
ಯುವತಿಯೊಂದಿಗೆ ಕಾರಿನಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾನೆಂದು ಪತಿಯ ವಿರುದ್ಧ ಠಾಣೆಯ ಮೆಟ್ಟಿಲೇರಿದ ಪತ್ನಿ: ಮುಂದೇನಾಯ್ತು ಗೊತ್ತೇ?
Wednesday, December 15, 2021
ಬೆಂಗಳೂರು: ಸಹೋದ್ಯೋಗಿ ಯುವತಿಯೊಂದಿಗೆ ಕಾರಿನಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ವೇಳೆ ಪತಿ ರೆಡ್ಹ್ಯಾಂಡ್ ಆಗಿ ನನ್ನ ಕೈಗೆ ಸಿಕ್ಕಿಬಿದ್ದಾನೆಂದು ಆತನ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.
ವಿವಾಹವಾದ ಆರಂಭದಲ್ಲಿ ಪತಿ ನಮ್ಮ ದಾಂಪತ್ಯ ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಪತಿ ತನ್ನೊಂದಿಗೆ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದರು. ಪರಿಣಾಮ ತನಗೆ ಈ ಬಗ್ಗೆ ಅನುಮಾನ ಬಂದಿತ್ತು.
ಆದ್ದರಿಂದ ಪತಿಯ ಸ್ನೇಹಿತರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ವೃತ್ತಿ ನಿರ್ವಹಿಸುತ್ತಿದ್ದ ಕಂಪೆನಿಯ ಸಹೋದ್ಯೋಗಿ ಯುವತಿಯೊಂದಿಗೆ ಸಲುಗೆ ಬೆಳೆಸಿರುವುದು ತಿಳಿದು ಬಂದಿತ್ತು. ಆದ್ದರಿಂದ ಡಿ.6ರಂದು ರಾತ್ರಿ ಪತಿಯ ಗಮನಕ್ಕೆ ಬಾರದ ರೀತಿಯಲ್ಲಿ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದೆ. ಆ ವೇಳೆ ನನ್ನ ಪತಿ ಹಲಸೂರಿನ ಹೋಟೆಲೊಂದರಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿರುವುದು ಕಂಡು ಬಂದಿತ್ತು.
ತಾನೂ ಹೋಟೆಲ್ಗೆ ಗ್ರಾಹಕಿಯ ಸೋಗಿನಲ್ಲಿ ತೆರಳಿ ಪತಿಯ ಚಲನವಲನಗಳನ್ನು ಗಮನಿಸುತ್ತಿದ್ದೆ. ಪಾರ್ಟಿ ಮುಗಿದ ಬಳಿಕ ಸ್ನೇಹಿತರನ್ನು ಕಬ್ಬನ್ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಬಿಟ್ಟ ನನ್ನ ಪತಿ, ಬಳಿಕ ಸಹೋದ್ಯೋಗಿ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಮುಂದೆ ಸಾಗಿದ್ದಾನೆ. ರಾಜಭವನ ರಸ್ತೆಯತ್ತ ಹೊರಟು ಮಾರ್ಗಮಧ್ಯೆಯೇ ಕಾರು ನಿಲ್ಲಿಸಿ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಆರಂಭಿಸಿದ್ದಾನೆ. ಅದನ್ನು ಕಂಡು ಆಕ್ರೋಶಿತಳಾಗಿ ಅವರನ್ನು ಪ್ರಶ್ನಿಸಿದ್ದೇನೆ ಎಂದು ಪತ್ನಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಈ ವಿಚಾರವಾಗಿ ಪತಿ-ಪತ್ನಿ ಹಾಗೂ ಪತಿಯ ಸಹೋದ್ಯೋಗಿ ಯುವತಿ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಹೋದ್ಯೋಗಿ ಯುವತಿಯೊಂದಿಗೆ ಕಾರಿನಲ್ಲೇ ಲೈಂಗಿಕ್ರಿಯೆ ನಡೆಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆಂದು ಪತಿಯ ವಿರುದ್ಧ ಪತ್ನಿ ದೂರು ಕೊಟ್ಟಿದ್ದಾರೆ. ಪತ್ನಿಯ ವಿರುದ್ಧ ಪತಿಯ ಪ್ರೇಯಸಿ ದೂರು ದಾಖಲಿಸಿದ್ದಾಳೆ. ಪತಿ, ಪತ್ನಿ ಹಾಗೂ ಮತ್ತೋರ್ವಳನ್ನು ಪೊಲೀಸರು ಠಾಣೆಗೆ ಕರೆಸಿ ಹೇಳಿಕೆ ಪಡೆದು, ಬುದ್ಧಿ ಮಾತುಗಳನ್ನು ಹೇಳಿ ಬಿಟ್ಟು ಕಳುಹಿಸಿದ್ದಾರೆ.