
ದುರ್ನಡತೆ ಹಿನ್ನೆಲೆಯಲ್ಲಿ ಶಾಲೆಯಿಂದ ಡಿಬಾರ್ ಆದ ವಿದ್ಯಾರ್ಥಿಯಿಂದ ಪ್ರಾಂಶುಪಾಲರ ಕೊಲೆಗೆ ಯತ್ನ: ಇದು ನಡೆದದ್ದು, ಭಾರತದಲ್ಲೇ!
Monday, December 6, 2021
ಜೈಪುರ್: ದುರ್ನಡತೆ ಹೊಂದಿದ್ದನೆಂದು ಬಾಲಕನೋರ್ವನನ್ನು ಶಾಲೆಯಿಂದ ಡಿಬಾರ್ ಆಗಿರುವ ಕಾರಣಕ್ಕೆ ಆತ ಶಾಲೆಯ ಪ್ರಾಂಶುಪಾಲರನ್ನೇ ಗುಂಡಿಕ್ಕಿ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಸಾಮಾನ್ಯವಾಗಿ ಹೊರದೇಶಗಳಲ್ಲಿ ಇಂಥ ಸುದ್ದಿಗಳು ವರದಿಯಾಗುತ್ತಿತ್ತು. ಇದೀಗ ಭಾರತದಲ್ಲಿಯೇ ಗುಂಡಿಕ್ಕಿ ಕೊಲೆಗೆ ಯತ್ನಿಸಿರುವ ಘಟನೆ ಭಾರತದಲ್ಲಿಯೇ ನಡೆದಿರುವುದು ಎಲ್ಲರನ್ನು ಆತಂಕಕ್ಕೀಡು ಮಾಡಿದೆ.15 ವರ್ಷದ ಬಾಲಕ ಇಂಥದ್ದೊಂದು ಕೃತ್ಯ ಎಸಗಿದ್ದು, ಪ್ರಾಂಶುಪಾಲ ಭಗವಾನ್ ತ್ಯಾಗಿ ಎಂಬವರು ಈತನ ದಾಳಿಗೆ ಒಳಗಾಗಿದ್ದಾರೆ.
ವಿದ್ಯಾರ್ಥಿ 10ನೇ ತರಗತಿಯಲ್ಲಿ ಓದುತ್ತಿದ್ದ. ಆತನ ನಡವಳಿಕೆ ಸರಿಯಿಲ್ಲದ್ದ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಕ್ಕೆ ಹಾಕಲಾಗಿತ್ತು. ಇದಾದ ಬಳಿಕ ಆತ ಏನೇನೋ ನೆಪವೊಡ್ಡಿ ಶಾಲೆಗೆ ಭೇಟಿ ಕೊಡುತ್ತಿದ್ದ. ಈ ವೇಳೆ ಪ್ರಾಂಶುಪಾಲರ ಕೊಠಡಿಗೆ ಹೋಗಿ ಬರುತ್ತಿದ್ದ. ಇದೀಗ ಪಿಸ್ತೂಲ್ ತೆಗೆದುಕೊಂಡು ಹೋಗಿ ಕೊಲೆ ಮಾಡುವ ಯತ್ನ ಮಾಡಿದ್ದಾನೆ.
ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲ ನ್ಯಾಯ ಕಾಯ್ದೆಯಡಿ ಬಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.