆಂಟ್ ಮಾಡುತ್ತಿರುವ ನೆಟ್ಟಿಗರು ನಟಿ ಸಮಂತಾ ವಿಚ್ಛೇದನದ ಬಳಿಕ ಜೀವನದಲ್ಲಿ ಬಹಳ ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article