
Shocking News; ಮಂಗಳೂರಿನಲ್ಲಿ ಇಬ್ಬರು ಮಕ್ಕಳು, ಪತ್ನಿಯನ್ನು ಕೊಂದು ವ್ಯಕ್ತಿ ಆತ್ಮಹತ್ಯೆ
Wednesday, December 8, 2021
ಮಂಗಳೂರು; ನಾಲ್ಕು ವರ್ಷದ ಮಗು ಸೇರಿದಂತೆ ಮೂವರನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಮೋರ್ಗನ್ ಗೇಟ್ ನಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ್ ಗ್ರಾಮದ ನಾಗೇಶ್ ಶೇರಿಗುಪ್ಪ (30), ವಿಜಯಲಕ್ಷ್ಮಿ(26), ಸಪ್ನ (8) ಮತ್ತು ಸಮರ್ಥ್ (4) ಸಾವನ್ನಪ್ಪಿದವರು.
ಇವರು ಮೋರ್ಗನ್ ಗೇಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ನಾಗೇಶ್ ಚಾಲಕನಾಗಿ , ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಘಟನೆ ಗೆ ಕಾರಣ ತಿಳಿದುಬಂದಿಲ್ಲ.